ಸೋಮವಾರ, ಸೆಪ್ಟೆಂಬರ್ 20, 2021

ಮರೆತೇನೆಂದರ ಮರೆಯಲೆಂಗ - ಬಸವರಾಜ ನಾಗೂರ, ಮುದ್ದೇಬಿಹಾಳ.

ಮರೆತೇನೆಂದರ ಮರೆಯಲೆಂಗ

ಮರತೇನೆಂದರ ಮರೆಯಲೆಂಗ ಗುರುನಾಥರನ್ನ
ಮಧುರ ನೆನಪಿನೊರತೆ ಬಿಟ್ಟುಹೋದ ಯೋಗಿಯನ್ನ ॥ । ಪಲ್ಲವಿ । 

ಉತ್ತಿ ಬಿತ್ತಿ ಬೆವರು ಚೆಲ್ಲಿ ಕಣಜ ತುಂಬಿದ ರೈತನನ್ನ
ಶರಣ ಗುಣದ ಬಸವ ತತ್ವದ ಸರಳ ದಾರ್ಶನಿಕನನ್ನ ॥ ।ಅನುಪಲ್ಲವಿ ।

ಹೃದಯತುಂಬ ಸವಿಜೇನ ತುಂಬಿದ ತಾಯಿಯನ್ನ
ಬಡತನವನಪ್ಪಿ ಸಂಸ್ಕಾರವ ಕಲಿಸಿದ ತಂದೆಯನ್ನ
ಸುಜ್ಞಾನ ಸದ್ವಿಚಾರ ಸಂಸ್ಕೃತಿಯರುವಿದ ಗುರುಗಳನ್ನ
ಬಣ್ಣಬಣ್ಣದ ಮಧುರ ನೆನಪು ತುಂಬಿದ ಗೆಳೆಯರನ್ನ॥ ।೧। ।ಪ।

ಕಲಕೇರಿ ಜಾತ್ರ್ಯಾಗ ಅಪ್ಪನ್ಹೆಗಲೇರಿ ನೋಡಿದ ತೇರನ್ನ
ಮಂಜನಾಥನ ಸನ್ನಿದಾನದಲನ್ನಪ್ರಸಾದದ ಸವಿಯನ್ನ
ನಡಿಗೇರಿಲಿಂಗನ ಹೊತ್ತು ಕೃಷ್ಣೆಯೊಡಲಿಗೆ ಹೋದದನ್ನ
ಮನದ ಬ್ರಾಂತಿ ಕಳಚಿದ ಗ್ರಾಮದೇವಿ ದ್ಯಾಮವ್ವನನ್ನ ॥ ।೨। ।ಪ।

ಮೊದಲ ನೋಡಿದ ಚೆಲುವಿಯ ಮಿಂಚಿನ ಕಣ್ಣನ್ನ
ಮೊದಲ ಬರೆದ ಪ್ರೇಮಪತ್ರದೆರಡು ಸಾಲುಗಳನ್ನ
ಮೊದಲಸಲ ಅರಳಿದ ಅನುರಾಗದ ಅನುಭವವನ್ನ
ಮೊದಲಸಲ ಮಳೆಯಲಿ ನೆನೆದ ಮಧುರ ಕ್ಷಣವನ್ನ ॥ । ೩। ।ಪ।

- ಬಸವರಾಜ ನಾಗೂರ, ಮುದ್ದೇಬಿಹಾಳ.


( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...