ಬುಧವಾರ, ಆಗಸ್ಟ್ 25, 2021

ಚರ್ಮ ದಾನ (ದೇಹಾಂಗದಾನ ಜಾಗೃತಿ ಲೇಖನ) - ಶ್ರೀಮತಿ ಕಲ್ಪನಾ ಡಿ ಎನ್.

ಚರ್ಮ ದಾನ 
ಚರ್ಮ ದಾನದಿಂದ ಸಾವಿರಾರು ಜನರು ಉಪಯೋಗ ಪಡೆದುಕೊಳ್ಳುವಂತಾಗಲಿ.

ಚರ್ಮವು ಜೀವ ರಕ್ಷಣಾ ವ್ಯವಸ್ಥೆಯ ಅಂಗವಾಗಿದೆ. ದೇಹದ ಅನಗತ್ಯ ಲವಣಾಂಶಗಳನ್ನು ಕಲ್ಮಶಗಳನ್ನು ಹೊರಹಾಕುತ್ತದೆ .ಸ್ವಲ್ಪ ಮಟ್ಟಿಗೆ ತೇವಾಂಶವನ್ನು ಇರುವ ಗುಣವನ್ನು ಹೊಂದಿದೆ. ಚರ್ಮ ದೇಹದ ಬೇರೆ ಬೇರೆ ಭಾಗಗಳಲ್ಲಿ ಬದಲಾವಣೆ ಹೊಂದಿರುತ್ತದೆ. ಸ್ಪರ್ಶ ,ಶೀತ, ಒತ್ತಡದ ಅನುಭವಗಳನ್ನು ತಿಳಿಸುತ್ತದೆ.
ಹೊರಗಿನ ಪರಿಸರದೊಂದಿಗೆ ಸಂಪರ್ಕ ಹೊಂದಿರುವುದರಿಂದ ಚರ್ಮವು ನಾನಾ ಸೋಂಕುಗಳ ರೋಗನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.
ಉಷ್ಣ ನಿರೋಧಕ ,ತಾಪಮಾನ ನಿಯಂತ್ರಣ ,ಸಂವೇದನೆ ,ಜೀವಸತ್ವದ ಸಂಯೋಜನೆಯನ್ನು ಕೂಡ ಮಾಡುತ್ತದೆ.
ಮಾನವರಲ್ಲಿ ಬೇರೆಬೇರೆ ರೀತಿಯ ಚರ್ಮದ ವರ್ಣಗಳನ್ನು ಕಾಣಬಹುದು.
ಪ್ರಧಾನವಾಗಿ ಚರ್ಮದಲ್ಲಿ ಎರಡು ಪದರಗಳು ಇರುತ್ತವೆ .ಒಳಚರ್ಮ ಮತ್ತು ಹೊರ ಚರ್ಮ ಸೂಕ್ಷ್ಮ ಪದಗಳಾದ ನಾಲ್ಕು ಪದಗಳನ್ನು ಸಹ ಕಾಣಬಹುದಾಗಿದೆ.
ಚರ್ಮವು ಮಾನವ ದೇಹದಲ್ಲಿರುವ ಅತಿ ದೊಡ್ಡ ಅಂಗವಾಗಿದೆ 1:50ಯಿಂದ 2:00 ಚದುರ ಮೀಟರ್ ವಿಸ್ತೀರ್ಣವನ್ನು ಹೊಂದಿರುತ್ತದೆ.

ಚರ್ಮ ದಾನ ಮಾಡುವುದರಿಂದ ಉಪಯೋಗಗಳು

ಚರ್ಮ ದಾನವನ್ನು ಮುಖ್ಯವಾಗಿ ಬೆಂಕಿಯಿಂದ ಸುಟ್ಟು ಹೋದವರಿಗೆ ಹಾಕಲಾಗುತ್ತದೆ.

 ಲಕ್ಷಾಂತರ ಜನ ಸುಟ್ಟಗಾಯಗಳಿಂದ ಸಾವನ್ನಪ್ಪುತ್ತಿದ್ದಾರೆ.

ಆಕ್ಸಿಡೆಂಟ್ ಮತ್ತು ಇನ್ನಿತರ ಕಾರಣದಿಂದ ಚರ್ಮ ಲಾಸ್ ಆಗಿದ್ದ ಪಕ್ಷದಲ್ಲಿ ಅದೇ ವ್ಯಕ್ತಿಯಿಂದ ಚರ್ಮವನ್ನು ತೆಗೆದು ಕಸಿ ಮಾಡಲಾಗುತ್ತದೆ. ಆದರೆ ಸುಟ್ಟಗಾಯದಿಂದ ದೇಹವು ಸಂಪೂರ್ಣ ಸುಟ್ಟು ಹೋದರೆ ಚರ್ಮದ ನಿಧಿಯಿಂದ ಚರ್ಮವನ್ನು ತೆಗೆದು ಕಸಿ ಮಾಡಲಾಗುತ್ತದೆ. (ಪ್ಲಾಸ್ಟಿಕ್ ಸರ್ಜರಿ)
ಉದಾಹರಣೆಗೆ ಚಿತ್ರ ನಟ ಶಶಿಕುಮಾರ್ ಅವರಿಗೆ ಪ್ಲಾಸ್ಟಿಕ್ ಸರ್ಜರಿ ಅನ್ನು ಮಾಡಲಾಗಿದೆ.

18 ವರ್ಷ ಮೇಲ್ಪಟ್ಟವರು ಚರ್ಮ ದಾನ ಮಾಡಬಹುದು. 90 ರಿಂದ 100 ವರುಷ ವಯಸ್ಸಾದವರು ಸಹ ಚರ್ಮ ದಾನ ಮಾಡಬಹುದು.

ಎಚ್ಐವಿ, ತೊನ್ನು ರೋಗ, ಚರ್ಮದ ಕ್ಯಾನ್ಸರ್ ಇನ್ನಿತರ ಸೋಂಕು ರೋಗಗಳಿಗೆ ತುತ್ತಾದವರು ಚರ್ಮದಾನ ಮಾಡುವಂತಿಲ್ಲ...

ಕೈ ಕಾಲು ತೊಡೆ ಭಾಗದ ಚರ್ಮವನ್ನು ಮಾತ್ರ ತೆಗೆಯಲಾಗುತ್ತದೆ ರಕ್ತಸ್ರಾವ ಇರುವುದಿಲ್ಲ ಬ್ಯಾಂಡೇಜನ್ನು ಮಾಡುತ್ತಾರೆ.
ಚರ್ಮದ ಮೇಲ್ಭಾಗ ಅಂದರೆ ಪೇಪರ್ ಲೇಯರ್ ಅನ್ನು ಮಾತ್ರ ತೆಗೆಯಲಾಗುತ್ತದೆ.

ವ್ಯಕ್ತಿಯು ಮರಣ ಹೊಂದಿದ ಆರು ಗಂಟೆಯ ಒಳಗಾಗಿ ಚರ್ಮದಾನ ಮಾಡಿದರೆ ಒಳ್ಳೆಯದು. ವ್ಯಕ್ತಿಗಳಿಂದ ತೆಗೆದ ಚರ್ಮವನ್ನು ಫ್ರೀಜರ್ ನಲ್ಲಿ ಇಟ್ಟಿದ್ದರೆ 12 ಗಂಟೆಗಳ ಕಾಲ ಕಾಲದ ನಂತರ ಬೇಕಾದರೂ ಬಳಸಬಹುದು.

ಯಾವುದೇ ವ್ಯಕ್ತಿಯು ಚರ್ಮದಾನ ಮಾಡಿದ್ದ ಪಕ್ಷದಲ್ಲಿ ಸಂಬಂಧಪಟ್ಟವರು ಆಸ್ಪತ್ರೆಗೆ ಫೋನ್ ಮಾಡಿದರೇ, ತಕ್ಷಣವೇ ವೈದ್ಯ ಸಿಬ್ಬಂದಿ ಬಂದು ಚರ್ಮವನ್ನು ತೆಗೆದುಕೊಳ್ಳುತ್ತಾರೆ.

ಚರ್ಮವನ್ನು ತೆಗೆದುಕೊಳ್ಳಲು ಮತ್ತು ಬೇರೆಯವರಿಗೆ ಹಾಕಲು ಯಾವುದೇ ಶುಲ್ಕ ಇರುವುದಿಲ್ಲ.

ಸರ್ಕಾರದಿಂದ ಅಧಿಕೃತ ಗೊಂಡ ಸಂಘ-ಸಂಸ್ಥೆಗಳಿಗೆ ನಾವು ಚರ್ಮವನ್ನು ದಾನಮಾಡಬೇಕು.

ದಾಳಿಯಿಂದ ಸಂಗ್ರಹಿಸಿದ ಚರ್ಮವನ್ನು 21 ದಿನಗಳ ಕಾಲ ಸಂರಕ್ಷಣೆ ಮಾಡಲಾಗುತ್ತದೆ. ಈ ರೀತಿ ಸಂಗ್ರಹಿಸಿದ ಚರ್ಮವನ್ನು ಮೂರರಿಂದ ನಾಲ್ಕು ವರ್ಷಗಳು ಕೆಡದಂತೆ ಇಡಬಹುದಾಗಿದೆ.
ಸರ್ವರು ಚರ್ಮ ದಾನ ಮಾಡಲು ಸಿದ್ಧರಾಗಬೇಕು. ಸುತ್ತಮುತ್ತಲ ಹಾಗೂ ಸಂಬಂಧಿಕರಿಗೆ ಇದರ ಉಪಯೋಗವನ್ನು ಮನಮುಟ್ಟುವಂತೆ ಹೇಳಬೇಕು.

ಮಣ್ಣಿನಲ್ಲಿ ಕೊಳೆತುಹೋಗುವ ಅಥವಾ ಬೆಂಕಿಯಲ್ಲಿ ಸುಟ್ಟು ಹೋಗುವ ಬದಲು ದಾನ ಮಾಡಬೇಕು.

ಇನ್ನೂ ಹೆಚ್ಚಿನ ಮಾಹಿತಿಗಾಗಿ, ನಮಗೆ ಕರೆ ಮಾಡಬಹುದು ಅಥವಾ ಹತ್ತಿರದ ಗೌರ್ಮೆಂಟ್ ಆಸ್ಪತ್ರೆಗೆ ಫೋನ್ ಮೂಲಕ ತಿಳಿದುಕೊಳ್ಳಬಹುದು.

ಚರ್ಮ ದಾನದ ಸಂಕಲ್ಪ ಮಾಡಿಸದಿದ್ದರೂ ಸಹ ವ್ಯಕ್ತಿ ಮರಣ ಹೊಂದಿದ ನಂತರ ಸಂಬಂಧಪಟ್ಟವರು ಮಾಡಿಸಬಹುದು.

ಸೂಚನೆ:-ದೇಹಾಂಗದಾನ ಸಾಹಿತ್ಯ ಪರಿಷತ್ ಕರ್ನಾಟಕ ಹಾಗೂ ಶಾರದಾ ಮಹಿಳಾ ಸೇವಾಶ್ರಮದ ಮೂಲಕ ನಡೆಸುವ ಜನಜಾಗೃತಿ ಕಾರ್ಯಕ್ರಮಗಳಿಗೆ
ಯಾರಿಂದಲೂ ಹಣ/ ದೇಣಿಗೆ ಅಥವಾ ವಂತಿಗೆಯನ್ನು ನಮ್ಮ ಸಮಿತಿ, ಪರಿಷತ್ತು ಮತ್ತು ಶಾರದಾ ಮಹಿಳಾ ಸಮಾಜ ಪಡೆಯುವುದಿಲ್ಲ.

          (ದೇಹಾಂಗ ದಾನ ಸಾಹಿತ್ಯ ಪರಿಷತ್ ಕರ್ನಾಟಕ ,ಶಾರದ ಮಹಿಳಾ ಸಮಾಜ ವಿಚಾರ ಮಂಟಪ ವೇದಿಕೆಯ ಸಂಯುಕ್ತಾಶ್ರಯದಲ್ಲಿ "ಸಂಕಲ್ಪಯಾತ್ರೆ "ಕಾರ್ಯಕ್ರಮದ ಮೂಲಕ ತಿಂಗಳು
ಹಲವಾರು ಶಿಬಿರಗಳನ್ನು, ವೇಬಿನರ್ ಗಳನ್ನು ಹಾಗೂ ಕವಿಗೋಷ್ಠಿಗಳನ್ನು ಮಾಡುತ್ತಿದ್ದೇವೆ...
ಕಾರ್ಯಕ್ರಮಗಳನ್ನು ವೀಕ್ಷಿಸಿದ ಹಲವಾರು ಮಂದಿ ನೇತ್ರದಾನ, ರಕ್ತದಾನ, ಅಂಗಾಂಗ ದಾನ ಮತ್ತು ದೇಹದಾನಗಳಿಗೆ ಒಪ್ಪಿರುವುದು ಬಹಳ ಸಂತೋಷದ ವಿಷಯ...)
 ಕಲ್ಪನಾ ಡಿ.ಎನ್.
 ಶಾರದಾ ಮಹಿಳಾ ಸೇವಾ ಸಮಾಜ
              ಸಂಸ್ಥಾಪಕರು
                ಬೆಂಗಳೂರು
                9148305363.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...