ನವಮಾಸ ಗರ್ಭದಿ ಹೊತ್ತು
ಜೀವನ್ಮರಣದ ನೋವುಂಡು ಹೆತ್ತು
ಉಣಿಸುವಳು ಎದೆಹಾಲ ಅಮೃತವ
ಪ್ರೀತಿ-ವಾತ್ಸಲ್ಯದಿ ಮುತ್ತಿಟ್ಟು
ಹೊರಡುವಳು ನಮಗೆಲ್ಲವೂ ಬಿಟ್ಟು
ಸಲಹುವಳು ನಮ್ಮನ್ನು ಹೆತ್ತ ತಾಯಿ.
ಸರ್ವ ಜೀವಿಗೂ ಆಶ್ರಯ ನೀಡುವಳು
ಆಸರೆಯಾಗಿ ಎಲ್ಲರ ಹರಸಿಹಳು
ಮಲ-ಮೂತ್ರ ಕಲ್ಮಶವ ಒಡಲಿಗೆ ಇರಿಸಿಕೊಂಡು
ಕೂಳು ನೀಡಿ ಜೀವತುಂಬಿ ಕಾಪಾಡಿ
ಕೊನೆಗೆ ತನ್ನ ಮಡಿಲಿಗೆ ಇರಿಸಿಕೊಳ್ಳುವಳು
ಸಲಹುವಳು ನಮ್ಮನ್ನು ಭೂಮಿತಾಯಿ.
ಸಮತೋಲನಗೊಳಿಸಿ ಕಾಪಾಡುವವಳು
ಸಕಲರಿಗೂ ಆರೋಗ್ಯ ನೀಡುವವಳು
ಆಮ್ಲಜನಕವ ನೀಡಿ ಉಸಿರಾಡಿಸುವಳು
ವ್ಯಾಧಿಗೆ ಔಷಧೀಯ ಮೂಲವಾಗಿರುವಳು
ಸೌದೆ, ಕಟ್ಟಿಗೆ ನೀಡಿ ಒಲೆ ಉರಿಸುವವಳು
ಸಲಹುವಳು ನಮ್ಮನ್ನು ಹಸಿರು ತಾಯಿ.
ಹರಿಯುವಳು ಪಾವನಾ ಗಂಗೆಯಾಗಿ
ತೊಳೆಯುವಳು ಪಾಪವ ತುಂಗೆಯಾಗಿ
ಜೀವರಾಶಿಗೆ ನೀರುಣಿಸಿ ಕಾವೇರಿಯಾಗಿ
ಕಾನನದಲ್ಲಿ ಹರಿಯುವಳು ನರ್ಮದೇಯಾಗಿ
ಹೊಲ-ಗದ್ದೆ ಹಸಿರಾಗಿಸಿ ಕೃಷ್ಣೆಯಾಗಿ
ಸಲಹುವಳು ನಮ್ಮನ್ನು ಜಲದ ತಾಯಿ.
ತಾಯಿಗೂ ಮಿಗಿಲಾಗಿ ಹಾಲುಣಿಸಿ
ಸಗಣಿಯ ಬೆರಣಿ ಮಾಡಿ ಒಲೆ ಉರಿಸಿ
ಸರ್ವರೋಗಕ್ಕೂ ಮದ್ದು ಗೋಮೂತ್ರವು
ಲೋಕವೆ ಪೂಜಿಸುವ ಕಾಮಧೇನುವು
ರೈತರ ಪಾಲಿನ ನಂದಾದದೀವಿಗೆಯಾಗಿ
ಸಲಹುವಳು ನಮ್ಮನ್ನು ಗೋವು ತಾಯಿ.
✍ ಲಕ್ಷ್ಮಿ ಕಿಶೋರ್ ಅರಸ್ ಕೂಡ್ಲೂರು.
ಯುವ ಕವಿ ಹಾಗೂ ಲೇಖಕರು.
ಮೊ: 9632505776.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ