ಭಾನುವಾರ, ಆಗಸ್ಟ್ 29, 2021

ಸಾಮಾಜಿಕ ಜೀವನದ ಕೈಗನ್ನಡಿ "ವಸಂತಗಾನ" (ಪುಸ್ತಕ ವಿಮರ್ಶೆ) - ಅಂಜಿನಗೌಡ ಎನ್. (ಅಂಜನ್).

ಸಾಮಾಜಿಕ ಜೀವನದ ಕೈಗನ್ನಡಿ "ವಸಂತಗಾನ"

ಕೃತಿ : ವಸಂತಗಾನ ( ಕವನ ಸಂಕಲನ)
ಕವಯಿತ್ರಿ : ಲತಾಮಣಿ ಎಂ. ಕೆ. ತುರುವೇಕೆರೆ.
ಪ್ರಕಟಣೆ : ಮಾಣಿಕ್ಯ ಪ್ರಕಾಶನ, ಹಾಸನ.
ವರ್ಷ : ೨೦೨೦.
ಪುಟಗಳು : ೧೦೮.
ಮುಖಬೆಲೆ : ೧೨೦/-
ಕೃತಿ ವಿಮರ್ಶೆ : ಶ್ರೀ ಅಂಜಿನಗೌಡ ಎನ್. ಕಾಡನೂರು ಪಾಳ್ಯ, ದೊಡ್ಡ ಬಳ್ಳಾಪುರ.

*****

ಶ್ರೀಮತಿ ಲತಾಮಣಿ ಎಂ ಕೆ ಅವರು ಐತಿಹಾಸಿಕ ಮಹತ್ವವುಳ್ಳ ತುರುವೇಕೆರೆಯಲ್ಲಿ ಹುಟ್ಟಿ ಬೆಳೆದ ಇವರು ಕಲಾ ಪದವೀಧರರು ವೃತ್ತಿಯಲ್ಲಿ ಗುರುಮಾತೆ, ಪ್ರವೃತ್ತಿಯಲ್ಲಿ ಕವಯಿತ್ರಿಯಾಗಿ,ಮತ್ತು ಕನ್ನಡವನ್ನು ಬೆಳೆಸುವ, ಮತ್ತು ಕಟ್ಟುವ ಕಾರ್ಯಕ್ರಮಕ್ಕೆ ಕ್ರಿಯಾಶೀಲರು. ಇವರು ಗೃಹಿಣಿಯಾಗಿದ್ದು. ಮಾದಿಹಳ್ಳಿ ಬದರಿಕಾಶ್ರಮ ವಿದ್ಯಾ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತುರುವೇಕೆರೆ ತಾಲ್ಲೂಕು ಘಟಕದ ಅಧ್ಯಕ್ಷರಾಗಿ, ಕಾರ್ಯ ನಿರ್ವಹಿಸುತ್ತಿದ್ದಾರೆ.
ಲೇಖಕಿಯಾದ ಲತಾಮಣಿಯವರು ಸಾಹಿತ್ಯಾಸಕ್ತರು, ಮತ್ತು ಮಹತ್ವದ ಕೃತಿಗಳ ಅಧ್ಯಯನ ಮಾಡುವುದರ ಜೊತೆಯಲ್ಲಿ, ಕವನ, ಕಥೆ ಲೇಖನ, ನಾಟಕ,ಇತ್ಯಾದಿ ಇನ್ನಿತರ ಪ್ರಕಾರಗಳಲ್ಲಿ ಹಲವಾರು ಸಾಹಿತ್ಯದ ವೇದಿಕೆಗಳಲ್ಲಿ ತನ್ನಲ್ಲಿರುವ ತನ್ನದೇ ಆದ ಅಗಾಧ ಸಾಹಿತ್ಯದ ಅಭಿರುಚಿಯನ್ನು ಹೊರತರುವಲ್ಲಿ ಯಶಸ್ವಿಯಾಗಿ, ಇದೀಗ ಇವರ ಮತ್ತೊಂದು ವಿಮರ್ಶಾ ಸಂಕಲನವಾದ ಕಾವ್ಯಕ್ಕೊಂದು ಕನ್ನಡಿ ಎಂಬ ವಿಮರ್ಶಾ ಸಂಕಲನ ಹೊರತರಲಿದ್ದು, ಈ ಸಂಕಲನವು ಎಲ್ಲ ಕನ್ನಡ ಕವಿ ಮನಸ್ಸುಗಳ ಮನೆ ಮನ ತನವನ್ನು ಮುಟ್ಟಲಿ ಎಂಬ ಆಶಯದೊಂದಿಗೆ, ಇವರು ಬರೆದಿರುವ ಸಂಕಲನಗಳಲ್ಲಿ ಕೆಲವೊಂದನ್ನು ವಿಮರ್ಶಿಸಲು ಇಚ್ಛಿಸುತ್ತೇನೆ.

ಜೀವನ....
ಪ್ರಸ್ತುತ ಈ ಕವನ ಸಂಕಲನದಲ್ಲಿ ಜೀವನದ ಪ್ರತಿಯೊಂದು ಘಳಿಗೆಯಲ್ಲೂ, ತನ್ನದೇ ಆದ ಒಂದು ವಿಶಿಷ್ಟವಾದ ಜೀವನ ರೂಪಿಸಿಕೊಳ್ಳುವುದು. ಜೀವನದ ವಿವಿಧ ಮುಖಗಳಲ್ಲಿ ಒಂದು ಮುಖ ಸುಖ ಸಂತೋಷ, ಹಣ, ನೆಮ್ಮದಿ, ಮತ್ತು ಇನ್ನೊಂದು ಮುಖ ನಮಗಾಗಿ ಅಂತ ಒಮ್ಮೆ, ನಮ್ಮವರಿಗೆ ಅಂತ ಒಮ್ಮೆ, ಈ ತರಹದ ಪ್ರಯತ್ನಗಳು ಜೀವನದಲ್ಲಿ ಬರುವುದು ಸಹಜ. ಆದ್ರೆ ಕೇಳಿದಾಗಲೆಲ್ಲ ಕೇಳಿದ್ದು, ಕೇಳಿದಷ್ಟು, ಸಿಕ್ಕಿ ಬಿಟ್ಟರೆ ಇವೆಲ್ಲ ಒಂದೆರೆಡು ದಿನ ಖುಷಿ ಕೊಟ್ಟು ನಂತರ ಜೀವನದಲ್ಲಿ ಸಂಚಲನ ಮೂಡಿಸಿರುವ ಸಂಗತಿಗಳು ಇಂದಿಗೂ ಉಂಟು. ಜೀವನ ಅರಳದೆ ಇದ್ದದ್ದರಲ್ಲೆ ತೃಪ್ತಿ ಕೊಳ್ಳುವುದು ಅವಶ್ಯಕ, ಬದುಕೆಂದರೆ ಸದಾ ಹಾಸಿಗೆ ಇದ್ದಷ್ಟೇ ಕಾಲನ್ನು ಚಾಚೋಗದೆ, ಕಾಲಿದ್ದಷ್ಟು ಹಾಸಿಗೆಯನ್ನು ಜಾಸ್ತಿ ಮಾಡೋ ಕೆಲಸ ಆಗಬೇಕು, ಇದನ್ನ ಮಾಡೋವಾಗ ಇತರರ ಜೀವನಕ್ಕೆ ಧಕ್ಕೆಯಾಗದೆ ನ್ಯಾಯದ ದಾರಿ ದೀಪದಂತೆ ಇದ್ದರೆ ಸಾಕು. ಜೀವನದಲ್ಲಿ ಕಲ್ಲಿಗೆ ಆಗಾಗ ಉಳಿಯ ಪೆಟ್ಟನ್ನು ತಿಂದಾಗಲೇ ಅದು ಸುಂದರ ಶಿಲೆಯಾಗಿ ಮೂಡೋದು, ಹಾಗೆಯೇ ಕಷ್ಟಗಳು ಬೇಡ ಅನ್ನೋದಕ್ಕಿಂತ ಕಷ್ಟಗಳನ್ನು ಎದುರಿಸುವ ಶಕ್ತಿ ಇರಬೇಕಷ್ಟೆ. ಪ್ರತಿ ದಿನ, ಪ್ರತಿ ಕ್ಷಣ, ನಮ್ಮ ಜೊತೆಯಿರುವ ಮನಸ್ಸು ಗೆಲ್ಲುವ ಜೀವನ ಪಂಚರಂಗಿ ನವರಂಗಿ ಸತರಂಗಿ ನಾನಾತರದ ಆಟಗಳು ಹೌದು. ಇದರ ನಡುವೆಯೇ ಬೇರೆಯವರ ಭಾವನೆಗಳಿಗೂ ನಿಮ್ಮ ಭಾವನೆಗಳ ಸೇರಿಸಿ ಜೀವನವೆಂಬ ಆಟದಲ್ಲಿ ಬಣ್ಣದೋಕುಳಿ ಆಟ ಆಡಬಹುದೆಂಬುದು ಈ ಕವನದ ನನ್ನ ಆಶಯವಾಗಿದೆ.

ಶಿಕ್ಷಕ.....
ಪ್ರಸ್ತುತ ಕವನ ಸಂಕಲನದಲ್ಲಿ ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಅನ್ನೋದು ವ್ಯಾಪಾರೀಕರಣ 
ವಾಗುತ್ತಿದೆ. ಬಡವರು ಮತ್ತು ಮಧ್ಯಮ ವರ್ಗದವರಿಗೆ ಗಗನ ಕುಸುಮವಾಗಿರೋ ದಿನಗಳು ದೂರವೇನಿಲ್ಲ ಹಣವಿದ್ದವರಿಗೆ ಮಾತ್ರ ವಿದ್ಯೆ ಎನ್ನುವಂತ ಪರಿಸ್ಥಿತಿಯೂ ಈಗಾಗಲೇ ಎದುರಾಗಿದೆ. ಶಿಕ್ಷಣ ಲೋಕದಲ್ಲಿ ಆಗುತ್ತಿರುವ ಅನಾರೋಗ್ಯಕರ ಬೆಳವಣಿಗೆಗೆ ಮದ್ದನ್ನು ಹುಡುಕೋ ಕೆಲಸ ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯ. ಏನೇ ಆಗಲಿ ಗುರಿ ಮುಂದಕ್ಕೆ ಇತ್ತು, ಹಿಂದಕ್ಕೆ ಗುರು ಇದ್ದ,ಸಾಗುದುದು ಧೀರರ ದಂಡು ಇದು. ಅನಾದಿ ಕಾಲದಿಂದಲೂ ಅಂದರೆ ಕುವೆಂಪು ಮತ್ತು ವೆಂಕಣ್ಣಯ್ಯ ಇವರಿಬ್ಬರ ಗುರು ಮತ್ತು ಶಿಷ್ಯ ಪರಂಪರೆಯ ಕೃಷಿಯಿಂದಲೂ ಒಲಿದು ಬಂದ ಒಂದು ಜವಾಬ್ದಾರಿ ಆಗಿದೆ. ಹೀಗೆ ಪ್ರತಿಯೊಬ್ಬ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ. ಎಂಬ ಮಾತು ವಾಸ್ತವಿಕವಾಗಿದ್ದರೂ ಸಾಧಿಸುವ ಒಬ್ಬ ಸಾಧಕನ ಹಿಂದೆ ಸಾರ್ಥಕ ಗುರುವಿದ್ದಾನೆ ಎಂಬುದು ಸಹ ಅಷ್ಟೇ ಸತ್ಯ ಇದು ಈಗಿನ ವಾಸ್ತವಿಕತೆ. ಉದಾಹರಣೆಗೆ ಒಬ್ಬ ಶಿಕ್ಷಕ ತಿಳಿದೇ ತಪ್ಪನ್ನು ಮಾಡಿದರೆ ಅದು ಇಡೀ ಪರಂಪರೆಗೆ ಅವಮಾನ ಅಥವಾ ನಾಶವಾಗುತ್ತದೆ ಎಂದು ಶಿಕ್ಷಣ ಮತ್ತು ಶಿಕ್ಷಕರ ಬಗ್ಗೆ ಸ್ಪಷ್ಟ ವಿಶ್ಲೇಷಣೆ ಉಲ್ಲೇಖಿತವಾಗಿದೆ.
ಸಹಜವಾಗಿ ಒಬ್ಬ ಶಿಕ್ಷಕನಿಗೆ ಇರಬೇಕಾದ ಐದು ಗುಣಗಳು
-ಆತ ಹೃದಯವಂತ ಜ್ಞಾನದಾಹಿಯಾಗಿರಬೇಕು.
-ಊರಿಗೆ ನ್ಯಾಯಾಧೀಶ ಶಿಕ್ಷಕನಾಗಿರಬೇಕು.
-ಪಠ್ಯ ಕೇವಲ ಕೊಡಿಸಲು ಅಲ್ಲ ಸಮಾಜದಲ್ಲಿ ಭರವಸೆಯ ದನಿಯಾಗುವ ಶಬ್ದ ಶಿಕ್ಷಕನಾಗಿರಬೇಕು.
-ಶಾಲೆಯ ಹೊರಗಿನ ಜನರೊಂದಿಗೆ ವಿದ್ಯಾರ್ಥಿಗಳನ್ನು ಚಟುವಟಿಕೆಗಳಲ್ಲಿ ಬೆರೆಸುವ ಸ್ಫೂರ್ತಿ ಹೊಂದಿರಬೇಕು.
-ಸಾಮಾಜಿಕ ಕೆಡುಕುಗಳ ವಿರುದ್ಧ ಯುವಜನ ಮತ್ತು ವಿದ್ಯಾರ್ಥಿಗಳ ಅಣಿ ನೆರೆಸಬೇಕು.
ಈ ಐದು ಗುಣಗಳನ್ನು ಪಾಲಿಸುವುದರ ಜೊತೆಗೆ ತನ್ನಲ್ಲಿ ಒಗ್ಗೂಡಿಸಿಕೊಂಡು ತನ್ನ ಕಾರ್ಯ ನಿರ್ವಹಿಸಬೇಕು. ಆಗ ನಿಜವಾದ ಶಿಕ್ಷಕ
ಎನಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಎಂಬುದು ಈ ಕವನದ ನನ್ನ ಆಶಯ.

ಹೆಣ್ಣು...
ಪ್ರಸ್ತುತ ಕವನ ಸಂಕಲನದಲ್ಲಿ"ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಾತೇ ದೇವತಾ" ಅಂದರೆ ಹೆಣ್ಣನ್ನು ಎಲ್ಲಿ ನಾವು ಆರಾಧಿಸುತ್ತೇವೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆಂಬುದು ಒಂದು ನಂಬಿಕೆ. ಪ್ರೀತಿ ವಾತ್ಸಲ್ಯ ಮಮತೆ ದಯೆ ಕರುಣೆ ಸೌಹಾರ್ದತೆ ಕನಿಕರ ಎಲ್ಲದಕ್ಕೂ ಹೆಣ್ಣೇ ಶ್ರೇಷ್ಠ. ಜಗತ್ತಿನ ಸಕಲ ಜೀವರಾಶಿಗಳಿಗೂ ಜನ್ಮ ಕೊಡೋಳು ಒಂದು ಹೆಣ್ಣು. ಅತಿರಥಮಹಾರಥರಿಗೆಲ್ಲ ಜನ್ಮ ಕೊಟ್ಟವಳು ಸಹ ಒಬ್ಬ ಹೆಣ್ಣೇ. ಅಂತಹ ಹೆಣ್ಣಿನ ಮಹತ್ವ ಈ ದೇಶದ ಎಷ್ಟೋ ಜನಕ್ಕೆ ತಿಳಿದೇ ಇಲ್ಲ, ಒಬ್ಬ ವ್ಯಕ್ತಿ ಅವನ ಜೀವನದಲ್ಲಿ ಅದೃಷ್ಟ ಮಾಡಿದ್ದರೆ ಅವನು ಬದುಕಿರುವಾಗಲೇ ತನ್ನ ಮೂರು ಜನ ತಾಯಂದಿರನ್ನು ಅವನು ಕಂಡಿರುತ್ತಾನೆ.
ಅವನು ಕಂಡಂತ ಮೂರು ಜನ ತಾಯಂದಿರೆಂದರೆ
-ಹೆತ್ತು ಹೊತ್ತು ಸಾಕಿ ಸಲಹಿ ಭೂಮಿ ಮೇಲೆ ಕಾಲಿಡುವಂತೆ ಮಾಡಿದವಳು ಮೊದಲ ತಾಯಿ.
-ಕಷ್ಟ ಸುಖ ನೋವು ನಲಿವು ತನ್ನೆಲ್ಲಾ ಕಷ್ಟಗಳ ಸಮನಾಗಿ ಹಂಚಿ ಅರ್ಧಾಂಗಿಯಾಗಿ ಬರೋ ಹೆಂಡತಿ ಎರಡನೇ ತಾಯಿ.
-ಜನುಮ ಕೊಟ್ಟ ಗಂಡು ಮಕ್ಕಳಿಂದ ವಂಚಿತರಾಗಿ ನಿರಾಶ್ರಿತರಾಗಿ ಬೀದಿಗೆ ಬಿದ್ದಾಗ ತನ್ನ ಮಗಳಂತೆ ಮಗಳ ಸ್ಥಾನದಲ್ಲಿ ಆಶ್ರಯ ಒದಗಿಸುವವಳು ಮೂರನೇ ತಾಯಿ.
ಈ ಮೂರು ಜನ ತಾಯಂದಿರು ಸಹ ಮೂರು ದೃಷ್ಟಿಯಿಂದ ಕಾಣಬಹುದು
ಕತೃಥ್ವ, ನೇತೃತ್ವ, ಮತ್ತು ತಾಯತ್ವ, ಈ ಮೂರು ಅಂಶಗಳು ಹೆಣ್ಣಿನ ಗುಣದಲ್ಲಿದ್ದಾಗ ಸಮಾಜದಲ್ಲಿ ಶಾಂತಿ ನೆಮ್ಮದಿಯ ಸುಂದರವಾದ ಒಂದು ನೆಲೆಯಾಗುತ್ತದೆ. ಹಾಗೇ ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಹೆಣ್ಣು ಇರುತ್ತಾಳೆ. ಎಂಬ ಅಂಶ ನೂರಕ್ಕೆ ನೂರರಷ್ಟು ಸತ್ಯ ಎಂಬ ಆಶಯ ನನ್ನದು.

ನಗರೀರಣ....
ಪ್ರಸ್ತುತ ಕವನ ಸಂಕಲನದಲ್ಲಿ ಹಳ್ಳಿ ಮತ್ತು ನಗರದ ಪರಿಸ್ಥಿತಿಯ ಕುರಿತು ನಾವು ಕಾಣಬಹುದು ತೀವ್ರ ನಗರೀಕರಣ ಮತ್ತು ಡಾಂಬರೀಕರಣ, ಪಾಶ್ಚಾತ್ಯೇಕರಣಗೊಳಿಸಲು ತನ್ನ ಸುತ್ತ ಮುತ್ತಲಿನ ಪರಿಸರವ ಕಳೆದುಕೊಂಡು ಸಾಂಸ್ಕೃತಿಕವಾಗಿ ಬರಡಾಗಿಸುವುದು ಸದ್ಯದ ಸ್ಥಿತಿ ಆಗಿದೆ.ಉದಾಹರಣೆಗೆ ಕಾಶಿಯನ್ನು ಬಿಟ್ಟರೆ ಉಡುಪಿ ಈಗಲೂ ಸಹ ಆಧುನಿಕತೆಯ ಪರಂಪರೆಯ ತಿರುಳನ್ನು ಉಳಿಸಿ ಕೊಂಡಿರುವುದು ವಿಶ್ವಾಸನೀಯ ಸಂಗತಿ. ಇದಕ್ಕೆ ಕಾರಣ ಉಡುಪಿ ಕೇವಲ ದಾಸ ಪಂಥಕ್ಕೆ ತಾತ್ವಿಕವಾದ ಒಂದು ನೆಲೆಯನ್ನು ರೂಪಿಸಿಕೊಟ್ಟಿದೆ. ಮತ್ತು ದ್ವೈತ ಮತದ ಕೇಂದ್ರವಾಗಿದ್ದು ಕೊಂಡು ವೇದಗಳ ಅಧ್ಯಯನ ಆದ್ಯಾತ್ಮ ಮತ್ತು ಚಿಂತನ ಮಂಥನಗಳ ಜೊತೆಗೆ ಅಧ್ಯಯನ ಪ್ರವಚನ ಅದ್ಯಾಪನಗಳ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಇದು ಇಂದಿಗೂ ಸಹ ನಗರೀಕರಣದ ನೆಲೆಯಾಗಿದೆ ನಮ್ಮ ಉಡುಪಿ ಎಂಬ ಆಶಯ ನನ್ನದು...

ಬಾಲ್ಯ.....
ಪ್ರಸ್ತುತ ಕವನ ಸಂಕಲನದಲ್ಲಿ ನೆನಪುಗಳು ಅದರಲ್ಲೂ ಶಾಲೆಯ ಬಾಲ್ಯದ ನೆನಪುಗಳು ಪ್ರತಿಯೊಬ್ಬರಿಗೂ ನೆಮ್ಮದಿ ನೀಡುವಂತಹ ನೆನಪುಗಳು. ಅಂದಿನ ಬಾಲ್ಯದಲ್ಲಿ ಅನೇಕ ಆಟಗಳ ಆಡುತ್ತಾ ನಲಿಯುತ್ತ ಕುಣಿಯುತ್ತಾ ಅದರಲ್ಲೂ ಬೇಸಿಗೆ ರಜೆ ಬಂತೆಂದರೆ ಮಜವೊ ಮಜಾ. ಏಕೆಂದರೆ ಬೇಸಿಗೆ ಕಾಲದಲ್ಲಿ ಅತಿ ಹೆಚ್ಚಾಗಿ ಸಿಗುವುದು ಮಾವು ಮತ್ತು ಹುಣಸೆ ಹಣ್ಣು. ಆಗ ಶಾಲೆಯ ಸ್ನೇಹಿತರೆಲ್ಲ ಸೇರಿ ಒಂದು ಗುಂಪನ್ನು ಕಟ್ಟಿಕೊಂಡು ಆ ಗುಂಪಿನಲ್ಲಿ ಗುಂಪಿಗೆ ರಾಜನಾದ ನನ್ನದೇ ಹೆಚ್ಚಿನ ದರಬಾರು ಆಗಿತ್ತು. ಮನೆಯಲ್ಲಿ ಅಮ್ಮನ ಬಳಿ ಶಾಲೆಗೆ ಹೋಗುವೆ ಅಂತ ಸುಳ್ಳನ್ನು ಹೇಳಿ ಅಪ್ಪನ ಜೊತೆ ಹೊಲಕೆ ಹೋಗಿ ಸಹಾಯ ಮಾಡುವುದೋ ಆಗೆ ಅಮ್ಮನಿಗೆ ಹೇಳಿ ಹೋಗಿದ್ದ ಸುಳ್ಳು ಆ ಸುಳ್ಳಿನಿಂದ ಅಮ್ಮನ ಕೈ ಅಲ್ಲಿನ ಬೆತ್ತದಿಂದ ತಿಂದ ಪೆಟ್ಟು ಆ ಪೆಟ್ಟನ್ನು ತಿನ್ನದ ದಿನವೇ ಇಲ್ಲ ಒಂದು ಸುಂದರ ಹುಡುಗಿಯ ಜೊತೆ ಭಾಂದವ್ಯವೆಂಬ ಸಂಬಧದ ಗೆಳೆತನ ಕಟ್ಟಿ ಅವಳು ನನ್ನ ಸ್ನೇಹಿತೆ ಎಂಬ ನಂಟು ಆದರೆ ಗೆಳತಿ ಏನೋ ಸರಿ ಆದರೆ ಎಂಬ ಸಂಶಯ ನಾನು ಅವಳಿಗೆ ಗೆಳೆಯನೋ ಅಲ್ಲವೋ ಎಂಬ ಸಂಶಯ ಸ್ನೇಹವಾಗಿ ಹತ್ತಿರ ಕೂಡಿದಾಗ ಅವಳ ಹೆಸರೇ ನೆನಪಿಗೆ ಬಾರದಾಯಿತಲ್ಲ ಆಗ ತರಲೆಯ ತಿಮ್ಮನಾಗಿ ಸದಾ ನಗಿಸುವ ಮುದ್ದು ಗುಮ್ಮನಾಗಿ ನನ್ನ ಜೀವನ ಆರಂಭವಾಗಿ ಜೀವನದ ಬೆಲೆ ತಿಳಿದು ಆ ಜೀವನದ ಏಳು- ಬೀಳುಗಳ ಒಡೆತಕ್ಕೇ ಸಿಲುಕದೆ ಕಲಿತ ಪಾಠದಿಂದ ಇಂದು ಎಲ್ಲರ ಜೀವನ ದುಡಿದು ಸಾಕುವ ಅಂತಕ್ಕೆ ಬೆಳೆದು ನಿಂತಿದೆ.
ಆದರೆ ದೊಡ್ಡವರಾಗುತ್ತ ಹೋದಂತೆಲ್ಲ ಆ ನೆನಪುಗಳು ನಮ್ಮನ್ನು ಸದಾ ಹೆಚ್ಚು ಹೆಚ್ಚಾಗಿ ಕಾಡತೊಡಗುತ್ತವೆ. ಹೀಗೆ ದಿನ ನಿತ್ಯದ ಬದುಕಿನಲ್ಲಿ ಕಾಡುವ ನೆನಪುಗಳನ್ನು ಈ ರೀತಿಯಲ್ಲಿ ವಿವರಿಸಿದ್ದೇನೆ. ಲತಾಮಣಿ ಎಂ. ಕೆ. ತುರುವೇಕೆರೆ ಅವರು ಕನ್ನಡ ಸಾಹಿತ್ಯದ ಭರವಸೆಯ ಕವಯಿತ್ರಿ.. ಅವರಿಂದ ಇನ್ನೂ ಉತ್ತಮವಾದ ಕೃತಿರತ್ನಗಳು ನಾಡಿಗರ್ಪಿತವಾಗಲಿ.
✍️ *ಅಂಜಿನಗೌಡ ಎನ್. (ಅಂಜನ್)*
ಕಾಡನೂರು ಪಾಳ್ಯ
ಕಾಡನೂರು ಅಂಚೆ
ಮಧುರೆ ಹೋಬಳಿ
ದೊಡ್ಡಬಳ್ಳಾಪುರ ತಾಲ್ಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ ) 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...