ಶುಕ್ರವಾರ, ಅಕ್ಟೋಬರ್ 29, 2021

ಹೆಮ್ಮೆಯ ಕನ್ನಡ (ಕವಿತೆ) - ಅನ್ಸೀ. ಬಾಳೆಹೊನ್ನೂರು. ಚಿಕ್ಕಮಗಳೂರು(ಜಿಲ್ಲೆ).


ನನ್ನೆದೆ ಬಗೆದರು ಕನ್ನಡ
ನನ್ನೆದೆ ಬಡಿತದಲ್ಲೂ  ಕನ್ನಡ
ಗಾಳಿ ಗಾಳಿಯಲ್ಲೂ ಕನ್ನಡ
ಪ್ರತಿ ಪದ ನುಡಿಯುವೆ ನಾ ಅದುವೆ ಕನ್ನಡ....

ಬರೆಯುವೇ ನಾ ಸುಂದರ ಕನ್ನಡ
ಕನಸು-ನನಸಲ್ಲೂ ನನ್ನ ಕನ್ನಡ
ಪ್ರತಿ‌ ನಿಮಿಷದಲ್ಲೂ ಕನವರಿಕೆ ಕನ್ನಡ
ಕಣ್ಣ ಹನಿಯಲ್ಲೂ ಕನ್ನಡ....

ನನ್ನ ಬೆವರಿನ ಕಣ-ಕಣದಲ್ಲೂ ಕನ್ನಡ
ಭೂಮಿ ಬಿರಿದರೂ ಕನ್ನಡ
ರೋಮ ರೋಮದಲ್ಲೂ ಕನ್ನಡ
ಹಕ್ಕಿಗಳ ಗಾಯನದಿ ಕೇಳಿದೆ ನಾ ಕನ್ನಡ....

ಉಸಿರು ಬಿಡುವಾಗಲೂ ಕನ್ನಡ
ಜೀವನದ ಕೊನೆಯವರೆಗೂ ಕನ್ನಡ
ನನ್ನ ಉಸಿರಿನ ಕೊನೆ ಕ್ಷಣವೂ ಕನ್ನಡ
ಹೆಮ್ಮೆ ಇದೆ ನಾ ಹುಟ್ಟಿದ ನಾಡು ಕನ್ನಡ....

- ಅನ್ಸೀ, ಬಾಳೆಹೊನ್ನೂರು. ಚಿಕ್ಕಮಗಳೂರು(ಜಿಲ್ಲೆ).

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...