ಬಯಲ ಹಕ್ಕಿ
ಪಂಜರದ ಕಂಬಿ ಮುರಿದು
ಆಗಸದಗಲ ರೆಕ್ಕೆ ಚಾಚುವ
ಬಯಲಕ್ಕಿಯಾದೆ!
ಅನಂತ ತಾ ಅನಂತ ಬಯಲು
ಕೇಳುವವರು ಹೇಳುವವರು ಮೊದಲಿಲ್ಲ!
ಎಷ್ಟು ಬೇಕೋ ಅಷ್ಟು ಹಾರುವೆ
ಧಣಿದರೆ ಎಲ್ಲಿ ಬೇಕೋ ಅಲ್ಲಿ ಮಲಗುವೆ!
ಕೂಗಿದರೂ ಕಿರುಚಿದರೂ
ಯಾರು ಕೇಳರು!
ಬಟ್ಟಾ ಬಯಲು!
ಯಾರು ನನ್ನ ಕೊಂದರೂ
ಯಾರು ಹೆಕ್ಕಿ ತಿಂದರೂ
ಯಾರು ಕೇಳರು!
ಎಷ್ಟು ಬೇಕೋ ಅಷ್ಟು ತಿನ್ನುವೆ
ಒಂದು ತುತ್ತು ಕೂಳಿಕ್ಕುವವರೂ ಇಲ್ಲ !
ಎಷ್ಟು ಬೇಕೋ ಅಷ್ಟು ಹಾಡುವೆ
ಗಂಟಲೋಣಗಿದರೆ
ಹನಿ ನೀರು ಬಿಡುವವರೂ ಇಲ್ಲ!
ಎಷ್ಟು ಬೇಕೋ ಏನು ಬೇಕೋ
ಮಾತನಾಡುವೆ,
ಮಾತನಾಲಿಸುವವರು ಒಬ್ಬರೂ ಇಲ್ಲ!
ಬಯಲಿನಷ್ಟು ಏಕಾಂಗಿ
ಮತ್ತೆ ಪಂಜರಸೇರಲು ವಲ್ಲದ ಮನ!
ಈ ಬಯಲಿನಲಿ
ಎಷ್ಟು ಹಾರಿದರೇನು?
ಎಷ್ಟು ಹಾಡಿದರೇನು?
ನನ್ನದೂ ಎಂಬ ಗೂಡಿಲ್ಲ!
ನನ್ನವರು ಮೊದಲೇ ಇಲ್ಲ
ಬರೀ ಹಾರಾಟ, ಬರೀ ಹಾರಾಟ
ನನ್ನವರಿಲ್ಲ ಎಂಬ ಗೋಳಾಟ..!!
- ಗೌತಮ್ ಗೌಡ
ಕೀರಣಗೆರೆ, ರಾಮನಗರ. 9902549766.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
Gad
ಪ್ರತ್ಯುತ್ತರಅಳಿಸಿFriendship is great than relationship. Is it right ? Options: 1) No 2) yes 3) What? 4) why? Please you will mark on the options.
ಪ್ರತ್ಯುತ್ತರಅಳಿಸಿ