ಬೆಟ್ಟದ ಹೂವೇ ಹೇಳಲಾರದೆ ಬಾಡಿ ಹೋಯಿತೆ..
ಏಕೆ ಇಂತಹ ಶಿಕ್ಷೆ ಕೊಟ್ಟೆ ದೇವರೇ ಕಾಣಲಿಲ್ಲವೇ ನಿನ್ನಗೆ
ಅಪ್ಪು ಅಪ್ಪು ಮಾಯವಾದೆಯ ...
ಬಾನದಾರಿಯಲ್ಲಿ ಸೂರ್ಯನಂತೆ ಬಂದಿರಿ.. ಬಹು ಬೇಗ ಕಾಣದಂತೆ ಮಾಯವಾದಿರಿ ಅಪ್ಪು..
ನನ್ನ ಉಡುಪು ನಿನ್ನದು ಎಂದು ಹಾಡಿದಿರಿ.. ಕೊಡುವ ಮೊದಲೇ ನಮ್ಮಿಂದ ಕಣ್ಮರೆಯಾದಿರಿ..
ಎಷ್ಟೋ ಅನಾಥ ಮಕ್ಕಳ ಬಾಳು ಬೆಳಗಿದ ಕಣ್ಮಣಿ.. ವೃದ್ಧರ ಮಡಿಲ ತುಂಬಿದ ಪ್ರೀತಿಯ ಕಣ್ಮಣಿ.
ಮಕ್ಕಳ ಶಿಕ್ಷಣ ನೋಡಿಕ್ಕೊಳ್ಳುತ್ತಿದ್ದ ಧಣಿ.. ಸದಾ ನಾವೆಲ್ಲ ಇರುವೇವು ನಿಮಗೆ ಚಿರಋಣಿ..
ಎಲ್ಲೆಡೆ ಹರಿದಿದೆ ನೋಡಿ ಕಣ್ಣೀರಿನ ಧರೆ.. ಅಭಿಮಾನಿಗಳ ಕಣ್ಣೀರಿಂದ ತುಂಬಿದೆ ಕಡಲು..
ಬರಿದು ಮಾಡಿದರು ಮೆಚ್ಚಿದ ಜನರ ಒಡಲು.. ಮರೆಯಲಾಗದು ಅಪ್ಪುವಿನ ನೆನಪು..
- ಗಂಗಜ್ಜಿ. ನಾಗರಾಜ್.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ