ಮಂಗಳವಾರ, ಆಗಸ್ಟ್ 31, 2021

ಕರೋನಾ (ಕವಿತೆ) - ಶ್ರೀ ತುಳಸಿದಾಸ ಬಿ ಎಸ್.

ಕೊರೋನಾ  

ಜಗವನೆಲ್ಲ ನಡುಗಿಸಿ ಮತ್ತೆ ಸ್ಥಬ್ಧವಾಗಿಸಿ
ಮನುಜ ಕುಲದ ನಾಶಕೆಂದು ಪಣವ ತೊಟ್ಟು ನಿಂತಿದೆ
ಹೊರಗೆ ತಾನು ಕಾಣದೆ ಎಳೆಯ ಹರೆಯ ಎನ್ನದೆ
ಹೊಕ್ಕು ದೇಹ ಉಸಿರು ತೆಗೆವ ಮಾರಿ ರೋಗ ಕೊರೋನಾ

ಗಾಳಿಯಲ್ಲಿ ಅಲ್ಲಿ ಇಲ್ಲಿ ನೆಲೆಸಿ ಹೊಕ್ಕು ಮನುಜರಲ್ಲಿ
ಅವರು ಇವರು ಎನ್ನದಂತೆ ಹರಡುತಿಹುದು ಎಲ್ಲರಲ್ಲಿ
ಮಕ್ಕಳನ್ನು ವೃದ್ಧರನ್ನು ಮೊದಲು ಬಿಡೆನು ಎನ್ನುತಿಹುದು
ಮದ್ದು ತರುವ ಮುಂಚೆ ನಾನು ಗೆದ್ದು ಬೀಗ ಬಲ್ಲೆನೆಂದು

ಭಯದಿ ದಿನವ ಕಳೆಯುತಿಹೆವು ಕೆಲಸವೆಲ್ಲ ನಿಲ್ಲಿಸಿ
ಕಣ್ಣ ಎದುರೆ ಕೊಲ್ಲುತಿಹುದು ಶೋಕದಲ್ಲಿ ಮುಳುಗಿಸಿ
ಅಯ್ಯೋ! ಎಂತ ಕ್ರೂರಿ ನೀನು ಕರುಣೆ ಇರದ ಕಲ್ಕಿಯೆ
ಮಟ್ಟ ಹಾಕೊ ದಿನವು ಬರದು ತೊರೆದು ಜಗವ ತೊಲಗುವೆ

ಅಂತರವನು ಕಾಯ್ದುಕೊಂಡು ಹರಡದಂತೆ ತಡೆಯುವ
ನಂತರದಿ ಅದನು ಕೊಂದು ಭೀತಿಯನ್ನು ತೊರೆಯುವ.

(ಮೊದಲ ಅಲೆಯ ಸಂದರ್ಭದಲ್ಲಿ  ರಚನೆ)
- ಶ್ರೀ ತುಳಸಿದಾಸ ಬಿ ಎಸ್‌
ಶಿಕ್ಷಕರು, ಗೊರೇಬಾಳ ಕ್ಯಾಂಪ್, ರಾಯಚೂರು.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...