ವನ ಸಿರಿ ರೂಪವ ಕಂಡು
ಮನ ಸೋತು ಕರಗಿ ಕೊರಗಿದೆನು
ದಾರು ಕುಡಿದು ಕಡಿದು ತುಂಡು
ನಿದ್ದೆ ಮಾಡದೆ ರಾತ್ರಿಯ ಕಳೆದೆನು//
ಕೆಳಿತು ಗೆಜ್ಜೆಯ ನಾದ
ಕಣ್ಣಿಗೆ ಕಾಣದು ಪಾದ
ನೀಡದೆ ಮುದ ನೀಡಿತು ಭಾಧ
ಬಲ್ಲವರಾರು ಹೃದಯ ವೀಣೆಯ ಶೋಧ//
ಮರ ಬಳ್ಳಿಯ ಅಪ್ಪಿಗೆ
ಸೂರ್ಯ ಚಂದ್ರರ ಒಪ್ಪಿಗೆ
ನಿಜ ಅದು ಕಾನನ ಸ್ವರ್ಗದ ತಾಣ
ಮಜ ಮಾಡಲು ತಡ ಮಾಡದೆ ಮಾಡು ಪಯಣ//
ಸವಿ ಹಣ್ಣು ಹಂಪಲ ಗಡ್ಡೆ ಗೆಣಸು
ಬೆಳೆಯಲು ಕಾಣು ಸುಂದರ ಕನಸು
ಪೀಳಿಗೆ ಬಾಳಲು ತುಸು ಪೋಷಿಸು
ನೀಡುವೆ ಆಹಾರ ನೀರು ಶುದ್ದ ಗಾಳಿ ಸೇವಿಸು//
ಈ ಒಡಲು ಜೀವರಾಶಿಗಳ ಕಣಜ
ಅರಿತು ಬೆರೆತು ಬಾಳು
ಹಿರಿಯರೆ ಮಾಡಿಲ್ಲವೆ ವನ ಬನ ಪೂಜ
ಬದುಕಿಗೆ ಬರದಿರಲು ಗೋಳು//
- ಧ್ಯಾಮ್ ರಾಜ್ ವಾಯ್ಹ್ ಸಿಂದೋಗಿ. ಸಾ!!ಭೈರಾಪೂರ, ತಾ!ಜಿ!!ಕೊಪ್ಪಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ