ಮಂಗಳವಾರ, ಆಗಸ್ಟ್ 31, 2021

ಶ್ರೀ ಕೃಷ್ಣ ಜನ್ಮಾಷ್ಟಮಿ (ಕವಿತೆ) - ಶ್ರೀಮತಿ ಭಾಗ್ಯ ಗಿರೀಶ್ ಹೊಸದುರ್ಗ.


ಶ್ರೀ ಕೃಷ್ಣ ಜನ್ಮಾಷ್ಟಮಿ

ವಸುದೇವ-ದೇವಕಿಯ ಸುತ ಸೆರೆಮನೆಯಲಿ?
ಜನಿಸಿದ ಕೃಷ್ಣ ಬಾಲ್ಯ ಲೀಲೆ ತೋರುತಲಿ!
ಬೆಳೆದ ಯಶೋದ ನಂದನ ವಾತ್ಸಲ್ಯದಲಿ
ತುಂಟಾಟಗಳಾಡುತ,ಬೃಂದಾವನದಲಿ..

ಬೆಣ್ಣೆಕದಿಯುವ ಮುದ್ದು ಕಂದನಿವ!
ರಾಧೆಯ ಪ್ರೀತಿಗೆ ಮರುಳಾದವ 
ಪ್ರೀತಿಯ ಅರ್ಥವ ಜಗಕೆ ಸಾರಿದವ!
ಬಲರಾಮನ ಪ್ರಿಯ ಸೋದರನಿವ.

ರಕ್ಕಸ ಕಂಸನ ವಧಿಸಿದ ದೇವನ
ಕೌರವರ ನಾಶಕ್ಕೆ ಕಾರಣವಾದವನ
ಧರ್ಮಸಂಸ್ಥಾಪನೆ ಮಾಡಿದವನ..
ಜನ್ಮಾಷ್ಟಮಿಯಂದು ಸ್ಮರಿಸುವ ಸುದಿನ.

ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿಯ
ಆಚರಿಸುವ ಕೇಳುತ್ತಾ ಕೃಷ್ಣನ ಕಥೆಯ
ಧನ್ಯ ಶ್ರೀಕೃಷ್ಣನ ಸ್ಮರಿಸುವ ಹೃದಯ..
ಮರೆಯಲಾದೀತೆ ಆ ನಿಷ್ಕಲ್ಮಶ ಪ್ರೀತಿಯ. 

ಗೋಮಾತೆಗಳನ್ನು ಗೌರವದಿ ಸಿಂಗರಿಸಿ
ಭಕ್ತಿಭಾವದಿ ಶ್ರೀಕೃಷ್ಣನ ಜೊತೆ ಪೂಜಿಸಿ
ಸ್ನೇಹಿತರೊಂದಿಗೆ ಬೆಣ್ಣೆ ಮಡಿಕೆಯ ಹೊಡೆದು 
ಪ್ರೀತಿಯಿಂದ ಕುಣಿದು ನಲಿಯುವರು ಆನಂದಿಸಿ.
✍️ ಶ್ರೀಮತಿ ಭಾಗ್ಯ ಗಿರೀಶ್
        ಹೊಸದುರ್ಗ
ಹೊಸದುರ್ಗ ತಾಲೂಕು
ಚಿತ್ರದುರ್ಗ ಜಿಲ್ಲೆ.


(ನಿಮ್ಮ ಬರಹಗಳ ‌ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...