ನಿಸರ್ಗದ ಮಡಿಲು ಆ ಗ್ರಾಮ
ಒಂದು ಚಿಕ್ಕ ಗ್ರಾಮ, ಕೇವಲ ಬೆರಳೆಣಿಕೆಯಷ್ಟು ಮನೆಗಳಿದ್ದವು.ಆದರೆ ಕಣ್ಣಿಗೆ ಹಬ್ಬ ಮತ್ತು ಸಂತೋಷವನ್ನ ನೀಡುವ ಹೊಲಗದ್ದೆಗಳಿದ್ದವು ಆ ಗ್ರಾಮದ ಸುತ್ತ ಮುತ್ತ. ಅದಕೆ ಕಾರಣ ಅವರು ರವಿ ಕಿರಣಗಳು ಧರೆಗೆ ತಲುವ ಮೊದಲೆ ತಮ್ಮ ತಮ್ಮ ಹೊಲಗದ್ದೆಗಳಲ್ಲಿ ಕಾಯಕ ನಿರತರಾಗಿರುತ್ತೀದ್ದರು.ಇಷ್ಟೆಲ್ಲಾ ಸೌಂದರ್ಯ ರಾಶಿಯಿಂದ ಸುಂದರ ಸ್ವರ್ಗಮಯವಾದ ಆ ಊರಲ್ಲಿ ನನ್ನ ನೆಮ್ಮದಿಯನ್ನ ಹಾಳು ಮಾಡಿದ ಘಟನೆಯೊಂದು ನನ್ನ ಕಣ್ಮುಂದೆ ಅಳಿಯದೆ ಉಳಿದು ಬಿಟ್ಟಿತು.ಅದೆನೆಂದರೆ ಅವರು ಗಾಢವಾಗಿ ನಂಬಿದ್ದ ಮೂಢನಂಬಿಕೆ. ಆ ಗ್ರಾಮದಲ್ಲಿ ಅನಾಚಾರದ ವಾಮಾಚಾರವು ಮೆರೆಯುತ್ತಿತ್ತು.ಭೂತ ಪ್ರೇತ ಮಾಟ ಮಂತ್ರ ತಂತ್ರಗಳು ಹೆಜ್ಜೆ ಹೆಜ್ಜೆಗೂ ಕಣ್ಮುಂದೆ ಗೋಚರಿಸುತ್ತಿದ್ದವು.ಅನೇಕ ತಂತ್ರಜ್ಞಾನಗಳ ಬಳಕೆಯ ನಡುವೆಯೂ ಇಂತಹ ನೀಚ ಪದ್ಧತಿಯು ಅಳಿಯದೆ ಉಳಿದದ್ದು ಹೇಗೆ ಅನಿಸುತ್ತಿತ್ತು ನನಗೆ.ನಾನು ಮತ್ತೆ ಮತ್ತೆ ಯೋಚಿಸಿ ಆ ಗ್ರಾಮದ ಒಬ್ಬ ಹಿರಿಯ ಅಜ್ಜಿಯ ಮನೆಗೆ ಬೇಟಿ ನೀಡಿ ವಿಚಾರಿಸಿದಾಗ ಈ ಮೂಢ ನಂಬಿಕೆ ಇನ್ನೂ ಜೀವಂತವಾಗಿ ಈ ಗ್ರಾಮದಲ್ಲಿ ಇರಲು ಕಾರಣಕರ್ತನಾದ ವ್ಯಕ್ತಿಯ ಇತಿಹಾಸ ತಿಳಿದಿತು.ತನ್ನ ಬೆಳೆ ಬೆಯಿಸಿಕೊಳ್ಳಲು ಇಡೀ ಗ್ರಾಮ ವನ್ನ ಬಲಿ ನೀಡಿದ್ದ ಪೂಜಾರಿ.ದೇವರು ಮೈಮೇಲೆ ಬಂದವರಂತೆ ನಟಿಸಿ ತಾನು ಸಾಕಿದ ಕೇಲವು ಎಂಜಲು ತಿನ್ನುವ ಮನುಷ್ಯ ನಾಯಿಗಳಿಂದ ಜನರಿಗೆ ತೊಂದರೆ ತರಿಸಿ ತನ್ನಿಂದ ಮಾತ್ರ ಪರಿಹಾರ ಎಂದು ತನ್ನ ಕೆಲಸ ಕಾರ್ಯಗಳನ್ನ ಇಡೇರಿಸಿಕೊಳ್ಳುತ್ತಿದ್ದ ವಿಚಾರವನ್ನ ನನಗೆ ತಿಳಿಸಿದ ಅಜ್ಜಿಗೆ ಧನ್ಯವಾದ ಹೇಳಿ ನಾನು ಅಲ್ಲಿಯೆ ಇರಲು ಬಯಸಿದೆ."ಅಲ್ಲೇ ಇದ್ದು ಇಂದಿನ ಮಕ್ಕಳೆ ನಾಳೆಯ ಸುಂದರ ಸಮಾಜದ ಪ್ರಜೆಗಳು"ಅವರ ಮನ ಗೆದ್ದು ಅವರಿಗೆ ವಿದ್ಯಾದಾನ ಮಾಡಲು ಪ್ರಾರಂಭಿಸಿದೆ.ನಾನು ರೈತನಾಗಿ ನಾಟಿ ಮಾಡಿದೆ ಶಿಕ್ಷಕನಾಗಿ ಪಾಠಮಾಡಿದೆ ಒಟ್ಟಾಗಿ ಎಲ್ಲಾ ಪಾತ್ರದಲ್ಲಿ ನಾನು ಜೀವ ತುಂಬಿ ಆ ಗ್ರಾಮದಲ್ಲಿ ನನ್ನ ಪ್ರಭುತ್ವ ಸ್ಥಾಪಿಸಿದೆ.ಆ ಗ್ರಾಮದ ಪ್ರತಿಯೊಂದು ಮಗುವಿಗೂ ನಾನು ಒಳ್ಳೆಯ ಸಂಸ್ಕಾರ ನೀಡಿದ ಕಾರಣ ಪೂಜಾರಿಯ ಮೂಢ ನಂಬಿಕೆ ಮಾಯ ಆಯ್ತು ಕೆಲವೆ ಕೆಲವು ದಿನದಲ್ಲಿ ಅದಕೆ ಕಾರಣ ನನ್ನ ನೀತಿ ಕಥೆಗಳು ಮತ್ತು ಪುರಾಣ ಪ್ರವಚನಗಳು .ಒಂದು ದಿನ ನನಗೂ ಪೂಜಾರಿಗೂ ಸ್ಪರ್ಧೆ ಯು ನಡೆದೆ ಬಿಟ್ಟಿತು ಪೂಜಾರಿ ತನ್ನ ಮೂಢ ನಂಬಿಕೆಯನ್ನ ಉಳಿಸಲು ಎಲ್ಲಾ ಕಸರತ್ತು ಮಾಡಿದ ಆದರೆ ಕೊನೆಗೆ ಸೋತು ನನಗೆ ಶರಣಾದ ಅದಕೆ ಕಾರಣ ನನಗೆ ನನ್ನ ಗುರು ಕಲಿಸಿದ ವಿದ್ಯೆ ಮೆರೆಯಿತು ಆ ಗ್ರಾಮದಲ್ಲಿ ವಿದ್ಯಾ ದಾನ ಶ್ರೇಷ್ಠ ದಾನ ಎಂದರೆತೆನು ನಾನು ಅದರ ಪರಿಣಾಮ ಇಂದು ಆ ಗ್ರಾಮದಲ್ಲಿ ಎರಡು ಮೂರು ವಿದ್ಯಾಕೇಂದ್ರಗಳನ್ನ ಸ್ಥಾಪಿಸಿ ಆದರ್ಶ ಗ್ರಾಮ ವನ್ನಾಗಿ ಮಾಡಿದ ತೃಪ್ತಿ ಯು ಸಹ ನನಗೆ ದೊರೆಯಿತು.ಒಳ್ಳೆಯ ವಿಚಾರ ಒಳ್ಳೆಯದನ್ನು ಮಾಡಲು ಪ್ರೇರಣೆ ಆಗುತ್ತದೆ ಎಂಬ ಆಚಾರವನ್ನು ನಾನು ನಂಬಿದೆ ಇತರರನ್ನು ನಂಬಿಸಿದೆ.ಧನ್ಯವಾದಗಳು.
- ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ.
ಸಾ!! ಭೈರಾಪೂರ
ತಾ!ಜಿ!!ಕೊಪ್ಪಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ