ಅಮಾವಾಸ್ಯೆಯನ್ನು ಕೊಲ್ಲಬಹುದು
ಅಮಾವಾಸ್ಯೆ ಆಲಸ್ಯ ಬೆಳದಿಂಗಳ
ಹೆಗಲೆರಿದೆ.
ಅಮಾವಾಸ್ಯ ಅಟ್ಟಹಾಸಕ್ಕೆ ನೊಂದ ಬೆಳದಿಂಗಳ ಹೃದಯ.
ಅಮಾವಾಸ್ಯೆ ಕೊಲ್ಲುವುದು ಅಷ್ಟು ಸುಲಭವಲ್ಲ.
ಬೆಳದಿಂಗಳ ಬೆಳಕಿನಲ್ಲಿ ಧ್ಯಾನ ಕೂತು ಲೋಕಗಳ ಸುತ್ತಿ.
ಬೆಳಕು ಹರಿದಾಗ ಮಣ್ಣಿನೊಂದಿಗೆ ಬೆರೆತು ಹೋಗಿದ್ದಾರೆ.
ಎಂಟೆದೆಯ ಅಮಾವಾಸ್ಯೆ ಪತ್ತೆದಾರಿ
ಸೂರ್ಯನೆದುರು.
ಕೊಲೆಗಡುಕರು ಅಮಾವಾಸ್ಯೆ ತಿಥಿಯಂದು ಎತ್ತಿದ ಕೈ.
ಉರಿವ ಏಕಾಂತ ದೀಪ ಬೆಳದಿಂಗಳು
ಕತ್ತಲೆ ಮಾರುಣ ಹೋಮ.
ಗಾಡ ಕತ್ತಲೆಗೆ ಅಧಿಪತಿ ಯಜಮಾನ
ಬೆಳಕಿನ ಗುಲಾಮನಾಗುವ ಇಷ್ಟವಿಲ್ಲ
ಬೆಳಕಿನ ಎರವಲು ಪಡೆದ ಅಮಾವಾಸ್ಯೆ.
ಕತ್ತಲೆಗೆ ಕೈಕಾಲು ಕಾಲುದಾರಿ ಯಾತ್ರೆ
ಆಯಾಸಗೊಂಡ ದೀರ್ಘ ರಾತ್ರಿ
ಕೊಲ್ಲಬಹುದು ಬೆಳದಿಂಗಳ ಒಂದು ಇರುಳನ್ನು.
ಅಮಾವಾಸ್ಯೆ ಸಾಕ್ಷಿ ಎಂಬಂತೆ ಚಂದ್ರ
ಅಮಾವಾಸ್ಯೆಗೆ ಸೆಡ್ಡು ಹೊಡೆದು ಇರುಳು.
ಒಂಟಿ ನಕ್ಷತ್ರ ಅಳುವುದು ಪೆಟ್ರೋಲ್ ಬೆಲೆ ಏರಿಸಿದ್ದ ಕುರಿತು.
ಕುಂಟುತ್ತಾ ತೆವಳುತ್ತಾ ಕಪ್ಪಿಟ ಮೋಡದ ಬದುಕು.
ದೀರ್ಘ ರಾತ್ರಿ ಆಡಳಿತ ಭರವಸೆಯ
ಮೋಡಿಗೆ ಸಿಲುಕಿ.
ಸೂರ್ಯ ಉದಯ ಚಿಂದಿ ಆಯುವ
ಆಡಳಿತಗಾರರು ಮಲಗಿರಲು.
ಕೂರ್ಮ ನಡಿಗೆ ಕತ್ತಲೆಡೆಗೆ ದಿಕ್ಸೂಚಿ ಭಾಷಣ.
ಕತ್ತಲೆ ಸರಿಸುವ ನಾಯಕ ಅಮಾವಾಸ್ಯೆ ತಿಥಿಯಂದು ಊಟ
ಬೆಳದಿಂಗಳು ನೊಂದವರಿಗೆ ಬೆಣ್ಣೆ.
ನಿಂಬೆ ಹಣ್ಣು ಕೊಟ್ಟು ಕಷ್ಟ ನಿವಾರಣೆ
ಹೊರಗಿರುವ ನಕ್ಷತ್ರ ರಾಶಿ ಫಲ ರಕ್ತ ಮಾಂಸ ಬೇಡುವವರು ಯಾಗದೆಸರಲ್ಲಿ.
ಓಟು ಬ್ಯಾಂಕ್ ಎಂಬ ಕೋಮುಗಲಭೆ ಅಮಾವಾಸ್ಯೆ ತಿಥಿಯಂದು.
ಕೋಟ್ಯಾಂತರ ನಕ್ಷತ್ರ ಬೆಳಕು ಕಾಣದೆ ಹಸಿವು ಮಕ್ಕಳಲ್ಲಿ.
ಬಿರುಗಾಳಿ ಬೀಸಿ ಗುಡುಗು ಸಿಡಿಲು ಮಿಂಚು ಸಾಲು ಸಾಲು ಚಿತ್ರಗಳು.
ಕತ್ತಲೆ ಪರದೆ ಸರಿಯಿತು ಐದು ವರ್ಷ ವಯಸ್ಸು ದಾಟಿ.
ಅಮಾವಾಸ್ಯೆ ಅಮಾನತು ಮಾಡಲಾಗಿದೆ.
ಬೆಳದಿಂಗಳಿಗೆ ಎಫ್ಐಆರ್ ದಾಖಲಾಗಿದೆ
ಜೈ ಎಂದವರಿಗೆ ಪ್ರಶಸ್ತಿ ಪ್ರಧಾನ.
ಚಂದ್ರನು ಸಾಕ್ಷಿ ಹಗಲಿಗೆ ಆಡಳಿತಕ್ಕೆ.
ದಾರಿ ತೋರುವ ದೀಪ ಪ್ರಜಾಪ್ರಭುತ್ವ.
ಓಟು ಹಾಕದೆ ಮಾಡಬಹುದಾದ ಉಸಾಬರಿ ಬೇಕು.
ಖಾತೆಗೆ ಹದಿನೈದು ಲಕ್ಷ ಕೈಗೊಂದು ಉದ್ಯೋಗ ಭಕ್ತರಿಗೆ.
ಅಮಾವಾಸ್ಯೆ ಕಳೆದು ಬೆಳದಿಂಗಳು ಬಂದಂತೆ ಆಡಳಿತ ಬದಲು.
- ಪ್ರೊ.ಗಂಗಾರಾಂ ಚಂಡಾಲ ಮೈಸೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ನಿಮ್ಮ ಕವಿತೆ ಚೆನ್ನಾಗಿ ಮೂಡಿ ಬಂದಿದೆ ಸಾರ್, ಅಮಾವಾಸ್ಯೆ ಬಗ್ಗೆ ವಿಶ್ಲೇಷಣೆ ಚೆನ್ನಾಗಿ ಮಾಡಿದ್ದೀರಿ, ಅಮಾವಾಸ್ಯೆ ಎಂದರೆ ಎಲ್ಲರಿಗೂ ಭಯ, ಉತ್ತರ ಕರ್ನಾಟಕದ ಬಹುತೇಕ ಜನ ಒಳ್ಳೆ ದಿನ ಎಂದು ಹಬ್ಬದ ತರ ಆಚರಣೆ ಮಾಡುತ್ತಾರೆ. ಅಭಿನಂದನೆಗಳು ಸಾರ್
ಪ್ರತ್ಯುತ್ತರಅಳಿಸಿಸರ್, ಅಮಾವಾಸ್ಯೆಯ ಮಹತ್ವ, ಅದರ ತೀಕ್ಷ್ಣತೆ ಮತ್ತು ಹಿಂದಿರುವ ವಿವಿಧ ಆಯಾಮಗಳನ್ನು ಹಾಗೂ ಪಸ್ತುತ ದೇಶದಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ದೇಶದ ಆಡಳಿತ ವ್ಯವಸ್ಥೆಯನ್ನು ಬೆರಳು ಮಾಡಿ ಕವಿತೆಯ ಮೂಲಕ ಮನೋಜ್ಞವಾಗಿ ಹೇಳಿದ್ದೀರಿ.
ಪ್ರತ್ಯುತ್ತರಅಳಿಸಿ😊💐
ಪ್ರತ್ಯುತ್ತರಅಳಿಸಿ