ಭಾನುವಾರ, ಸೆಪ್ಟೆಂಬರ್ 26, 2021

ಭೂತ (ಕವಿತೆ) - ಶ್ರೀ ತುಳಸಿದಾಸ ಬಿ ಎಸ್‌.

ಭೂತ

ಗಟ್ಟಿಯಾಗಿ ನಿಂತು ನಾನು ಮುಟ್ಟಿ ಗುರಿಯನು ಹಿಗ್ಗಿದೆ
ಚಿಟ್ಟೆಯಂತೆ ಬಣ್ಣ ಬಾಳಿಗೆ ನಲಿದು ಕುಣಿದೆನು ಸುಗ್ಗಿಗೆ
ಒಟ್ಟಿನಲ್ಲಿ  ಕಷ್ಟ ಸರಿಸಿದ ಶಕ್ತಿಗೊಮ್ಮೆಲೆ ಬಾಗಿದೆ
ನೆಟ್ಡ ಕನಸಿಗೆ ರೆಕ್ಕೆ ಬಂದಿತು ದೂರದೂರಿಗೆ ಸಾಗಿದೆ

ಬಂಧು ಬಳಗ ದೂರ ಮಾಡಿತು ಇಲ್ಲಿ ಬಂದೆ ಬೆವೆತೆನು
ಬೆಂದು ಹೋದೆ ಇಲ್ಲಿನುಳಿವಿಗೆ ನೊಂದ ಜೀವ ಸವೆದಿದೆ
ಚೆಂದದಿಂದ ಕಂಡ ಕನಸಿಗೆ ಭೂತದ ಈಟಿಯ ತಿವಿತವು
ಇಂದೆ ಭರವಸೆ ಕಿರಣವೊಂದನು ರವಿಯೆ ಹೊತ್ತು ತರುವೆಯ

ಕಷ್ಟ ಪಡಲು ಮದುವೆ ಆಯಿತು ನಷ್ಟ ನಲ್ಲನು ದೂರವು
ಇಷ್ಟ ಪಟ್ಟ ಗುರುವಿನ ಹುದ್ದೆ ನರಕ ತೋರತ ನಡೆದಿದೆ
ಚೇಷ್ಟೆ ಭೂತವು ಕುಣಿಕೆ ಬಿಗಿದು ವಿಕಟವಾಗಿ ನಗುತಿದೆ
ನಷ್ಟ ಜೀವಕೆ ವರ್ಗವೆಂದು ನೋವು ಕಾಣದೆ ಕಣ್ಣಿಗೆ

ಇಂತ ಕಷ್ಟ ಇರದು ಎಂದು ಮೆಚ್ಚಿ ಹುದ್ದೆಗೆ ಸೇರಿದೆ
ಅಂತು ನಮ್ಮ ಒಂಟಿ ಮಾಡಿ ಸುಖವ ತಾನು ಕಸಿದಿದೆ 
ಬಂತು ಕನಸಿಲಿ ವರ್ಗಭೂತವು ಬೆಚ್ಚಿ ಬೀಳುವೆ ಅನುದಿನ
ಚಿಂತೆ ಕಾಡಿದೆ ಮಗುವು ಅಳುತಿದೆ ತಂದೆ ಮುಖವನು ಕಾಣದೆ

ಅಗಲಿಸೆಮ್ಮ ಕಾಡಬೇಡ ಕಣ್ಣು ತೆರೆಸು ಪ್ರಭುಗಳ
ನಗುತ ಎಲ್ಲರು ಜೊತೆಗೆ ಬಾಳುವ ದಿನವ ಬೇಗ ಕರುಣಿಸು
ಬಿಗದ ಉಸಿರು ಸಡಿಲವಾಗಲಿ ಮೊಗದಿ ನಗವನು ಮರಳಿಸು
ಬೇಗಬೇಗನೆ ವರ್ಗ ನಡೆದು ಎಲ್ಲರೊಟ್ಟಿಗೆ ಬಾಳಲಿ
- ಶ್ರೀ ತುಳಸಿದಾಸ ಬಿ ಎಸ್‌
ಶಿಕ್ಷಕರು ಗೊರೇಬಾಳ ಕ್ಯಾಂಪ್, ಸಿಂಧನೂರು, ರಾಯಚೂರು (ಜಿ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...