ಅಡುಗೆ ಹಾಳಾದರೆ ಒಂದು ದಿನ ನಷ್ಟ, ಬೇಳೆ ಹಾಳಾದರೆ ಒಂದು ವರ್ಷ ನಷ್ಟ, ಆದರೆ ವಿದ್ಯೆ ಹಾಳಾದರೆ ಇಡೀ ಜೀವನವೇ ನಷ್ಟ. ಎಂದು ಎ. ಪಿ. ಜೆ. ಅಬ್ದುಲ್ ಕಲಾಂ ಅವರು ಹೇಳಿದ್ದಾರೆ. ಇದು ಎಷ್ಟೋಂದು ಸತ್ಯವಾದ ಮಾತು ಅಲ್ವ!
ಪುರಾತನ ಕಾಲದಿಂದಲೂ ಗುರು ಎನ್ನುವ ಅದ್ಬುತ ಶಕ್ತಿಗೆ ಅವರ ಘನತೆ, ಗೌರವಕ್ಕೆ ತಕ್ಕ ಮರ್ಯಾದೆ ಸಿಗುತ್ತಲೇ ಬಂದಿದೆ.
ಜೀವನದಲ್ಲಿ ನಾವು ಏನೇ ಆಗಲಿ, ತಂದೆ- ತಾಯಿಯ ಆಶೀರ್ವಾದದ ಜೋತೆಗೆ ಒಬ್ಬ ಉತ್ತಮವಾದ ಗುರುವಿನ ಮಾರ್ಗದರ್ಶನವು ನಮಗೆ ಅವಶ್ಯಕವಾಗಿ ಬೇಕಾಗಿರುತ್ತದೆ. ನಾವು ದೊಡ್ಡ ಹುದ್ದೆಯಲ್ಲಿ ಇರಲಿ, ಚಿಕ್ಕ ಹುದ್ದೆಯಲ್ಲಿ ಇರಲಿ ಆ ಹುದ್ದೆ ಪಡೆಯೋ ಘನತೆ, ಅರ್ಹತೆ, ಕಲಿಸೋ ಏಕೈಕ ವ್ಯಕ್ತಿ ಒಬ್ಬ ಗುರು.... ಶಿಕ್ಷಣ ಕಲಿಸೋ ಶಿಕ್ಷಕ ಉತ್ತಮ ಚಾರಿತ್ರೆ ಹೊಂದಿರುತ್ತಾರೆ. ಯಾವ ಒಬ್ಬ ವ್ಯಕ್ತಿ ಸೇವೆಯಲ್ಲಿ ತಮ್ಮನ್ನು ತಾವೇ ಸ್ವತಃ ತೊಡಗಿಸಿಕೊಂಡಿರುವರೆಂದರೆ ಅದು ಗುರುಗಳಿಂದ ಮಾತ್ರ ಸಾಧ್ಯ. ಗುರುಗಳು ತಮ್ಮ ಶಿಷ್ಯರಲ್ಲಿ ಸಾಧಿಸುವ ಛಲ , ಸ್ಥೈರ್ಯವನ್ನು ತುಂಬುತ್ತಾರೆ. ಪ್ರತಿಯೊಬ್ಬ ಶಿಷ್ಯರ ಪಾಲಿಗೂ ಗುರುಗಳೇ ಶಕ್ತಿಯಾಗಿರುತ್ತಾರೆ. ಗುರು ಹೇಳುವ ಈ ಎರಡಕ್ಷರ ಬರೆಯೋದು ಸುಲಭ, ಓದೋದು ಸರಳವಾಗಿದೆ. ಆದರೆ ಆ ಎರಡು ಪದ ಬೆಲೆನೇ ಕಟ್ಟೋಕಾಗದ ಅತ್ಯುತ್ತಮವಾದ , ಅಮೂಲ್ಯವಾದ ರತ್ನ ಪ್ರತಿಯೊಬ್ಬ ಶಿಷ್ಯರ ಬಾಳಿಗೆ. ಗುರಿ ಮುಂದಿರಬೇಕು, ಗುರು ಹಿಂದಿರಬೇಕು. ಅನ್ನುವ ಮಾತಿದೆ. ಹಾಗೆ ಗುರಿಯಿಲ್ಲದ ಜೀವನ, ಗುರುಗಳಿಲ್ಲಿದ ಜೀವನ ಬರಡು ಭೂಮಿಗೆ ಸಮ. ಗಿಡಗಳಲ್ಲಿ ಅರಳಿರೋ ಹೂ ಯಾರದ್ದೋ ಜಡೆಗೆ ಅಂದ ಹೆಚ್ಚಿಸಬಹುದು ಆದರೆ, ಅದಕ್ಕೆ ಯಾವುದೇ ಅಸ್ತಿತ್ವ, ಘನತೆ ಇರೋದಿಲ್ಲ. ಆದರೆ ಅದೇ ಹೂ ದೇವರ ಮುಡಿಗೆ ಏರಿಸಿದರೆ ಜನರು ಪ್ರಸಾದದ ರೂಪದಲ್ಲಿ ಸ್ವೀಕರಿಸುತ್ತಾರೆ. ಗುರು ಕೂಡಾ ಹಾಗೆ ಅಂದ ಇರಲಿ, ಆಕಾರ ಇಲ್ಲದೆ ಇರಲಿ ಗುರುವನ್ನು ದೇವರ ಸ್ಥಾನದಲ್ಲಿ ಪೂಜಿಸೋದು ನಮ್ಮ ಸಂಸ್ಕೃತಿ, ಸಂಸ್ಕಾರ, .. ಸನ್ನಡತೆಯ ಜೋತೆ ಜೊತೆಗೆ ಭಾಷಾ ವಿನ್ಯಾಸ ಸರಳ ರೂಪದಲ್ಲಿ ತಿಳಿಸಿರುವ ನನ್ನ ಗುರುವಾದ ಶ್ರೀಯುತ ನಾಗರಾಜ ಗಾಂವಕರ್ ಸರ್ ರವರ ಬಗ್ಗೆ ನನ್ನೆರಡು ವಾಕ್ಯದಲ್ಲಿ ನಿರೂಪಿಸಿರುವ ಪ್ರಯತ್ನ ನನ್ನದು.
ಇವರ ಪೂರ್ಣ ಹೆಸರು- ನಾಗರಾಜ ಎಲ್ ಗಾಂವಕರ್ , ಇವರ ತಂದೆ - ಲಕ್ಷ್ಮಣ ಗಾಂವಕರ್ ತಾಯಿ- ಪಾರ್ವತಿ ಗಾಂವಕರ್ ಇವರದ್ದು ಕೃಷಿ ಕುಟುಂಬ. ಸ್ವಂತ ದುಡಿಮೆ ಮಾಡಿ, ಕೃಷಿ ಯಲ್ಲಿ ಅದ್ಬುತ ಸಾಧನೆಗೈದವರು. ರಾತ್ರಿ- ಹಗಲು ನೋಡದೆ ದುಡಿದು , ಕೃಷಿಕರು ಕೂಡಾ ಸಾಧಿಸಲು ಯೋಗ್ಯರೆಂದು ಹೆಮ್ಮೆಯಿಂದ ನೂರಾರು ಜನರ ನಡುವೆ ತಲೆಯೆತ್ತಿ ನಡೆದವರು. ಈ ಸುಂದರವಾದ ಕುಟುಂಬಕ್ಕೆ ನಾಲ್ಕು ಮಕ್ಕಳ ಆಗಮನದಿಂದ ಬಹಳ ಸಂತಸದ ಛಾಯೆ ಮೂಡಿತು. ನಾಗರಾಜ್ ಗಾಂವಕರ್, ಹರೀಶ್ ಗಾಂವಕರ್, ಸುರೇಶ್ ಗಾಂವಕರ್, ಸಂತೋಷ್ ಗಾಂವಕರ್. ಈ ನಾಲ್ಕು ಮುತ್ತು ಗಳು ಹೊಳೆಯುವ ಸ್ಪಟಿಕದಂತೆ ವಿಜ್ರಂಭಣೆಯಿಂದ ಇದ್ದರು.
೨೯- ೧೨- ೧೯೬೪ ರಲ್ಲಿ ಲಕ್ಷ್ಮಣ ಗಾಂವಕರ್ ಮತ್ತು ಪಾರ್ವತಿ ಗಾಂವಕರ್ ರವರಿಗೆ ಒಂದು ಗಂಡು ಮಗುವಿನ ಜನನವಾಯಿತು. ಇವರ ಹೆಸರೆ ನಾಗರಾಜ್ ಗಾಂವಕರ್. ಇವರು ನಾಡಮಕ್ಕೇರಿ ಊರಿನಲ್ಲಿ ಕುಮಟಾ ತಾಲೂಕಿನ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಿಸಿದರು. ಇವರು ತಂದೆ- ತಾಯಿಯ ಅಚ್ಚುಮೆಚ್ಚಿನ ಮಗನಾಗಿ ನಡತೆ, ಗಾಂಬಿರ್ಯ ದಲ್ಲಿ ತಂದೆಯನ್ನು ಹೋಗುತ್ತಿದ್ದರು. ಇವರಿಗೂ ಎಲ್ಲರಂತೆ ತಂದೆ- ತಾಯಿಯ ಗೌರವ, ಪ್ರತಿಷ್ಠೆಯನ್ನು ಆಕಾಶದಸ್ಟು ಎತ್ತರಕ್ಕೆ, ಉತ್ತುಂಗದ ಸ್ಥಾನಕ್ಕೆ ಏರಿಸುವ ಛಲವನ್ನು ಹೊಂದಿದ್ದರು. ಇದು ಕೂಡಾ ತಂದೆ- ತಾಯಿಯ ಬಳುವಳಿಯೇ ಆಗಿರುತ್ತದೆ.
ಇವರು ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಡಮಕ್ಕೇರಿಯಲ್ಲಿ ಮುಗಿಸುತ್ತಾರೆ. ಪ್ರೌಢ ಶಿಕ್ಷಣವನ್ನು ಪಿ. ಎಮ್. ಹೈಸ್ಕೂಲ್ ಅಂಕೋಲದಲ್ಲಿ ಮುಗಿಸುತ್ತಾರೆ ಒಳ್ಳೆಯ ಅಂಕ ಪಡೆದು ಶಾಲೆಯ ಕೀರ್ತಿಯ ಜೋತೆಗೆ ತಂದೆ- ತಾಯಿಯ ಕೀರ್ತಿಗೂ ಪಾತ್ರರಾದರು.ಇಲ್ಲಿಂದ ಅವರ ಜೀವನ ಹೊಸ ತಿರುವನ್ನೇ ಪಡೆದುಕೊಂಡಿತು. ಪಿ. ಯು. ಸಿ ಅನ್ನು ಇವರು ಜೆ. ಸಿ ಕಾಲೇಜು ಅಂಕೋಲಾದಲ್ಲಿ ಪಡೆದು ಮುಂದಿನ ವಿದ್ಯಾಬ್ಯಾಸ ಪ್ರಾರಂಭಿಸಿದರು. ಆಂಗ್ಲ ಐಚ್ಛಿಕ ಭಾಷೆಯ ಮೂಲಕ ಪದವಿ ಪೂರ್ವ ಶಿಕ್ಷಣ ಪಡೆದುಕೊಳ್ಳುತ್ತಾರೆ. ಓದಿನ ಜೋತೆ ಜೋತೆಗೆ ನಮ್ಮ ಕಲೆ, ಸಂಸ್ಕೃತಿಗೆ ಹೆಚ್ಚಿನ ಮಹತ್ವ ನೀಡಿದರು. ಯಾರ ಮಾತಿಗೂ ಅಂಜದೇ ಮುನ್ನುಗ್ಗಿ, ಕಾಲೇಜುಗಳಲ್ಲೂ ಹೆಚ್ಚಿನ ಅಂಕ ಪಡೆದರು. ಸ್ನಾತಕೋತ್ತರ ಪದವಿಯನ್ನು ಧಾರವಾಡದಲ್ಲಿ ಮುಗಿಸಿದರು. (M. A) . ನಂತರ ಉಪನ್ಯಾಸಕರ ವೃತ್ತಿ ಪ್ರಾರಂಭಿಸಿದರು. 1991-1992 ರಲ್ಲಿ ಒಂದು ವರ್ಷ ಅವರು ಜೆ. ಸಿ ಕಾಲೇಜು ಅಂಕೋಲಾದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ನಂತರ 1993 ರಲ್ಲಿ ಕೈ. ಪಿ. ಎಸ್. ಸಿ ಮೂಲಕ ನೇರವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಇಲ್ಲಿಂದಲೇ ಅವರು ತಮ್ಮನ್ನು ತಾವು ಸೇವೆಯಲ್ಲಿ ತೊಡಗಿಸಿಕೊಂಡರು. ಇವರ ಸರ್ಕಾರಿ ಸೇವೆ 1993 ಸೆಪ್ಟೆಂಬರ್ 3ರಂದು ಕೆ. ಆರ್ ಪೇಟೆಯಿಂದ ಪ್ರಾರಂಭವಾಯಿತು. ಮಂಡ್ಯ ಜಿಲ್ಲೆಯ ಕೆ. ಆರ್ ಪೇಟೆಯಿಂದ 1995 ರಲ್ಲಿ ಉಡುಪಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜು( kokkarne. ) ಕಾಲೇಜಿಗೆ ವರ್ಗಾವಣೆಯಾಯಿತು. ಅಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದರು. 1997 ರಲ್ಲಿ ಜೂನ್ ತಿಂಗಳಲ್ಲಿ ಶ್ರೀ ಮಾರಿಕಾಂಬಾ ಸರ್ಕಾರಿ ಪದವಿ ಪೂರ್ವ ಕಾಲೇಜು ನಮ್ಮ ಶಿರಸಿಗೆ ವರ್ಗಾವಣೆಯಾಯಿತು. ತಮ್ಮ ಸೇವಾ ಅವದಿಯಲ್ಲಿಯೂ ಕೂಡಾ ಸ್ವಲ್ಪ ಕಾಲ ಸಮಯವನ್ನು ತಮ್ಮ ವೈವಾಹಿಕ ಜೀವನಕ್ಕೆ ನೀಡುತ್ತಾರೆ. (1998) ಮನೆ ಭಾರವನ್ನು ಹೆಗಲಿಗೆ ಹಾಕಿಕೊಳ್ಳುವರು. ಜೋತೆಗೆ ಸಂಸಾರದ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗುತ್ತಾರೆ. 1999ರಿಂದ 2009ರವರೆಗೆ ಶ್ರೀ ಮಾರಿಕಾಂಬಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ( NSS) ಅಧಿಕಾರಿಯಾಗಿ ಸಾಂಸ್ಕೃತಿಕ ಸಂಚಾಲಕನಾಗಿ ಶಿರಸಿಯಲ್ಲಿರುವ ಹಳ್ಳಿಗಳಲ್ಲಿ (NSS) ಹಲವು ಶಿಬಿರ ನಡೆಸಿದ್ದಾರೆ.
ನಮಗೆಲ್ಲ ಇವರು ಮಾದರಿಯಾಗಿದ್ದಾರೆ. ಇವರಿಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಗೌರವ ದೊರಕಿದೆ. ಇದನ್ನೆಲ್ಲ ಗಮನಿಸಿದರೆ ಇವರು ಒಬ್ಬ ಸತ್ಪುರುಷ ಸದ್ಗುಣಗಳನ್ನು ಪಡೆದ ವ್ಯಕ್ತಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. 2010 ರಲ್ಲಿ ಇವರು ಶಿರಸಿ ತಾಲೂಕಿನ ಬಾಳೂರಿನಲ್ಲಿ ಹೊಸದಾಗಿ ಪ್ರಾರಂಭವಾದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರಾಚಾರ್ಯರಾಗಿ ನೇಮಕಾತಿ ನಿಯೋಜನೆಯಾಯಿತು. 2010- 2011ರವರೆಗೆ ಒಂದು ವರ್ಷ ಸಂಪೂರ್ಣ ಆಸಕ್ತಿಯಿಂದ ಕಾರ್ಯನಿರ್ವಾಹಿಸಿದರು. ಬಿಳೂರಿನಿಂದ ನಿಲೇಕಣಿ ಕಾಲೇಜಿಗೆ 2011 ರಲ್ಲಿ ನಿಲೇಕಣಿ ಪದವಿ ಪೂರ್ವ ಕಾಲೇಜಿಗೆ ಉಪನ್ಯಾಸಕರಾಗಿ ವರ್ಗಾವಣೆಯಾಯಿತು. ನಮ್ಮ ಸೌಭಾಗ್ಯವೋ ಎನೋ ಅಂದೆ ನಾವು ಕೂಡಾ ಮೊದಲ ಪದವಿ ಪೂರ್ವ ಶಿಕ್ಷಣಕ್ಕೆ ಕಾಲಿಟ್ಟೆವು. ನಾನು ಮೊದಲು ಈ ಕಾಲೇಜ್ ಗೆ ಬಂದಾಗ ಏನೂ ಬದಲಾವಣೆ ಆಗಿರಲಿಲ್ಲ. ಅದೇ ಹಳೆ ಕಟ್ಟಡ, ಇತ್ತು. ನಾವು ಕೇವಲ ಹೈಸ್ಕೂಲ್ನ ಒಂದು ಭಾಗವಾಗಿದ್ದೇವು. ಆದರೆ ನಂತರ ಕಟ್ಟಡಗಳ ನಿರ್ಮಾಣ ಆಯಿತು. ತುಂಬಾ ಬದಲಾವಣೆಗಳನ್ನು ಜಾರಿಗೆ ತಂದರು.ನನ್ನ ಗುರುವಾದ ನಾಗರಾಜ್ ಗಾಂವಕರ್ರವರು ನಮ್ಮ ಕಾಲೇಜಿನಲ್ಲಿ ಯಾವಾಗ ಉಪನ್ಯಾಸಕರಿಂದ- ಪ್ರಾಂಶುಪಾಲರರಾಗಿ ಭಡ್ತಿ ಹೊಂದಿದರೋ ಅಂದಿನಿಂದ ಅವರಿಂದಲೂ ತುಂಬಾ ಬದಲಾವಣೆಗಳು ಆಯಿತು. 2011ರಿಂದ 2016ರವರೆಗೆ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಶಿರಸಿ, ಅಂಡಗಿ, ಸುಗಾವಿ, ಇಳಸೂರು, ಕೋರಲ ಕಟ್ಟ ಹೀಗೆ ಹಲವಾರು ಹಳ್ಳಿಗಳ ವಿರುದ್ಧ ಶಿಬಿರ ಯೋಜನೆಯಲ್ಲಿ ಭಾಗವಹಿಸಿದ್ದಾರೆ. ಅದರಲ್ಲೂ ಯಶಸ್ಸು ಕಂಡಿದ್ದಾರೆ. ತಮ್ಮ ಕೈಲಾದಷ್ಟು ಹಣದ ರೂಪದಲ್ಲಿ ಸಹಾಯ ಮಾಡಲು ಮುಂದಾಗಿದ್ದಾರೆ. ಹಲವಾರು ಕ್ರಿಯಾತ್ಮಕ ಕಾರ್ಯಗಳಲ್ಲಿ ನಿರೂಪಕರಾಗಿ ಸೃಜನಶೀಲರಾಗಿ ಪಡೆದುಕೊಂಡಿದ್ದಾರೆ. ಇದಕ್ಕಾಗಿ ಅವರಿಗೆ ಹಲವಾರು ಕಡೆ ಪುರಸ್ಕಾರಗಳು ದೊರಕಿದೆ. ಇನ್ನು ನಿಲೇಕಣಿ ಕಾಲೇಜಿನಲ್ಲಿ ಕೂಡಾ ವಿದ್ಯಾರ್ಥಿಗಳ ಪರವಾಗಿ ವಾದ ವಿವಾದ ನಡೆಸಿದ್ದಾರೆ. ಮಕ್ಕಳ ಉಜ್ವಲ ಭವಿಷ್ಯದ ಕಡೆ ಗಮನ ಹರಿಸಿ ತಮ್ಮ ವಿದ್ಯಾರ್ಥಿಗಳಿಗೂ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅನುವು ಮಾಡಿ ಕೋಡಿ ಎಂದು ಮೇಲಧಿಕಾರಿಗಳ ಬಳಿ ಮನವಿ ಮಾಡಿದರು. ಇದರಿಂದಾಗಿ ಮಕ್ಕಳು ತಮ್ಮ ಕಲೆ, ಸಂಸ್ಕೃತಿಯನ್ನು ಜಿಲ್ಲಾ ಮಟ್ಟದವರೆಗೆ, ರಾಜ್ಯ ಮಟ್ಟದವರೆಗೆ ಹೋಗಲು ಅವಕಾಶ ಸಿಕ್ಕಿದೆ. ಇದಕ್ಕಾಗಿ ನಾವು ನಿಮ್ಮ ವಿದ್ಯಾರ್ಥಿಗಳು ನಿಮಗೆ ಒಳ್ಳೆಯ ಗೆಳಯ ಗೆಳತಿಯರಂತೆ ಇರುತ್ತೇವೆ,. ನಾವು ನಿಮ್ಮ ಮಕ್ಕಳು ಕೂಡಾ ಹೌದು. 2018 ರಲ್ಲಿ ಉಪನ್ಯಾಸಕರ ವೃತ್ತಿಯಿಂದ ಪ್ರಾಂಶುಪಾಲರಾಗಿ ಭಡ್ತಿ ಹೊಂದುತ್ತಾರೆ. ಅವರು ಭಡ್ತಿ ಹೊಂದಿದಾಗ ನಾವು ಇರಲಿಲ್ಲ. ಆದರೆ ನಮ್ಮಂತಹ ಅದೆಷ್ಟೋ ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸಿದ ಮಹಾನ್ ವ್ಯಕ್ತಿ ನೀವು.
ಹಹಹಹಹ!!! ಹೇಳೋದು ಮರೆತೆ ನಾವು ಇರುವಾಗ ಕಾಲೇಜಿನ ವತಿಯಿಂದ ಪ್ರವಾಸಕ್ಕೆ ತೆರಳಿದೇವು. ಆಗ ನನ್ನ ಗೆಳತಿ ಒಬ್ಬಳು ನನಗೆ ಇಷ್ಟ ಇಲ್ಲ ಅಂದರೂ ಒತ್ತಾಯದ ಮೆರೆಗೆ ಕರೆದುಕೊಂಡು ಹೋದಳು. ಆದರೆ ನನಗೆ ಹೋಗುವಷ್ಟು ಹಣ ಇರದ ಕಾರಣ ನಿಮ್ಮ ಬಳಿ ತುಸು ಸಂಕೋಚದಿಂದ ಕೇಳಿದೆ ಆದರೆ ನೀವು ಒಂದು ಮಾತು ಹೇಳಿದಿರಿ. ಹಣದ ಚಿಂತೆ ಬಿಡು, ನಿನಗೆ ಆಸಕ್ತಿ ಇದೆ ಅಲ್ಲವಾ, ನೀವು ಹೊರಟು ಬಾ... ಹಣದ ವ್ಯವ ಸ್ಥೆ ನಾನು ನೋಡಿಕೊಳ್ಳುವೆ ಎಂದು ಸುಲಭವಾಗಿ ಹೇಳಿದ ಮಾತು ಇನ್ನೂ ನೆನಪಿದೆ ಧನ್ಯವಾದಗಳು ಸರ್ ನಾನೆಂದೂ ನಿಮ್ಮಂತಹ ಎಷ್ಟೋ ಗುರುಗಳ ಆಜ್ಞೆಯನ್ನು ಪಾಲಿಸೋ ಮನಸ್ಸು ನನ್ನದಾಗಲಿ. ನಿಮಗೆ ನನ್ನ ಕಡೆಯಿಂದ ಕೃತಜ್ಞಗಳು ತಿಳಿಸುವೆನು.
- ಸೌಮ್ಯ ಗಣಪತಿ ನಾಯ್ಕ.( ಕಾನಸೂರು). ಉತ್ತರ ಕನ್ನಡ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ