ಜೀತದಾಳು
ಹರಿಯುವ ಕೊಳಚೆ ನೀರಿನ
ದಡದ ಮೇಲೆ ಮುರುಕು
ಗುಡಿಸಲುಗಳ ಸಾಲು ಸಾಲು
ಬೀಸುವ ಗಾಳಿಗೆ ಚಪ್ಪರಗಳ
ಗಾಳಿ ಪಟಗಳ ಹಾರಾಟ
ಬಾಗಿಲುಗಳಿಗೆ ಪ್ಲಾಸ್ಟಿಕ್ ಚೀಲಗಳ ಅಲಂಕಾರ
ಕಿಟಿಕಿಯೂ ಬೇಡ ಎ ಸಿ ತಂಪು
ಮಳೆಗೆ ಮೂಲೆಯೇ ಮುದುಡುವಿಕೆ
ಚಳಿಗೆ ಹೊದಿಕೆಯೇ ಆಸರೆ
ಮನೆ ಇದು ಆವರಣದ ಬದುಕು
ಮಹಿಳೆಯರಿಗೆ ಬಟ್ಟೆ
ಪಾತ್ರೆ ತೊಳೆಯುವ
ಹರಿಯುವ ತೊರೆಯೂ
ಮಕ್ಕಳ ಗಂಡಸರ ಸ್ವಿಮ್ಮಿಂಗ್ ಫುಲ ಇದು
ಜೀತಾಳಗಿದ್ದೇವೆ ತಾತ ಮುತ್ತಾತನ ಕಾಲದಿ
ಕೊಟ್ಟ ಕಾಸಿಗೆ ಕೈ ಒಡ್ಡಿ ಹಾಕುವೆವು ಓಟು
ಬರುವ ಚುನಾವಣೆಗೆ ಕಾಯುವೆವು
ಸರಾಯಿ ಚಪಲದಲಿ
ಸರ್ಕಾರಿ ಸೌಲ್ಯಭ್ಯದ ಆಶ್ವಾಸನೆಗೆ
ಕೈ ಮುಗಿದು ಮುಗಿದು ನಡು ಬಾಗಿದೆ
ಅದೇ ಸೊಳ್ಳೆಗಳ ಝೇಂಕಾರ, ದುರ್ಜಲ ವಾಸನೆ
ಕಂಗೊಳಿಸುತ್ತಿತ್ತು ದೊಡ್ಡದಾದ ಬ್ಯಾನರ್
ಸ್ವಚ್ಛತಾ ಭಾರತ ಅಭಿಯಾನ....
- ಮಾಜಾನ್ ಮಸ್ಕಿ
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ