ನಂಬಲೇ.....?
ಸುದ್ದಿಯನೇ ಧಿಕ್ಕರಿಸಿಬಿಡಲೇ?
ವಿಧಿಯ ಅಟ್ಟಹಾಸವನು ಹಳಿಯಲೇ?
ಛೇ.... ಮೌನವಾಗಿಬಿಡು ಕ್ರೂರಿಯೇ?
ಕೊಂಚ ಕಾಲ ವಿರಮಿಸು..
ನಮ್ಮ ಅಪ್ಪು ಮರಳಲೆಮ್ಮ ಕರುನಾಡಿಗೆ..
'ಬೆಟ್ಟದ ಹೂವ' ನೇಕೆ ಬಾಡಿಸಿದೆ ವಿಧಿಯೇ
'ರಾಜಕುಮಾರ' ನ ಕಾರ್ಯವಿನ್ನೂ ಬಾಕಿಯಿದೆಯಿಲ್ಲಿ
ನೊಂದವರ ಕಣ್ಣೀರ ಒರೆಸಬೇಕಿದೆ
ಬಂಧುಗಳ ನಡುವೆ ಬಾಂಧವ್ಯದ 'ಮೈತ್ರಿ' ಬೆಸೆಯಬೇಕಿದೆ
'ಅರಸು' ಮನೆತನವನಾದರೂ ಅರಸುತನ ತೋರಿಲ್ಲ
ಸರಳತೆಯಲ್ಲೇ ಜೀವನವ ಸವೆಸುತ್ತಿದ್ದನಲ್ಲ
ಕಣ್ಣೇಕೆ ಬಿತ್ತು ನಿನ್ನದು ನಮ್ಮ ಅಪ್ಪುವಿನ ಮೇಲೆ
ಅಪ್ಪುಗೆಯೇ ಬೇಕೆನುವುದಾದರೆ ನಾನಿದ್ದೆನಲ್ಲ
ಯುವರತ್ನವೇ ಬೇಕಾಯಿತೇನು ನಿನಗೆ
ಅಪ್ಪಾಜಿಯ ಜೊತೆಗೂಡಿಸಲು ಕೊನೆಗೆ
ಹೃದಯವಂತನನೇ ಕಸಿದು
ಕರುನಾಡಿನ ಉಸಿರನೆಲ್ಲಾ ಬಸಿಯುತಿರುವೆಯಲ್ಲಾ...
ಈಗಲು ಒಮ್ಮಗೇ ಕೂಗಿ ಮರಳಿಸು
ಅಪ್ಪು ಮರಳಿದ್ದಾನೆ.. ನಿಮಗಾಗಿ ಎಂದು
ಮಾರ್ಧನಿಸಲಿ ಕಹಳೆಯಂತಹ ಧ್ವನಿ
ಮುಗಿಲಾಚೆಗೂ... ರಾಜಕುಮಾರ ಮರಳಿದನೆಂದು.
- ಸುರೇಶ್ ಕಲಾಪ್ರಿಯಾ ಗರಗದಹಳ್ಳಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ