ಶುಕ್ರವಾರ, ಅಕ್ಟೋಬರ್ 29, 2021

ಕನ್ನಡದ ಜ್ಯೋತಿ ( ಕವಿತೆ) - ಶ್ರೀಮತಿ, ಭಾಗ್ಯ ಗಿರೀಶ್, ಹೊಸದುರ್ಗ‌‌‌‌.

ಕರುನಾಡ ಕಂದ ವರನಟನ ಪುತ್ರನಿವ
ಕನ್ನಡಿಗರ ಹೆಮ್ಮೆ ಸರಳತೆಯ ಪ್ರತೀಕನಿವ
ಪರಮಾತ್ಮ ಕರುನಾಡಿಗೆ ನೀಡಿದ ಕಣ್ಮಣಿ ಇವ
ಕರುಣೆಯಲಿ ಪರಮ ಪುನೀತನಿವ

ಕನ್ನಡಿಗರ ಮಿಲನಕ್ಕೆ ಬೆಟ್ಟದ ಹೂವು ಒಂದು
ಕನ್ನಡದ ಕಂಪು ರಾಷ್ಟ್ರಮಟ್ಟದಿ ಸೂಸುತ್ತಾ ಬಂದು
ಸಿನಿರಂಗದಲ್ಲಿ ಅಣ್ಣಾಬಾಂಡ್ ಆಗಿ ಮಿಂಚಿ ಮೆರೆದು
ನೇತ್ರದಾನದ ಧನ್ಯತೆಯಲಿ ಅಮರವಾಗಿದೆ ತಾ ಇಂದು

ಅಭಿಮಾನಿಗಳ ಪ್ರಿಯ ರಾಜಕುಮಾರ
ನಟಸಾರ್ವಭೌಮನ ಮುದ್ದು ಕುವರ
ಸ್ನೇಹದಲ್ಲಿ ಆಕಾಶದಷ್ಟು ಎತ್ತರ
ಬಾಂಧವ್ಯದಿ ಮೀರಿಸಲಾಗದು ಅಪ್ಪು ಹುಡುಗರ

ಚಿಣ್ಣರ ಕುಣಿಸುವ ಅಣ್ಣನು
ಹೆಚ್ಚಿಸಿದ ಬಣ್ಣದಲೋಕದ ಸೊಬಗನು
ನನಸು ಮಾಡಿದ ಬಹುಜನರ ಕನಸನು
ಅಮರನಾಗಿಹ ಕನ್ನಡ ಮಾತೆಯ ಪ್ರೀತಿಯ ಕುವರನು

ಕೋಟ್ಯಾಂತರ ಕನ್ನಡಿಗರ ಹೃದಯದ ಅಧಿಪತಿ
ಅಭಿಮಾನಿಗಳಲ್ಲಿ ಬೆಳಗಿದರು ಕನ್ನಡದ ಜ್ಯೋತಿ
ಲೀನವಾಯಿತು ವೀರ ಕನ್ನಡಿಗನ ಪ್ರಾಣ ಜ್ಯೋತಿ
ಕಾತರಿಸಿ ಹೊರಟಿದೆ ತಂದೆ ತಾಯಿಯ ಮಡಿಲ ಪ್ರೀತಿ.
✍️ ಶ್ರೀಮತಿ, ಭಾಗ್ಯ ಗಿರೀಶ್
      ಹೊಸದುರ್ಗ
ಮೋ:-೯೬೧೧೦೯೨೩೯೪.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...