ಕಡಲ ಭಾರ್ಗವ
ಸುರಿಸುರಿದು ಬರುವ ಮಳೆ ಹನಿಯು
ಕಡಲನ್ನು ಹುಡುಕುತೈತೇ..... ತೀರ
ಮುಗಿಲ ಹನಿ ಬಿದ್ದ ಕೆರೆ ಕುಂಟೆ ಹತ್ತಿರ
ಎಲ್ಲೆಲ್ಲು ಹುಡುಕಿ ಒಂದಾಗಿ ಸೇರಿ
ಬಂದಾವು ರಾಶಿ ರಾಶಿ......
ಮನವೇಕೊ ಕೇಳುತ್ತಿದೆ ಒಲವೆತ್ತಿ ತೋರಿ
ಗರಿ ಕೆದರಿ ಹೇಳುತ್ತಿದೆ ಕೂಗಿ ಕೂಗಿ
ಗಿರಿಶಿಖರದೊಳಗೆ ಚಿಗುರುತ್ತಿದೆ ಹೇಳಿ
ಒಳಗೊಳಗೆ ಹಸಿರು ಚಿಗುರಿದೆ ಕೇಳಿ
ಬರಿ ಬಾದೆಯೊಳಗೆ ಉಲುಸಾದ ಕಡಲು
ಬರಿದಾಗಲಿಲ್ಲ ತೊರೆ ತೊರೆಯ ಒಡಲು
ಆ ಮುಗಿಲನೊಮ್ಮೆ ನೋಡುತಲಿ ಬಾಗಿ
ಕೂಡಿದವು ಕರಿ ಕಪ್ಪು ಮೋಡಗಳು ಸಾಗಿ
ತಡವಾಯ್ತು ಹನಿಗಳೆ ಒಣಗುತ್ತಿದೆ ಗಂಟಲು
ಸುರಿಸುರಿದು ಬರುತ್ತೈತೆ ಹನಿಹನಿಗಳ ಸಾಲು
ಎಲ್ಲಾ ಮೌನ...ಕಾಡು ಮೇಡುಗಳ ತಾಣ
ಭೋರ್ಗರೆದು ಬರುತ್ತಿರುವ ಮಗಿಲಿನ ಬಾಣ
ತುಟಿಯ ಬಿಚ್ಚಿದರು ಹೊರಬಾರದ ಮಾತು
ಕಣ್ಮುಚ್ಚಿ ಕುಳಿತ್ತಿದ್ದ ಕಡಲ ತೀರದ ಭಾರ್ಗವ
ದೂರದ ತೀರದಲಿ ನೋಡುತ್ತ ಕುಳಿತ್ತಿರುವ
ಹನಿ ಹನಿಗಳ ಪೋಣಿಸುವ ಕಡಲ ಸತ್ಯವ
- ಜಿ ಟಿ ಆರ್ ದುರ್ಗ
ಜಿ ಹೆಚ್ ಎಲ್
ಬಂಗಾರಪೇಟೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ