ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನಾನು ಆಗಿಬಿಡುವೆನು ವೀರ ಯೋಧನಂತೆ..
ನನ್ನ ಅರ್ಧಂಗಿ ಆವಳಾಗಿ ಆವರಿಸಿರಲು
ಮನದಲಿ ಅವಳಾಗುವಳು ಧೈರ್ಯ ಲಕ್ಷ್ಮಿಯಂತೆ.//೧//
ಅವಳಿಲ್ಲದೆ ನಾನಿಲ್ಲ ಗೃಹದೊಳಗೆ
ಅವಳಿಲ್ಲದ ದಿನ ಚಂದಿರ ಮರೆಯಾದಂತೆ..
ಅವಳು ಬಳಿಯಿದ್ದರೆ ದಿನವು ಹರುಷವೇ
ದೂರಾದರೆ ಅಮಾವಾಸ್ಯ ಕತ್ತಲು ಗವಿದಂತೆ.//೨//
ಅರಗಿಣಿಯ ನುಡಿಯು ಚಂದನವು
ಗೃಹದೊಳಗೆ ನಡೆದರೆ ನವಿಲು ನರ್ತವು..
ತೊಟ್ಟ ಕಂಕಣ ಕಾಲುಗೆಜ್ಜೆ ನಾದವು
ಮೊಳಗುವುದು ವಾದ್ಯ ವೇದಘೋಷವು.//೩//
ಅವಳ ಧೀರತನ ಶಾಂತ ನುಡಿಯಿಂದ
ಕಷ್ಟ ನೋವ ಮರೆಸಿ ಕಂದನಾಗುವೇನು..
ಹೆಣ್ಣೊಂದು ಸಾಂತ್ವನ ಶಾಂತಸ್ವರೂಪಿ ಸಾಧ್ವಿಯು
ಅವಳಿದ್ದರೆ ನಾನೊಬ್ಬ ಸಿಪಾಯಿಯಾಗಿ ಮೇರೆಯುವೇನು..//೪//
- ಕಟ್ಟೆ.ಎಂ.ಎಸ್.ಕೃಷ್ಣಸ್ವಾಮಿ, ಮಂಡ್ಯ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ