ಶುಕ್ರವಾರ, ಅಕ್ಟೋಬರ್ 29, 2021

ಅಂಗೈ ಮುಂಗೈ (ಕವಿತೆ) - ಕಿರಣ್ ಕುಮಾರ ಹೆಚ್ ತುಂಬೇನಹಳ್ಳಿ.

ಅಂಗಲಾಚು ಅಂಗೈ
ಹಿಡಿ  ಅನ್ನಕ್ಕೆ
ಮುಂಗೈ ಚಾಚು
ಮುಂದೆ ದಾನಕ್ಕೆ

ಅಂಗೈ ಚಾಚಿದರೆ
ಅಂಗಲಾಚಿ ಲಂಚಕ್ಕೆ
ಸಾಟಿ ಇಲ್ಲವೇ
ನಿನ್ನ ನೀಚತನಕ್ಕೆ

ಹಂಗಿಸುವವರ ಹಂಗು
ನಿನ್ನ ಅಂಗೈಯ ತೋರು
ಬೆರಳು ತೋರಿಸುವ
ದಾರಿ ಜಯಭೇರಿ

ಕೊಲ್ಲುವ ಅಂಗೈಲೇ
ಇರುವುದು ಅಂದ
ಮಾಡು ನೀ ಚಂದ
ತಾನಾಗಿಯೇ ದಾರಿ ಮುಂದ

ಅಂಗೈಯಲ್ಲೇ ಅರಮನೆ
ಮುಂಗೈಯಲ್ಲೇ ಸೆರೆಮನೆ
ನೀನಿರುವ ನಡುಮನೆ
ಮುಗ್ಗರಿಸಿದರೆ ಮಸಣದಮನೆ

ಅಂಗೈಯ ಹುಣ್ಣಿಗೆ
ಕನ್ನಡಿ ಬೇಕೇ
ಮುಂಗೈಯ ಮುನ್ನುಡಿ
ಯೋಚನೆ ಬರೆಯಬೇಕೇ ಎಂದು

- ಕಿರಣ್ ಕುಮಾರ  ಹೆಚ್ 
ತುಂಬೇನಹಳ್ಳಿ
ಕೈಲಾಂಚ ಹೋಬಳಿ
ಕೆ.ಪಿ. ದೊಡ್ಡಿ ಅಂಚೆ
ರಾಮನಗರ ತಾ ಮತ್ತು ಜಿಲ್ಲೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...