ಬುಧವಾರ, ಆಗಸ್ಟ್ 25, 2021

ನೇಗಿಲಯೋಗಿ (ಕವಿತೆ) - ಶ್ರೀ ಪುರುಷೋತ್ತಮ ಪೆಮ್ನಳ್ಳಿ.

ನೇಗಿಲಯೋಗಿ

ಅನ್ನದಾತನಾಗಿ ಜಗವ ಬೆಳಗಿದ ನೇಗಿಲಯೋಗಿ
ಭೂಮಾತೆಯ ನಂಬಿ ದುಡಿಯುವ ಕಾಯಕಯೋಗಿ
ಜೀವಗಳಿಗೆ‌ ಬಲದ ಆಹಾರವ ನೀಡುವ ಕಾಯಕ
ಮಾಡುತಲಿ ಸಾಗಿಸುತ್ತಿರುವೆ ಬಡತನದಿ ಬದುಕ...

ತಿಂದು ಬದುಕಿದವರ ಕಂಡು ಅಸೂಯೆ ಪಡಲಿಲ್ಲ
ವ್ಯವಹಾರಕ್ಕೆ ಬಳಸಿದವರ ಕಂಡು ಮನ ಕುದಿಯಲಿಲ್ಲ
ಎಷ್ಷು ದುಡಿದರು ಬಡವನಾಗಿಯೇ ಉಳಿದಿಯೆ
ಕಾಯಕ ಮಾತ್ರವೇ ನಂಬಿ ಸಾಲದ ಸುಳಿಗೆ ಸಿಲುಕಿಹೆ... 

ಕಷ್ಷಕೆ ಯಾರು ಸಹಾಯಕರಾಗಲಿಲ್ಲವೆಂಬ ನೋವು
ಕೊನೆಗೊಳಿಸುವುದೆ ನೀ  ತಂದುಕೊಂಡ ಸಾವು
ಬದಲಾಗದು ಜಗವು ನಿನ್ನ ಕಾಯಕವ ಮೆಚ್ಚುವ ತನಕ
ಮಣ್ಣಿನ ಗಂಧವ ತಿಳಿದ ನೀ ಕೀರ್ತಿಯ ಪ್ರತೀಕ...

ಸಾಲದ ಉರುಳಿಗೆ ಕೊರಳನು ಕೊಟ್ಟು ಸಾಗಿಹೆ
ಜೀವಕುಲಕೆ ಸದಾ ಕಾಲಕೂ ಒಳಿತನು ಬೇಡಿಹೆ
ಸಿಗಲಿ ನಿನ್ನ ಕಾರ್ಯಕೆ ತಕ್ಕ ಪ್ರತಿಫಲದ ಲಾಭವು 
ಉಳಿಯಲಿ ಧರೆಯಲಿ ಅನ್ನದಾತನ ಜೀವನವು...

ರವಿಯಂತೆ ಬೆಳಗಿದ ನಿನ್ನ ನಿಷ್ಕಲ್ಮಶದ ಕಾರ್ಯನಡೆ
ಸಾಗುತಲೆ ಇರಲಿ ಎದುರಾಗದೆ ಯಾವ ಅಡೆತಡೆ
ಎದೆಗುಂದದಿರು ನಿನೀರದೆ ಯಾರಿಗೂ ಬದುಕಿಲ್ಲ
ದೈರ್ಯದಿ ಮುನ್ನುಗ್ಗಿ ಸಾಗು ಭೂಮಾತೆ ಕೈ ಬಿಡುವುದಿಲ್ಲ....

- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ
ದೂ.೯೬೩೨೨೯೬೮೦೯.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...