ಬುಧವಾರ, ಸೆಪ್ಟೆಂಬರ್ 22, 2021

ಕಲ್ಪನೆಯ ಚೆಲುವೆ( ಚೇತನ) (ಕವಿತೆ) - ಯಮನೂರಪ್ಪ ಎಸ್ ಅರಬರ.

ಕಲ್ಪನೆಯ  ಚೆಲುವೆ( ಚೇತನ)

ಕಲ್ಪನೆಗೂ ಮೀರಿದೆ ಚೆಲುವೆ ನಿನ್ನ ಆ ಸೌಂದರ್ಯ...!
ನಿನ್ನೆಯ ಪ್ರೀತಿ ಪ್ರೇಮವ ಬಯಸುತ್ತಿದೆ ನನ್ನ ಹೃದಯದ ಆಂತರ್ಯ...!!
ನಿನ್ನ ಚೆಲುವ ನೋಡಿ ನಾಚುತ್ತಿದ್ದಾನೆ ದಿನ ಬೆಳಗೊ ಸೂರ್ಯ...!
ಮಿಂಚುವ ನಿನ್ನ ಚೆಲುವ ನೋಡಿ ಮರೆತೆ ಬಿಟ್ಟ ಬೆಳದಿಂಗಳ ಚಂದ್ರ ತನ್ನ ಕಾರ್ಯ...!!

ಹೃದಯವನು ಕದಿಯುವ ಹಾಗೆ ಇದೆ ಆ ನಿನ್ನ ನೋಟ...!
ನಿನ್ನ ಪ್ರೀತಿಸಲು ತೆರೆದಿರುವೆ ನನ್ನ ಮನದ ಪುಟ....!!
ನಿನ್ನ ರೂಪವ ನೋಡಿ ಅರಳಿ ನಿಂತಿದೆ ಎನ್ನ ಹೃದಯದ ಹೂದೋಟ...!
ನೀ ನನ್ನ ಪರಿಶುದ್ಧ ಪ್ರೀತಿಯನ್ನು ಒಪ್ಪಿದರೆ ನನ್ನ ಜೀವನವೆಲ್ಲಾ ಹಬ್ಬದೂಟ...!!

ರಂಭೆ ಊರ್ವಶಿ ಮೇನಕೆಯರನ್ನೇ ಮೀರಿಸುವ ನಿನ್ನ ಮೈ ಮಾಟದ ಬಣ್ಣ...!
ಪ್ರೀತಿಯ ಕಿರಣ ತೋರುತಿದೆ ನಿನ್ನ ಕಾಡಿಗೆಯ ಕಣ್ಣ...!!
ಅವಳ ಅಂದ ಚಂದಕ್ಕೆ ಯಾರು ಸಾಟಿ ಇಲ್ಲವ ಅಣ್ಣ....!
ಅವಳ ನಗುವಿನ ಸಿಂಚನಕ್ಕೆ ಸ್ವಾದ ಕಳೆದುಕೊಂಡಿದೆ ಮಾವಿನ ಹಣ್ಣ....!!

ಅವಳ ವೈಯ್ಯಾರಕೆ ಮನ ಸೋತ ಬೆಳದಿಂಗಳ ಚಂದಿರ...!
ಅವಳ ಗೆಜ್ಜೆಯ ನರ್ತನವೇ ಭುವಿಹೊಳು ಬಲು  ಸುಂದರ...!!
ಭಾವನೆಯ ಮಾತುಗಳನ್ನು ಮಾತನಾಡುವಳು ಸರ ಸರ....!
ಅವಳೇ ನನ್ನ ಪ್ರೀತಿಯ ಜೀವನದ ಬದುಕಿಗೆ  ಜೀವನಾಧಾರ...!!!!
  - ಯಮನೂರಪ್ಪ ಎಸ್ ಅರಬರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...