ಲೀಲಾ ವಿನೋದಗಾರ ಸೃಷ್ಟಿಕರ್ತನ, ಸೃಷ್ಟಿಯ ಪ್ರತಿಯೊಂದು ಜೀವಿಗೂ, ಒಂದಲ್ಲ, ಒಂದು ಸಮಸ್ಯೆ ನೋವು, ಸೃಷ್ಟಿಸಿಯೇ ಭುವಿಗೆ ಕಳಿಸಿದ್ದಾನೆ, ಅದರಲ್ಲೂ ಮನುಷ್ಯ ಜೀವಿಗಂತೂ, ಸಮಸ್ಯೆಗಳ ಸರಮಾಲೆ, ನೋವಿನ, ಸಾಗರವನ್ನೇ ತುಂಬಿಸಿ ಸೃಷ್ಟಿಸಿದ್ದಾನೆ ಅನಿಸುತ್ತೆ.ಸಮಸ್ಯೆಯೇ ಇಲ್ಲದ,ವ್ಯಕ್ತಿ ಪೃಥ್ವಿಯೊಳು ಸಿಗುವದು ಅತಿ ವಿರಳ. ಒಂದು ತುಂಬು ಕುಟುಂಬ. ಅಲ್ಲಿ ಆಗರ್ಭ, ಸಿರಿವಂತಿಕೆ ಇಲ್ಲದಿದ್ದರೂ, ಸುಖ,-ಶಾಂತಿ, ನೆಮ್ಮದಿ, ಸಡಗರ, ಸಂಭ್ರಮಕ್ಕೇನು ಕೊರತೆಯಿರಲಿಲ್ಲ, ಆ ಒಂದು ಕುಟುಂಬದ, ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದ, ಖಾಸಗಿ ಸಂಸ್ಥೆಯೊಂದರಲ್ಲಿ ನೌಕರಿಯಲ್ಲಿದ್ದ, ಶ್ರಮಜೀವಿ ವ್ಯಕ್ತಿಗೆ ಶ್ರೀಮಂತ ಮನೆತನದ ಕನ್ನೆಯೊಂದಿಗೆ ವಿವಾಹವಾಗುತ್ತದೆ. ಎಲ್ಲರು ಹರುಷದಿ ಸಂಭ್ರಮಿಸುತ್ತಿರುತ್ತಾರೆ,ಆದರೆ ಆ ಮದುವೆ, ಕುಟುಂಬದಿ ಭೀಕರ, ಸುನಾಮಿಯನ್ನು ಸೃಷ್ಟಿಸುತ್ತದೆ ಅಂತ, ಕನಸಲ್ಲೂ ಸಹಿತ ಯಾರು ಊಹಿಸಿರಲಿಲ್ಲ. ಮನೆಗೆ ಸೌಭಾಗ್ಯ, ಲಕ್ಷ್ಮಿಯಾಗಿ ಬರಬೇಕಾದವಳು ಮಹಾಮಾರಿಯಾಗಿ ಬಂದಳು. ಬಂದವಳೇ ಜೇನುಗೂಡಿಗೆ ಕಲ್ಲೆಸೆದು, ಕೋಲಾಹಲ ಸೃಷ್ಟಿಸಿದಳು. ಸಹೋದರ, ಸಹೋದರಿಯರಲ್ಲಿ ಕೊನೆಗೆ ಹೆತ್ತಯೊಂದಿಗೆ ವಿರಸ, ಉಂಟಾಗುವಂತೆ ಮಾಡಿ ಆ ದೇವಸ್ಥಾನದಂತಾ ಮನೆಯಿಂದ ತನ್ನ ಗಂಡನನ್ನು ಹೊರ, ಕರೆತಂದು. ತನ್ನ ತವರೂರಾದ, ಪಟ್ಟಣದಲ್ಲಿ ಮನೆ ಮಾಡಿದಳು. ಪತಿಯನ್ನು ಪರವಶಮಾಡಿಕೊಳ್ಳಲ್ಲು ಅತೀವ ಪ್ರಯತ್ನ ಪಡುತ್ತಿದ್ದಳು, ಆದರೆ ಆ ಮಾತೃ ಮಮತೆಯ ಮನುಷ್ಯ,ದಿನಾಲೂ ಕುಟುಂಬದಲ್ಲಿ ಕಲಹ ಸರಿಯಲ್ಲವೆಂದು ಬೇರೆ ಮನೆಮಾಡಿದ್ದನೆ ವಿನಃ ಇವಳ, ತಾಳಕ್ಕೆ ಕುಣಿಯಲು ಅಲ್ಲ, ಅವನು ಆಕೆಯ, ಮಾತಿಗೆ ಸೊಪ್ಪು ಹಾಕಲಿಲ್ಲ. ಸಹೋದರ - ಸಹೋದರಿಯರ ವಿವಾಹ, ಮಾಡಿದ. ತಾಯಿಯನ್ನು ಮಗುವಿನಂತೆ ಆರೈಕೆ ಮಾಡುತ್ತಿದ್ದ, ದೇವತೆಯಂತೆ ಆರಾಧಿಸುತ್ತಿದ್ದ.ಇದನೆಲ್ಲ ಕಂಡು ಸಹಿಸಿಕೊಳ್ಳಲು ಸಾಧ್ಯವಾಗದೆ ಈಕೆ ನಾನಾ ಕುತಂತ್ರ, ಮಾಡುತ್ತಲೇ ಇದ್ದಳು. ಬಹುಶಃ ಈ ಎಲ್ಲಾ ಪಾಪ ಕೃತ್ಯದ, ಫಲವೇನು ? ಮದುವೆಯಾಗಿ ಹತ್ತು ವರುಷವಾದರೂ ಸಂತಾನ, ಭಾಗ್ಯ ಬರಲಿಲ್ಲ,ಇದರ ಕುರಿತು ಇವಳಿಗೆ ಕಿಂಚಿತ್ತೂ ಚಿಂತೆ, ನೋವು, ದುಃಖವಿರಲಿಲ್ಲ. ಆದ್ರೆ ಇವರ ಕುಟುಂಬದ, ಪ್ರತಿಯೊಬ್ಬರ ಹೃದಯದಲ್ಲಿ ಸಂಕಟದ ಸಾಗರವೆ ಮಡುಗಟ್ಟಿತ್ತು, ಅದರಲ್ಲೂ ಆ ಸಹ್ರದಯಿ ಹರಕೆಹೊತ್ತು ಕೊಳ್ಳದ ದೇವರುಳಿದಿಲ್ಲ.
ಇದೆಲ್ಲದರ ಫಲವೇನು ಅನ್ನುವಂತೆ ಮನೆಮುರ್ಕಿ ಗರ್ಭವತಿಯಾದಳು, ಈ ಸವಿ ಸಂಗತಿಯಿಂದ, ಕುಟುಂಬದಿ ಸಂತೋಷದ ಸಾಗರವೆ ಆವರಿಸಿತು. ಇವಳು ಮಾತ್ರ, ತನಗೂ ಇದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ಇರುತ್ತಿದ್ದಳು, ನಮ್ಮ ನಡುವೆ, ಅದೇನೆ ಇದ್ರು ಕಾಲವನ್ನು ತಡೆಯೋರು ಯಾರು,? ನವಮಾಸ ತುಂಬಿ ಪ್ರಸವ ಸಮಯ ಬಂದೆ ಬಿಟ್ಟಿತು, ತಂದೆಯಾಗುತ್ತಿರುವೆ ಅನ್ನುವ ಈತನ ಸಂತಸಕ್ಕೆ ಪಾರವೇ ಇರಲಿಲ್ಲ. ಆದರೆ ವಿಧಿ ಅಲ್ಲಿಯೂ ತನ್ನ ಅಟ್ಟಹಾಸ ಮೆರೆಯಿತು. ಸುಲಭವಾಗಿ ಆಗಬೇಕಿದ್ದ ಹೆರಿಗೆ, ಶಸ್ತ್ರ, ಚಿಕಿತ್ಸೆ ಮಾಡಿ ಮಗು ಹೊರತಗೆಯುವಂತಾಯಿತು, ಇದಾದ ಬಳಿಕವಾದ್ರೂ ಖುಷಿ ಇತ್ತೇ, ಖಂಡಿತ ಇಲ್ಲ. ಜನಿಸಿರುವದು ಸುಂದರ ವದನದ, ಅಸಹಜ ಹೆಣ್ಣು ಶಿಶು, ಕ್ಷೀಣ ದೇಹ, ಕಣ್ಣು ತೆರೆದಿಲ್ಲ,ಅಳುವಿನ ಧ್ವನಿಯಂತೂ ಮೊದಲೇ ಇಲ್ಲ. ವೈದ್ಯರ ಸಹಿತ, ಎಲ್ಲರು ಧಿಗ್ಬ್ರಾಂತರಾಗಿದ್ದಾರೆ. ಯಾರ, ಬಾಯಿಂದಲೂ ಮಾತುಗಳೇ ಬರುತ್ತಿಲ್ಲ. ಬರುತ್ತಿರುವದು ಕೇವಲ, ಕಂಬನಿ ಧಾರೆ ಮಾತ್ರ. ಇಲ್ಲಿ ಭರವಸೆಯ, ಸಂಗತಿಯಂದ್ರೆ ಮಗು ಉಸಿರಾಗುತ್ತಿರುವದು. ಅಷ್ಟರಲ್ಲಿ ಮಕ್ಕಳ ತಜ್ಞ ವೈದ್ಯರು ಆಗಮಿಸಿ ಮಗುವಿನ, ಪರಿಸ್ಥಿತಿಯನ್ನು ಪರಿಶೀಲಿಸಿ, ತುರ್ತುನಿಗಾ ಘಟಕಕ್ಕೆ ರವಾನಿಸಿ ಚಿಕಿತ್ಸೆ ಆರಂಭಿಸುತ್ತಾರೆ.ತಂದೆಯ ಆಕ್ರಂದನ ಮುಗಿಲುಮುಟ್ಟಿತ್ತು, ದಿನಗಳು ಉರುಳುತ್ತಾ ಹೋಯಿತು, ಮಗುವಿನಲ್ಲಿ ಯಾವದೇ ಚೇತರಿಕೆ ಇಲ್ಲ. ಅವನಿಗೆ ದೈವಕ್ಕೆ ಬೈಯುವುದು ಬಿಟ್ಟು ಬೇರೆ ಮಾರ್ಗವೇ ಇರಲಿಲ್ಲ,ಹಲವು ದಿನಗಳ ನಂತರ ಅದ್ಭುತವೆಂಬಂತೆ, ಮಗು ಕಣ್ತೆರೆದು ಅಳಲು ಆರಂಭಿಸಿತು. ವೈದ್ಯಲೋಕಕ್ಕೆ ಸವಾಲಾಗಿದ್ದ, ಮಗುವಿನ ಅಳು ಕೇಳಿ ವೈದ್ಯರಿಗೂ ಸಂತಸವಾಯಿತು. ಎಲ್ಲರ ಕಂಗಳಿಂದ ಆನಂದಬಾಷ್ಪ ಸರಿಯಿತು, ಆದರೇನು ಫಲ ವಿಧಿಯ, ವಕ್ರದೃಷ್ಟಿ ಇಲ್ಲಿಯೂ ಬೀರಿತು. ಕಂದಮ್ಮ ಉಸಿರಾಡುತ್ತದೆ ಅನ್ನುವದು ಬಿಟ್ಟು ಬೇರಾವುದೂ ಸರಿ ಇರಲಿಲ್ಲ. ಸಜೀವ ಶವ ಸ್ಥಿತಿಯಲ್ಲಿಯೇ ಮಗು ಜೀವಿಸಿದಷ್ಟು ಸಮಯ ಇರುವದೆಂದು ಅರಿತ, ವೈದ್ಯರು. ಮಗುವನ್ನು ಮನೆಗೆ ಕರೆದುಕೊಂಡು ಹೋಗಿ ಅಂತ ಪೋಷಕರಿಗೆ ತಿಳಿಸಿದಾಗ, ನೀರವ ಮೌನ, ಆವರಿಸಿ ಅವರಿಗೆ ಬರಸಿಡಿಲುಗಳ, ಮಳೆಗರೆದು ಗಗನವೇ ಅಪ್ಪಳಿಸಿದಂತೆ, ಭುವಿಯೆ ಬಿರಿದು ಬರಸೆಳೆದಂತ್ತಾಯಿತು. ಆ ದೃಶ್ಯ ಕಂಡ ವ್ಯಕ್ತಿ ಅದೆಷ್ಟೇ ಕರುಣಾಹೀನ,.ಆಗಿದ್ದರು ಕಣ್ಣೀರು ಸುರಿಸದೆ ಇರಲಿಲ್ಲ.
ತಂದೆಯ ರೋದನೆಯಂತೂ ಹೇಳತೀರದು ಭಿಕ್ಷಕನಂತೆ ಪರಿಪರಿಯಾಗಿ ಬೇಡಿಕೊಳ್ಳುತಿದ್ದಾನೆ, "ಹೇಗಾದರೂ ಮಾಡಿ ನನ್ನ ಮಗುವನ್ನು ಗುಣಪಡಿಸಿರಿ ನಿಮಗೆ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತೇನೆ." (ಕಾಲಿಗೆಬೀಳುವಷ್ಟರಲ್ಲಿ ವೈದ್ಯರು ತಡೆದು )" ನಿಮ್ಮ, ನೋವು ನಮಗೆ ಅರ್ಥವಾಗುತ್ತದೆ, ನಾವು ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇವೆ, ಆದರೆ ನಮ್ಮ ಕೈಯಲ್ಲಿ ಏನು ಇಲ್ಲ. ಎಲ್ಲವು ಸೃಷ್ಟಿಕರ್ತನ ಆಟ, ನಾನು ನಿಮಗೊಂದು ವಿಳಾಸ ಬರೆದುಕೊಡುತ್ತೇನೆ ಅಲ್ಲಿಗೆ ಹೋಗಿ ತೋರಿಸಿ ಗುಣಮುಖವಾದ್ರೂ ಆಗಬಹುದು. (ವಿಳಾಸ ಬರೆದುಕೊಟ್ಟು ಹೋಗುವರು ) ಭಾರವಾದ, ಮನದೊಂದಿಗೆ ಮಗುವನ್ನು ಮನೆಗೆ ಕರೆದುಕೊಂಡು ಹೋಗುವರು. ಅತೀವ, ಪ್ರೀತಿ, ಮಮತೆ, ವಾತ್ಸಲ್ಯದಿಂದ, ಲಾಲನೆ, ಪಾಲನೆ ಮಾಡಬೇಕಾದ ತಾಯಿಯೇ ಮಗುವಿನ ಬಗ್ಗೆ ಅಸಡ್ಡೆ ತೋರುವಳು, ಆ ಎಳೆಕಂದನ, ಕಂಡರೆ ಅಸಹ್ಯ ಪಟ್ಟುಕೊಳ್ಳುವಳು, ಇದರಿಂದ ಗಂಡ -ಹೆಂಡತಿಯ ನಡುವೆ ದಿನಾಲೂ ಜಗಳ, ಕಿರಿಕಿರಿ ಇದೆಲ್ಲದರ, ಜೊತೆ ನಿಂದಕರ, ಕಡುನುಡಿಗಳು ಇದರಿಂದ ಮಾನಸಿಕ ವೇದನೆಗೆ ಒಳಗಾದರು ಸಹೃದಯಿ ಮಗುವನ್ನು ಗುಣಪಡಿಸಲು ಈ ಪೃಥ್ವಿಯೊಳು ಇರುವ ಎಲ್ಲಾ ಆಸ್ಪತ್ರೆಗು ಅಲೆದಾಡಿದ ಸ್ವಲ್ಪ, ಚೇತರಿಕೆ ಅನ್ನುವದು ಬಿಟ್ಟು ಬೇರಾವ ಬೆಳವಣಿಗೆಯು ಆಗಲಿಲ್ಲ, ಇದ್ದ ಪರಸ್ಥಿತಿಯಲ್ಲಿಯೇ ಮಗು ಬಾಲ್ಯಾವಸ್ಥೆಯಿಂದ ಯವ್ವನಾವಸ್ಥೆ ಬಂದರು "ಅಪ್ಪಾ"ಅನ್ನುವ ಶಬ್ದ ಬಿಟ್ಟು ಬೇರಾವ ನುಡಿಯು ಬರುತ್ತಿರಲಿಲ್ಲ, ಅವಳಿಗೂ ಅಪ್ಪನೆಂದ್ರೆ ಅಷ್ಟೊಂದು ಪ್ರೀತಿ. ತಂದೆ ಮಗಳ, ಆ ಪ್ರೀತಿ ಮಮಕಾರ, ಅಕ್ಷರಗಳಿಂದ ವರ್ಣಿಸಲು ಅಸಾಧ್ಯ. ಇದು ಕೂಡ ವಿಧಿಗೆ ಇಷ್ಟವಾಗಲಿಲ್ಲವೆನುಸುತ್ತೆ,ಕರುಣಾಮಯ ವ್ಯಕ್ತಿಗೆ ಭೀಕರ ಮಾರಕ ಕಾಯಿಲೆ ಕ್ಯಾನ್ಸರ ರೋಗಕ್ಕೆ ತುತ್ತಾಗುತ್ತಾನೆ. ಆದರೂ ಆತನಿಗೆ ತನ್ನ ಬಗ್ಗೆ ಚಿಂತೆಯಿಲ್ಲ, ನಾನು ತೀರಿದ ಮೇಲೆ, ಮಗಳ ಗತಿಯೇನು ? ಅನ್ನುವ ಯೋಚನೆಯಲ್ಲಿಯೇ ಮತ್ತಷ್ಟು ದುರ್ಬಲನಾಗುತ್ತಾನೆ ಆ ನೋವಲ್ಲಿಯು
ಮಗಳ ಭವಿಷ್ಯಕ್ಕಾಗಿ ಹಲವು ಸವಲತ್ತುಗಳನ್ನು ಮಾಡಿಡುತ್ತಾನೆ. ಇಷ್ಟೆಲ್ಲ ನಡೆಯುತ್ತಿದ್ದರೂ ಅವನ ಹೆಂಡತಿಗೆ ಕಿಂಚಿತ್ತೂ ಯೋಚನೆಯಿಲ್ಲ. ತನ್ನ ತವರುಮನೆಯವರು ಸಿರಿವಂತರೆನ್ನುವ ಅಹಂಕಾರವೋ ? ಪೀಡೆ ತೊಲಗಿದರೆ ತೊಲಗಿತು ನಾನು ಆರಾಮಾಗಿರಬಹುದು ಹುಚ್ಚು ಮನೋಭಾವವೋ? ಅರಿಯದ ಪರಸ್ಥಿತಿ ಆತನದು.
ಪತ್ನಿಗೆ ಪರಿಪರಿಯಾಗಿ ತಿಳಿಹೇಳುತ್ತಾನೆ, ಆದರೇನು ಪ್ರಯೋಜನವಾಗುವದಿಲ್ಲ. ಅದೆಕೋರಗಲ್ಲಿ ಮಗಳ ಮಡಿಲಲ್ಲಿಯೇ ಇಹ ತ್ಯಜಿಸುವನು. ಆಗ ಆ ಬುದ್ದಿಮಾಂದ್ಯ ಜೀವಿಯ ಅಪ್ಪ, ಅಪ್ಪಾ ಅಂತ ಕೂಗುವ ಆರ್ತನಾದ, ನಿಷ್ಕರುಣಿ ದೇವರಿಗೆ ಪ್ರೀತಿ. ಹೀಗೆ ದುಃಖಿಸುತ್ತಾ ಕಂಬನಿಧಾರೆ ಹರಿಸುತ್ತಲೇ, ತನ್ನ ತಂದೆಯ ಎದೆಯ ಮೇಲೆ ಮಲಗಿ, ಅವಳು ಪ್ರಾಣ ಬಿಡುವಳು.ಈ ಹೃದಯವಿದ್ರಾವಕ ದೃಶ್ಯ ನೋಡಿದ ಊರ ಜನರೆಲ್ಲಾ ಕಣ್ಣೀರ ಕಡಲಲ್ಲಿ ಮುಳುಗಿ, ಕರುಣಾಹೀನಳಾದ ಮೃತನ ಪತ್ನಿಗೆ ಚೀಮಾರಿ ಹಾಕುವರು. ಕುರಿಗಾಯಿಗೆ, ಹೇಗೆ ಕುರಿಗಳನ್ನು ಕಳೆದುಕೊಂಡ ಬಳಿಕ ಬುದ್ದಿ ಬರುತ್ತದೆಯೋ, ಹಾಗೆ ಈತನ ಮಡದಿಗೆ ಜ್ಞಾನೋದಯವಾಗುವದು. ಈಗ ದುಃಖಿಸಿ ಫಲವೇನು, ಮೊದಲೆ ವಾಸ್ತವ ಅರಿತು ನಡೆದಿದ್ದರೆ ಇಂತಾ ಘೋರದುರಂತ ನಡೆಯುತ್ತಿರಲಿಲ್ಲವೇನೋ, ಹೆಣ್ಣು, ಹಠಮಾರಿಯಾಗದೆ, ಸಂಸಾರದ ಕಣ್ಣಾಗಿ ಜೀವನ ಸಾಗಿಸಿದರೆ, ಆ ಕುಟುಂಬ ನಂದಗೋಕುಲವಾಗುವದು...
- ಮಲ್ಲಿಕಾರ್ಜುನ ಎಸ್ ಆಲಮೇಲ. ಅಧ್ಯಕ್ಷರು, ಕಸಾಪ ಮತ್ತು ಕಜಾಪ ತಾಲೂಕು ಘಟಕ. ಯಡ್ರಾಮಿ ಜಿಲ್ಲಾ : ಕಲಬುರಗಿ. 9740499814.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಧನ್ಯವಾದಗಳು ಸರ್
ಪ್ರತ್ಯುತ್ತರಅಳಿಸಿ👌👍👌
ಪ್ರತ್ಯುತ್ತರಅಳಿಸಿ