ಶನಿವಾರ, ಜೂನ್ 7, 2025

ಲೇಖನ...

ಲೇಖನ

ವಿಲಕ್ಷಣ ನಗೆಯ ಶುಕುನಿ ಪಾತ್ರದಾರಿ ಡಿ.ವಿ.ನಾಗಮೋಹನ್
ಪೌರಾಣಿಕ ನಾಟಕ ಕುರುಕ್ಷೇತ್ರದಲ್ಲಿ ಬರುವ ಒಂದು ವಿಲಕ್ಷಣ ಪಾತ್ರ ಶಕುನಿ. ಈ ನಾಟಕದಲ್ಲಿ ಎಲ್ಲಾ ಪಾತ್ರಗಳಿಗೂ ರಂಗಗೀತೆಗಳನ್ನು ಅಳವಡಿಸಿ ರಂಗ ನಿರ್ದೇಶಕರು ಪಾತ್ರಗಳನ್ನು ಪಾತ್ರದಾರಿ ಹೊಸಬರಾಗಿದ್ದರೂ ಹೇಗೋ ಸರಿದೂಗಿಸಿ ಹಾಡಿನ ಮರೆಯಲ್ಲಿ ಗೆರೆ ದಾಟಿಸಿಬಿಡುತ್ತಾರೆ. ಆದರೆ ಶಕುನಿ ಪಾತ್ರಕ್ಕೆ ವಿಶಿಷ್ಟತೆ ಇದೆ. ಹಾಡು ಅಷ್ಟಿಲ್ಲ. ಆದರೆ ಈ ಪಾತ್ರಕ್ಕೆ ಅಭಿನಯವೇ ಪ್ರಧಾನ. ಅಂತೆಯೇ ಮಾತು. ತಂತ್ರ ಕುತಂತ್ರ ಹೆಣೆಯುತ್ತಲೇ ಶತ್ರು ದುರ್ಯೋಧನನ ಜೊತೆಗಿದ್ದೆ ಬೆನ್ನಿಗೆ ಗುನ್ನಾ ಇಡುವ ವಿಲನ್ ಕ್ಯಾರಕ್ಟರ್. ತನ್ನ ಸಹೋದರರ ಸಾವಿಗೆ ಕಾರಣನಾದ ಪ್ರಬಲ ದೊರೆಗೆ ಜೊತೆಗಿದ್ದೆ ಮಕಾಡೆ ಮಲಗಿಸುವ ಚಾಣಾಕ್ಷ ನಡೆ, ಕುಹಕ ಮಾತು 
ಸೇಡಿನ ಜ್ಞಾಲೆ ಒಡಲಲ್ಲಿ ಇದ್ದರೂ ಬೂದಿ ಮುಚ್ಚಿದ ಕೆಂಡವಾಗಿ ನಗುವ ನಟನೆ, ಬೆನ್ನ ಹಿಂದಿನ ವ್ಯಂಗ್ಯ ನಗೆ, ಸೇಡಿನ ಜ್ಯಾಲೆಯ ವಿಕಟ ನಗೆ, ಮಾತಿನ ಮೋಡಿಯ ಕಪಟಿ ಅಭಿನಯ ಇವೆಲ್ಲವೂ ಈ ಪಾತ್ರದಲ್ಲಿ ಅಡಕವಾಗಿದೆ. ಹೀಗಾಗಿ ಎ೦ಟು ಗಂಟೆಯ ನಾಟಕದಲ್ಲಿ ಈ ಪಾತ್ರವೂ ವೈಶಿಷ್ಟಪೂರ್ಣವಾಗಿ ತನ್ನದೇ ಸ್ಥಾನಮಾನ ಹೊಂದಿದೆ. ಇಂತಹ ಒಂದು ಪಾತ್ರವನ್ನು ನಿವ೯ಹಿಸುವಲ್ಲಿ ತಮ್ಮದೇ ಶ್ರಮದಿಂದ ತಕ್ಕಮಟ್ಟಿಗೆ ಯಶಸ್ಸು ಕಂಡವರು ನಾಗಮೋಹನ್. ಶಕುನಿಯಾಗಿ 40 ಬಾರಿ ನಟಿಸಿರುವರು.ಈ ಪಾತ್ರಕ್ಕೆ 
ಆನಂದ ಮಹಾದಾನಂದ
ಪ್ರಿಯ ಶಕುನಿಗೆ ಮಹಾದನಂದ..
ಎಂಬ ಸಂದರ್ಭೋಚಿತ ರಂಗಗೀತೆಯನ್ನು ರಚಿಸಿ ಅಳವಡಿಸಿದವರು ತುಮಕೂರು ಕಡೆಯ ರಂಗ ನಿರ್ದೇಶಕರು. ನಿಜಕ್ಕೂ ಈ ಹಾಡು ಈ ಪಾತ್ರಕ್ಕೆ ಜೀವ ಕಳೆ ತುಂಬಿದೆ. ಇರಲಿ
ಈ ಮೋಹನ ಇವತ್ತಿನ ಕಲಾವಿದರಲ್ಲ,
 ಇವರನ್ನು ಹತ್ತಾರು ವರ್ಷಗಳಿಂದ ಬಲ್ಲೆನಾದರೊ, ಇವರ ರಂಗ ಚಟುವಟಿಕೆ ಗಮನಿಸಿದ್ದೇನೆ ಆದರೂ 
ಯಾಕೋ ಈ ಮೋಹನ ನನ್ನ
ಬರಹಕ್ಕೆ ಸಿಕ್ಕದೆ ಮೋಹಿನಿ ಆಟ ಆಡುತ್ತಾ ತಪ್ಪಿಸಿಕೊಂಡು ಬ೦ದಿದ್ದರು. ಬೆಂಗಳೂರಿನ ನಾಗರಬಾವಿಯಲ್ಲಿದ್ದೆ. 
ಬಿಟ್ಟಗೌಡನಹಳ್ಳಿ ರಮೇಶ್ ಗೌಡರು ತಮ್ಮಳ್ಳಿಯಲ್ಲಿ ಮನೆಯ ಮಂದೆಯೇ ಸೀನರಿ ಹಾಕಿಸಿ ನಾಟಕ ಮಾಡಿಸುತ್ತಿದ್ದರು. ಇಲ್ಲಿಂದಲೇ ಮಾತನಾಡಿಸಿ ಅವರ ರ೦ಗ ಸೇವೆ ಕುರಿತಾಗಿ ಬರೆದಿದ್ದೆ. ರಂಗಭ್ರೂಮಿ ನಶಿಸುತ್ತಿರುವ ಇಂದಿನ ದಿನಗಳಲ್ಲಿ ರಂಗಭೂಮಿಯನ್ನು ಪೋಷಿಸುವ ಕಲಾವಿದರು ಬೇಕು. ಈ ದಿಶೆಯಲ್ಲಿ ಮೋಹನ್ ರವರದು ಗಮನಾರ್ಹ ಪಾತ್ರವಿದೆ. ಈ ಪಾತ್ರದಾರಿಯನ್ನು ಫೋನ್ ನಲ್ಲಿ ಮಾತನಾಡಿಸಿದೆ.
ಮೋಹನ್, ನಾನು ಈವರೆವಿಗೂ ನೂರಾರು ಕಲಾವಿದರ ಕುರಿತಾಗಿ ಬರೆದಿರುವೆನಷ್ಟೇ. ಇದು ನಿಮಗೂ ಗೊತ್ತು. ಆದರೂ ನೀವೇಕೆ ನನ್ನ ಬರಹಕ್ಕೆ ಸಿಗುತ್ತಿಲ್ಲ. 
" ಸರಿ ಸಾರ್, ಇವತ್ತು ಶನಿವಾರ. ನನಗೆ ಯಾವುದೇ ಪಂಕ್ಷನ್ ಇಲ್ಲ.
(ಇವರು ಅಡಿಗೆ ಕಂಟ್ರಾಕ್ಸರ್. ಅಡಿಗೆ ಮಾಡಿ ಬಡಿಸುವ ಬಾಣಸಿಗ. ಎಷ್ಟೋ ನಾಟಕ ಕಾರ್ಯಕ್ರಮಗಳಿಗೆ ಅನ್ನದಾನ ಮಾಡಿದ ಪುಣ್ಯಾತ್ಮ) ಬನ್ನಿ ಸಾರ್ ಮಾತನಾಡೋಣ ಎಂದರು. ಇಲ್ಲಾ ನಾನು ಬೆಂಗಳೂರಿನಲ್ಲಿದ್ದೇನೆ. ಸಮಯ ವ್ಯರ್ಥ ಮಾಡದೇ ನಮ್ಮ ರಂಗ ಸೇವೆ ಕುರಿತಾಗಿ ಮಾಹಿತಿ ಹೇಳಿ ಎಂದೆ. " ಸರಿ, ಬರಕ್ಕೂಳ್ಳಿ ಎಂದರು. 
 ನನ್ನ ಹೆಸರು ಡಿ.ವಿ. ನಾಗಮೋಹನ್. ತಂದೆ ಹೆಸರು ಡಿ.ಕೆ. ವಿಶ್ವೇಶ್ವರಯ್ಯ. ತಾಯಿ ಸರೋಜಮ್ಮ. ನಮ್ಮ ಊರು ದಿಂಡಗೂರು. ಚನ್ನರಾಯಪಟ್ಟಣ ತಾಲೂಕಿನ ಗ್ರಾಮ. ನಾನು 18 ವರ್ಷದ ಬಾಲಕನಾಗಿದ್ದಾಗಲೇ ರಂಗಭೂಮಿ ಪ್ರವೇಶ ಮಾಡಿದೆ. ಮೊದಲನೇ ಪಾತ್ರ ಉತ್ತರೆ. 2ನೇ ಯದು ರುಕ್ಮಿಣಿ, ನಂತರ ನಾಗರಾಣಿ..ಹೀಗೆ ಆರಂಭದಲ್ಲಿ ಸ್ತ್ರೀ ಪಾತ್ರವೇ ಸಿಕ್ಕವು. ನಾಚಿಕೊಳ್ಳದೇ ಪಕ್ಕ ನಿಭಾಯಿಸಿದೆ. ಆ ನಂತರ ಶಕುನಿ, ದುರ್ಯೋಧನ, ಭೀಮ, ದುಶ್ಯಾಸನ, ಅರ್ಜುನ ಇನ್ನೂ ಅನೇಕ ಕುರುಕ್ಷೇತ್ರ ನಾಟಕದ ಪಾತ್ರಗಳನ್ನೆಲ್ಲ ಮಾಡಿದೆ. ಸುಮಾರು ನೂರಕ್ಕಿಂತಲೂ ಹೆಚ್ಚು ಬಾರಿ ಅಭಿನಯಿಸಿರುತ್ತೇನೆ. ಕಲಾರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಅನೇಕ ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕ
ನಾಗಿದ್ದೇನೆ. ಹಾಸನ ಜಿಲ್ಲಾ ಕಲಾವಿದರ ಹಿತ ರಕ್ಷಣಾ ಸಮಿತಿ ಕಾರ್ಯಧ್ಯಕ್ಷನಾಗಿ, ಅನ್ನಪೂರ್ಣೇಶ್ವರಿ ಕಲಾ ಸಂಘದ ಅಧ್ಯಕ್ಷನಾಗಿದ್ದೇನೆ. ಕರ್ನಾಟಕ ರಕ್ಷಣಾ ವೇದಿಕೆಯ ಸಾಂಸ್ಕೃತಿಕ ಘಟಕದ ಅಧ್ಯಕ್ಷ. ಇನ್ನೂ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಸಮಾಜ ಸೇವೆಯಲ್ಲಿ ಕ್ರಿಯಾಶೀಲ ನು.
ಹೌದು, ಮೋಹನ್ ಹಾಸನದ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ತಮ್ಮದೇ ಪಾತ್ರ ನಿರ್ವಹಿಸುತ್ತಾ ಬಂದಿದ್ದಾರೆ. ಹಾಸನದ ಕಲಾಭವನದಲ್ಲಿ ಕೇವಲ ಕುರುಕ್ಷೇತ್ರ ರಾಮಾಯಣ ನಾಟಕಗಳೇ ಪ್ರಧಾನವಾಗಿ ಪ್ರದರ್ಶಿತವಾಗುತ್ತಿರುವಲ್ಲಿ ಬೇರೆ ಬೇರೆ ಪೌರಾಣಿಕ ನಾಟಕಗಳನ್ನು ರಂಗದ ಮೇಲೆ ತರುವಲ್ಲಿ ಚಿಂತಿಸಿ ಪ್ರಯತ್ನಿಸಿದ್ದಾರೆ. ರತಿ ಕಲ್ಯಾಣ, ಕೌಂಡಿಲಕನ ವಧೆ, ರಾಜಾಸುಯಾಗ, ಭಕ್ತ ಪ್ರಹ್ಲಾದ, ಭಕ್ತ ಮಾಂಧಾತ, ಸತ್ಯಮಾರ್ತಿ, ತ್ರಿಜನ್ಮ ಮೋಕ್ಷ, ಮೂರೂವರೆ ವಜ್ರ, ವೀರ ಅಭಿಮನ್ಯು ಹೀಗೆ ಪೌರಾಣಿಕ ನಾಟಕಗಳನ್ನು ಅಡಿಸಿದ್ದಾರೆ. ರತ್ನ ಮಾಂಗಲ್ಯ ಸಾಮಾಜಿಕ ನಾಟಕದ ಹಾಸ್ಯ ಪಾತ್ರದ ಅಭಿನಯದಲ್ಲಿ ಗಮನ ಸೆಳೆದಿದ್ದಾರೆ.. ಗೌಡ್ರು ಗದ್ಲ ನಾಟಕದಲ್ಲಿ ಮತ್ತು ಮೊನ್ನೆ ಸತಿ ಸಂಸಾರದ ಜ್ಯೋತಿ ಸಾಮಾಜಿಕ ನಾಟಕದಲ್ಲಿ ನಟಿಸಿದ್ದಾರೆ. ಕೃಷ್ಣ-5 ಬಾರಿ, ದುರ್ಯೋಧನ -2 ಬಾರಿ ಅಷ್ಟೇ ಅಲ್ಲಾ ಹತ್ತಾರು ನಾಟಕಗಳಲ್ಲಿ ಬಹುಮುಖಿ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ..ಹಾಸನದ ಕಲಾಭವನದಲ್ಲಿ ಐದು ಹತ್ತು ದಿನಗಳ ಪೌರಾಣಿಕ ನಾಟಕೋತ್ಸವ ಸಂಘಟಿಸಿದ್ದಾರೆ. ಅಂದ್ದಾಗೆ ಅನಂತರಾಜು ಮತ್ತೆ ಜುಲೈ ತಿಂಗಳಲ್ಲಿ ಐದು ದಿನಗಳ ಪೌರಾಣಿಕ ನಾಟಕೋತ್ಸವ ಆಯೋಜಿಸುತ್ತಿದ್ದೇನೆ ಎಂದರು. ಮೋಹನ್, ನಿಮ್ಮಂತಹ ರಂಗ ಸಂಘಟಕರು ಜಿಲ್ಲಾ ರಂಗಭೂಮಿಗೆ ಅವಶ್ಯ ಇದೆ. ನಿಮ್ಮ ಕಲಾ ಸೇವೆ ಹೀಗೆ ಮುಂದುವರೆಯಲಿ ಶುಭಾಶಯಗಳು ಎ೦ದೆ.
---
ಗೊರೂರು ಅನಂತರಾಜು,
ಹಾಸನ
9449462879

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...