ಭಾನುವಾರ, ಸೆಪ್ಟೆಂಬರ್ 26, 2021

ಸ್ಪಂದನ ಸಿರಿ ಸಾಹಿತ್ಯ ವೇದಿಕೆ ಕೋಲಾರ : ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಉಪನ್ಯಾಸ ಕಾರ್ಯಕ್ರಮದ ವರದಿ.

ಸ್ಪಂದನ ಸಿರಿ ಸಾಹಿತ್ಯ ವೇದಿಕೆ ಕೋಲಾರ ಜಿಲ್ಲಾ ಘಟಕದ ಉದ್ಘಾಟನೆ.
ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವಿನೂತನವಾದ ಸಹೃದಯ ಸಂಗಮ ಬಳಗ, ಬದುಕು ಬರಹದ  ೫೧ನೇ ಮಾಲಿಕೆಯಲ್ಲಿ ದಿ-೨೬-೦೯-೨0೨೧ ರಂದು ಅಂತರ್ಜಾಲ ತಾಣ ಗೂಗಲ್ ಮೀಟ್ ನಲ್ಲಿ  ಕೋಲಾರ ಜಿಲ್ಲಾ ಘಟಕದ ಉದ್ಘಾಟನೆ, ಹಾಗೂ  ಡಿ.ವಿ.ಜಿ. ಯವರ ವಿಚಾರಧಾರೆ, ದೇಹಾಂಗ ದಾನದ ಕುರಿತ ಉಪನ್ಯಾಸ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.
 ಶ್ರೀ ರಾಜ್ ಕುಮಾರ್ ವಿ. ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಪಂದನ ಸಿರಿ ವೇದಿಕೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷರು ಆದ  ಶ್ರೀಮತಿ ಕಲಾವತಿ ಮಧುಸೂದನ, ಹಾಗೂ   ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ  ಡಾ. ನಾಗಮಣಿ ಸಿ. ಎಂ. ಕೋಲಾರ ಹಾಗೂ  ಶ್ರೀಮತಿ ಶುಭಮಂಗಳ ಹಾಸನ ಇವರು ಕೋಲಾರ ಜಿಲ್ಲಾ ಘಟಕಕ್ಕೆ ಶುಭಾಶಯಗಳನ್ನು ಕೋರಿದರು.

 
ಶ್ರೀ ವರುಣ್ ರಾಜ್ ಜೀ ಇವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡುತ್ತಾ ಸ್ಪಂದನ ಸಿರಿ ಸಾಹಿತ್ಯ ವೇದಿಕೆಯು ನಡೆದು ಬಂದ  ಹಾದಿ ಹಾಗೂ ಅವರ ಸೇವಾ ಕಾರ್ಯಕ್ರಮಗಳನ್ನು ಪ್ರಶಂಸಿಸಿದಲ್ಲದೇ, ಸಾಹಿತ್ಯಕ್ಕೆ ಅನ್ಯ ಎಂಬುದು ಇಲ್ಲ ಅದೇ ಮಾದರಿಯಲ್ಲಿ ನಮ್ಮ ವೇದಿಕೆ ಸೀಮೆಗಳಿಲ್ಲದೇ ಸೇವೆಯನ್ನು ಮಾಡುತ್ತಾ ಬರುತ್ತಿದೆ. ಇದನ್ನ ಕೋಲಾರ ಜಿಲ್ಲಾ ಘಟಕದ ಪಧಾದಿಕಾರಿಗಳು ಅನುಸರಿಸಬೇಕು ಎಂದು ಆಶಯ ವ್ಯಕ್ತಪಡಿಸಿ ಶುಭಾಶಯಗಳನ್ನು ಕೋರಿದರು. ದೇಹಾಂಗದಾನದ ಕುರಿತು ಸರ್ಕಾರಿ ವೈದ್ಯಕೀಯ ಕಾಲೇಜು, ಹಾಸನದ ಶರೀರಶಾಸ್ತ್ರ ವಿಭಾಗದ ವೈಧ್ಯರಾದ  ಡಾ||ಪ್ರಕಾಶ್ ಬಿ.ಎಸ್. ಇವರು ಉಪನ್ಯಾಸ ನೀಡುತ್ತಾ ದೇಹಾಂಗದಾನದ ಮಹತ್ವ, ದೇಹಾಂಗದಾನದ ಪ್ರಕ್ರಿಯೆಗಳು, ಹಾಗೂ ಆಸ್ಪತ್ರೆ ದಾನವಾಗಿ ಪಡೆದ ಮೃತ ದೇಹವನ್ನು ವೈಧ್ಯಕೀಯ ಬಳಕೆಯ ನಂತರ ದೇಹಕ್ಕೆ  ಸೂಕ್ತ ಸಂಸ್ಕಾರಗಳನ್ನು ಒದಗಿಸಲಾಗುವುದು. ಇದರ ಕುರಿತು ಹಲವು ಅಪಕಲ್ಪನೆಗಳಿವೆ ಹಾಗೂ ಧಾರ್ಮಿಕ ಮೌಡ್ಯಗಳಿವೆ ಇದನ್ನು ಅರಿತು ಎಲ್ಲರೂ ದೇಹದಾನಕ್ಕೆ ಮುಂದಾಗಬೇಕೆಂದು ವಿವರಿಸಿದರು. ಉಪನ್ಯಾಸದ ನಂತರ ಅರ್ಥಪೂರ್ಣವಾದ ಸಂವಾದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ ಕುಮಾರ್ ವಿ ಇವರು ಕಾರ್ಯಕ್ರಮದ ಯಶಸ್ಸು ಹಾಗೂ ಎಲ್ಲರ ಸಹಕಾರಕ್ಕಾಗಿ ಧನ್ಯವಾದಗಳನ್ನು ತಿಳಿಸಿ, ಮುಂದೆಯೋ ಎಲ್ಲರ ಸಹಕಾರ ಹೀಗೆ ಇರಬೇಕೆಂದು ಆಶಯ ವ್ಯಕ್ತಪಡಿಸಿದರು.
 ಕಾರ್ಯಕ್ರಮದಲ್ಲಿ ಶ್ರೀ ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ,  ಶ್ರೀಮತಿ ಲಕ್ಷ್ಮಿ ಮೂರ್ತಿ, ಅರಕಲಗೂಡು, ಶ್ರೀಮತಿ ಸಿ ಎನ್ ಭಾಗ್ಯಲಕ್ಷ್ಮಿ ಮಂಡ್ಯ, 
ಶ್ರೀಮತಿ ಸುನಂದ ಕೃಷ್ಣ, ಗಾಯಕಿ,  ಶ್ರೀಮತಿ ಆಶಾ ಶ್ರೀಧರ್ ಶಿವಮೊಗ್ಗ, ಶ್ರೀಮತಿ ರೇಷ್ಮಾ ಆಲೂರು, ಶ್ರೀಮತಿ  ಕೆ ಕೆ ಮಮತ ಪ್ರವೀಣ್, ಮಾಲಾ ಪ್ರಸಾದ್, ಶ್ರೀಮತಿ  ಲಲಿತಾ ಕೆ ಆಚಾರ್, ಶ್ರೀಮತಿ ಲಲಿತಮ್ಮ ಆರ್, ಶ್ರೀ ಅನಸೂಸಲು ಬಾಲಕೃಷ್ಣ, ಶ್ರೀಮತಿ ಅಲಿಮಾ ಮುಂತಾದವರು ಗೀತ ಗಾಯನ, ವಚನ ಗಾಯನ‌‌ ಮುಂತಾದ ಕಾರ್ಯಕ್ರಮಗಳ ಮೂಲಕ ಕೋಲಾರ ಜಿಲ್ಲಾ ಘಟಕಕ್ಕೆ ಶುಭಾಶಯಗಳನ್ನು ಕೋರಿದರು.

ವರದಿ - ಗೌತಮ್ ಗೌಡ, ಕೀರಣಗೆರೆ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...