ಬಾಡದಲಿ ಜನಿಸಿದೆ ಬಾಡದ ಹೂ ಎನಿಸಿದೆ..ಕಾಗಿನೆಲೆ ಕ್ಷೇತ್ರದೊಳು ಕಲ್ಪವೃಕ್ಷವೆನಿಸಿದೆ.. ಬೀರಪ್ಪ ಬಚ್ಚಮ್ಮರ ಮುದ್ದಿನ ಮಗನಾದೆ.. ತಿಮ್ಮಪನ್ನ ಹರಕೆಯ ಮುದ್ದಿನ ಪ್ರಸಾದವು ನೀನಾದೆ.. ನಡೆದುಕೊಂಡು ಊರೂರು ಅಲೆಯುತ್ತಾ.. ತಮ್ಮ ಕೀರ್ತನೆಗಳ ಮೂಲಕವೇ ಸಮಾಜದ ಅಂಕು- ಡೊಂಕುಗಳನ್ನು ತಿದ್ದಿದ ಮಹಾನ್ ಪುರುಷ ನೀನು.
ಶ್ರೀ ಕೃಷ್ಣನ ಆರಾಧಕ ಆಧ್ಯಾತ್ಮಿಕ ಚಿಂತಕ. ಕನ್ನಡ ದಾಸ ಸಾಹಿತ್ಯದ ಮೇರು ಪೂಜಕ.. ಭಕ್ತಿ ಭಾವುಕತೆಯ ಸರಳ ಪ್ರಾಮಾಣಿಕ.. ಕನಕನ ಕಿಂಡಿಗೆ ಜನ್ಮ ನೀಡಿದ ಜನಕ.
ವ್ಯಾಸರಾಯರ ಅಚ್ಚು ಮೆಚ್ಚಿನ ಶಿಷ್ಯರು ಆದಿಕೇಶವನ ಪರಮ ಭಕ್ತರು ಶ್ರೀ ಕನಕ ದಾಸರು.. ಮೇಲು ಕೀಳೆಂಬುದ ನೀ ಅಳಿಸಿದೆ.. ಕುಲದ ನೆಲೆಯನ್ನು ನೀ ತಿಳಿಸಿದೆ.. ಬೀಸೋ ಗಾಳಿ ಹರಿಯೋ ನೀರು ಎಂದಾದರೂ ಕೇಳಿತೆಯೇ ನೀ ಯಾವ ಕುಲವೆಂದು .. ಕನಕ ನಿನ್ನಂತಾಗಬೇಕು.
- ಗಂಗಜ್ಜಿ. ನಾಗರಾಜ್ ಹವ್ಯಾಸಿ ಬರಹಗಾರರು ಸಾಸ್ವಿಹಳ್ಳಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ