ಆತಿಥ್ಯ
ಆದರದಿ ಸತ್ಕರಿಸುವ ಸಂಸ್ಕೃತಿ
ಭಾರತೀಯರ ಮನೆಮನಗಳ ಸುಕೃತಿ
ಹಸಿವು ತೃಷೆಗಳನು ಅಳಿಸುತ
ಆತಿಥ್ಯದಿ ಸರ್ವರನು ಸಂತೈಸುತ
ಶುಭ ಸಮಾರಂಭಗಳ ಕಳೆ
ಆತಿಥ್ಯದಿ ಬಂದವರ ಮನಸೆಳೆ
ಬಂದವರೆಲ್ಲರೂ ಬಂಧುಗಳು
ಆನಂದದಿ ನಡೆಸುವ ಮಾತುಕತೆಗಳು
ಬಡವಶ್ರೀಮಂತ ಭೇದವೆಣಿಸದಿರು
ಆತಿಥ್ಯಕೆ ಎಲ್ಲರೂ ಸಮಾನರು
ಭೋಜನದೊಂದಿಗೆ ಭಾವನೆಗಳಿರಲಿ
ಬಡಿಸುವಾಗ ಪ್ರೀತಿ ತುಂಬಿರಲಿ
ಕಳಿಸಿಕೊಡು ಸವಿನೆನಪುಗಳೊಡನೆ
ಮರಳಿ ಬರಲು ತಿಳಿಸು ಅದರೊಡನೆ
ಹಿರಿಕಿರಿಯರೆಲ್ಲರಿಗೂ ಗೌರವ ತೋರು
ಆತಿಥ್ಯದಿ ವ್ಯಕ್ತಿತ್ವದ ಘನತೆಯನೇರು
- ಭವ್ಯ ಟಿ.ಎಸ್.
ಶಿಕ್ಷಕರು.ಹೊಸನಗರ
ಶಿವಮೊಗ್ಗ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ