ಶುಕ್ರವಾರ, ಅಕ್ಟೋಬರ್ 29, 2021

ನನ್ನಿಚ್ಛೆಯಲಿ ಬದುಕಲು ಬಿಡ (ಕವಿತೆ) - ಗೌತಮ್ ಗೌಡ, ಕೀರಣಗೆರೆ - ರಾಮನಗರ.

ನನ್ನಿಚ್ಛೆಯಲಿ ಬದುಕಲು ಬಿಡಿ
ನಿಮ್ಮಿಚ್ಛೆಯಂತೆ ನನ್ನ ಬದುಕು  ಬೇಡ..!!

ನನನ್ನು ಹೆತ್ತಿರಿ, ಹೊತ್ತಿರಿ
ಬೆಳೆಸಿದಿರಿ, ಆಡಿಸಿದಿರಿ
ಕುಣಿಸಿದಿರಿ, ನಲಿಸಿದಿರಿ
ಅಳಿಸಿದಿರಿ, ನಗಿಸಿದಿರಿ
ನೀವೂ ನನಗಾಗಿ ಅತ್ತಿರಿ
ನಕ್ಕಿರಿ
ಅಷ್ಟೇಏಕೆ ನಿಮ್ಮ ಪ್ರಾಣವನ್ನೂ
ಸಹ ನನಗಾಗಿ ಪಣಕಿಟ್ಟಿರಿ
ನಾನು ಇದನ್ನು ಮರೆಯುವುದಿಲ್ಲ
ನಿಮ್ಮ ಋಣ ನಾನು ತೀರಿಸಲು ಆಗುವುದೂಇಲ್ಲ
ನಿಮ್ಮನ್ನು ಬಿಟ್ಟ ಬದುಕುಲು 
ನನಗಿಷ್ಟವು ಇಲ್ಲ
ಹಾಗೆಂದ ಮಾತ್ರಕ್ಕೆ
ನಿಮ್ಮಿಚ್ಛೆಯಂತೆ ನಾನು
ಬದುಕಲು ಆಗುವುದಿಲ್ಲ
ನನಗೂ ಭಾವನೆಗಳಿವೆ ಆಸೆಗಳಿವೆ
ಅವುಗಳಿಗೆ ನಿಮ್ಮ ಸರಪಳಿ ಬೇಡ

ನಿಮ್ಮ ಜಾತಿ, ಮತ, ಕುಲ, ಗೋತ್ರ
ಅಂತಸ್ತು, ಐಶ್ವರ್ಯ, ಮರ್ಯಾದೆ
ಗೌರವ ನಿಮಗಿರಲಿ ಬೇಡಎನ್ನುವುದಿಲ್ಲ
ಆದರೆ ನನ್ನ ಪ್ರೀತಿ, ಪ್ರೇಮಗಳಿಗೆ
ಅವು ತೊಡಕಾಡುವುದು ಬೇಡ

ನಾನು ನಿಮ್ಮವನು,,
ನಿಮ್ಮ ತೊಡೆಯ ಮೇಲೆ
ಆಡಿ ಬೆಳೆದವನು,, ಆದರೆ
ನಿಮ್ಮಿಚ್ಛೆಯಂತೆ ಬದುಕಲಾರೆನು
ಅದಕ್ಕೆ ಬಿಡಿ ಬಿಡಿ
ನನ್ನ ಬದುಕಿನ ಮೇಲಿರುವ
ನಿಮ್ಮ ಬಯಕೆ ಭಾವನೆಗಳನೆಲ್ಲ
ಬಿಟ್ಟು ಬಿಡಿ
ನನ್ನಿಚ್ಛೆಯಂತೆ ನನ್ನ ಬದುಕಲು ಬಿಡಿ..!!

- ಗೌತಮ್ ಗೌಡ, ಕೀರಣಗೆರೆ
ರಾಮನಗರ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...