ಗಾದೆ : ವಿಸ್ತರಣೆ ಮತ್ತು ವಿಶ್ಲೇಷಣೆ
೧) ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅಲೆದಾಡಿದರಂತೆ.
ಗಾದೆಗಳು ಹಿಂದಿನ ಕಾಲದಿಂದಲೂ ಬಂದಂತ ಒಂದು ಅನುಭವದ ಮಾತುಗಳು. ಮೊದಲಿನ ಕಾಲದಲ್ಲಿ ಹಿರಿಯರು ಯಾವುದಾದರೊಂದು ಸಂದರ್ಭಕ್ಕೆ ತಕ್ಕಂತೆ ಮಾತನಾಡಿರುವ ರು ಅದು ನಿಜವಾಗಲೂ ಸತ್ಯವೇ ಆಗಿರುತ್ತದೆ. ಅವನ್ದು ಅನುಭವದ ಮಾತು ಗಾದೆ ಮಾತಾಗಿ ಪರಿವರ್ತನೆಗೊಳ್ಳುವುದು.
ಉದಾಹರಣೆಗೆ ಹನುಮನ ದಿನದಲ್ಲಿ ಒಬ್ಬ ಹುಡುಗನಿಗೆ ಅವನಿಗೆ ತಕ್ಕ ಕನ್ಯೆಯನ್ನು ಹುಡುಕಬೇಕಾಗುತ್ತದೆ. ಹಾಗೆಯೇ ಅನೇಕ ಕಡೆ ವಿಚಾರ ಕೂಡ ಮಾಡಿರುವರು. ತಮಗೆ ಹೊಂದಾಣಿಕೆಯಾಗುವಂತೆ ಕಣ್ಣೀರನ್ನು ಅವರು ಹುಡುಕಾಡುತ್ತಾ ಹೋಗುತ್ತಾರೆ. ಹೀಗೆ ಎರಡು ವರ್ಷ ಕಳೆಯುವರು ಅವರಿಗೆ ತಮ್ಮ ತಮಗೆ ಸರಿಸಮನಾದ ಕನ್ಯೆ ಬೇಕಾಗಿರುವುದು ಹೀಗಾಗಿ ಅವರು ಮನೆಯಲ್ಲಿ ವಿಚಾರವನ್ನೇ ಮಾಡಿರಲಿಲ್ಲ ಒಂದು ದಿನ ತಂದೆಯ ಕಡೆಯಿಂದ ಒಂದು ದೂರದ ಸಂಬಂಧಿ ಇರುವುದು ಗೊತ್ತಾಗುವುದು ನಾಗಗಳ ತಾಯಿ ಎಂದು ವಿಚಾರಿಸಿದ ಮಧ್ಯಸ್ಥಿಕೆ ವಹಿಸುವ ವ್ಯಕ್ತಿಯು ಹೇಳವನು. ಆಗ ಆ ಹುಡುಗಿಯನ್ನು ನೋಡಲು ಹೋದಾಗ ಅವರಿಗೆ ಒಪ್ಪಿಗೆ ಆಗುವುದು ಆಗ ನಾವು ಈ ಗಾದೆ ಮಾತನ್ನು ನೆನಪು ಮಾಡಿಕೊಂಡರೆ ಅದು ನಿಜ ಆಗುತ್ತದೆ. ಅದೇನೋ ಹೇಳ್ತಾರಲ್ಲ ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅಲೆದಾಡಿದದಂತೆ ಹಾಗಾಯಿತು. ಮೊದಲಿನ ಹಿರಿಯರು ಇಂಥ ಸಂದರ್ಭl ಸರಿಯಾದ ಹೇಳಿಕೆ ಕೊಡುವದು ಸಹ ಅಷ್ಟೇ ಮುಖ್ಯ. ಇಲ್ಲದಿದ್ದರೆ . ಅತಿಯಾದ
ಸಂದರ್ಭದಲ್ಲಿ ಆಡಿದ ಮಾತುಗಳು ಗಾದೆ ಮಾತಾಗಿ ಹೊರಬರುವವು.
೨) ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲಲ್ಲಾ.
ಒಂದೊಂದು ಗಾದೆಗಳು ಒಂದೊಂದು ಅರ್ಥವನ್ನು ಕೊಡುವವು. ರೂಗಳನ್ನು ಅವಲೋಕಿಸಿ ನೋಡಿದಾಗ ಆದ ಅನುಭವಗಳು ನೆನಪಾಗುವ ವು. ಆ ಸಂದರ್ಭಕ್ಕೆ ಆ ಮಾತುಗಳು ಒಂದಕ್ಕೊಂದು ಹೊಂದಾಣಿಕೆ ಇರುವದು. ಹೀಗೊಂದು ಗಾದೆ ನೆನಪಾಯಿತು ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲಲ್ಲ. ಈ ಮಾತನ್ನು ಯಾಕೆ ಅಂದ್ರು?.
ಇವಾಗ ಒಂದು ಮನೆಯಲ್ಲಿ ಆ ಮನೆಯ ಜವಾಬ್ದಾರಿಯನ್ನು ಹೊತ್ತಂತ ವ್ಯಕ್ತಿಯಾಗಲಿ, ಮಹಿಳೆ ಯಾಗಲಿ, ಕಿರಿಯರಲ್ಲಿ ಹಿರಿಯರಲ್ಲಿ ಯಾರೇ ಇರಲಿ ಆ ಮನೆಯ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿರುತ್ತಾರೆ. ಒಂದು ವೇಳೆ ಅವರಿಗೆ ಏನಾದರೂ ಆರೋಗ್ಯ ಸಮಸ್ಯೆ ಅಥವಾ ಎಲ್ಲಿಯಾದರೂ ಹೋಗುವುದು ಇಂಥ ವೇಳೆಯಲ್ಲಿ ಏನಾದರೂ ಸಮಸ್ಯೆ ಬಂದರೆ ಅವರು ಇಲ್ದೇನೇ ಇರಬಹುದು ಆ ಸಂದರ್ಭದಲ್ಲಿ ಇದ್ದವರು ಮುಂದಿನ ಕಾರ್ಯವನ್ನು ನಡೆಸಿಕೊಂಡು ಹೋಗಲೇ ಬೇಕಾಗುವುದು. ಆ ಸಂದರ್ಭದಲ್ಲಿ ಈ ಮಾತನ್ನು ಅಲ್ಲಿ ಪ್ರಸ್ತಾಪ ಮಾಡಬೇಕಾಗುತ್ತದೆ ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲಲ್ಲ ಎಲ್ಲವೂ ನೀಡದೆ ನಡೆಯುತ್ತೆ ಇದ್ದವರು ಮಾಡಿಕೊಂಡು ಹೋಗಬೇಕು ಅಂತ ಈ ಗಾದೆ ಮಾತು ಅಲ್ಲಿ ಈ ಗಾದೆ ಮಾತು ಅಲ್ಲಿ ಪ್ರಸ್ತಾಪವಾಗುವುದು. ದಿನನಿತ್ಯದ ಕಾರ್ಯಗಳನ್ನು ಮತ್ತು ಯಾರಾದರೂ ಜವಾಬ್ದಾರಿ ವಹಿಸಿಕೊಂಡು ಮಾಡಲಿ ಬೇಕಾಗುವುದು ಹಾಗೆಯೇ ಮುಂದುವರಿಸಿಕೊಂಡು ಹೋಗುವರು. ಇದೆ ಅರ್ಥ ಕೊಡುವುದು ಈ ಗಾದೆ ಮಾತು.
✍️ ಸವಿತಾ ಆರ್ ಅಂಗಡಿ ಮುಧೋಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ