ವಿದ್ಯಾ ರೆಡ್ಡಿ ಶ್ರೀಮತಿ 'ವಿದ್ಯಾ ಮಂಜುನಾಥ್ ರೆಡ್ಡಿ' ಅವರು ಕ್ರಿ.ಶ. 1983 ಫೆಬ್ರವರಿ 28 ರಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಪ್ಪಲಕಟ್ಟಿ ಯಲ್ಲಿ ತಾಯಿ ರಂಗಮ್ಮ ತಂದೆ ಶ್ರೀಮಂತ ಅವರ ಉದರದಲ್ಲಿ ಎರಡನೇ ಮಗಳಾಗಿ ಜನಿಸಿದರು.
ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ಪುಲಗಡ್ಡಿಯಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ನಾಯಕ್ ಸ್ಟೂಡೆಂಟ್ ಫೆಡರೇಶನ್ ಸ್ಕೂಲ್ ಗೋಕಾಕನಲ್ಲಿ ಮುಗಿಸಿದ್ದಾರೆ . ಜೆ ಎಸ್ ಎಸ್ ಕಾಲೇಜ್ ಧಾರವಾಡನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮುಗಿಸಿ, ಪದವಿ ಶಿಕ್ಷಣವನ್ನು ಎಲ್ ಇ ಟಿ ಕಾಲೇಜ್ ಗೋಕಾಕನಲ್ಲಿ ಮುಗಿಸಿದ್ದಾರೆ. ಎಂ ಎ ಸೋಶಿಯಾಲಜಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ, ಎಂ ಎ ಕನ್ನಡವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪಡೆದು, SLET ಪರೀಕ್ಷೆಯಲ್ಲಿಯೂ ಪಾಸಾಗಿದ್ದಾರೆ. . ಸರಳ, ಶಾಂತ ಸ್ವಭಾವದ, ಸೂಕ್ಷ್ಮಮತಿ ಹಾಗೂ ಕ್ರಿಯಾಶೀಲತೆಯುಳ್ಳ ಶ್ರೀಮತಿ 'ವಿದ್ಯಾ ರೆಡ್ಡಿ' ಅವರು ತಮ್ಮ ವೃತ್ತಿಯ ಜೊತೆ ಜೊತೆಗೆ ಸಾಹಿತ್ಯದ ಅಭಿರುಚಿಯನ್ನು ಮೈಗೂಡಿಸಿಕೊಂಡು ಸಮಾಜಮುಖಿ ಕಾರ್ಯಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜೊತೆಗೆ, ಕಾದಂಬರಿ, ಕವಿತೆ, ವಿಮರ್ಶೆ, ಲೇಖನಗಳು ಹಾಗೂ ಕಥೆಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಗೌರವಾನ್ವಿತ ಕವಯಿತ್ರಿಗಳ ಮೇಲೆ ದ ರಾ ಬೇಂದ್ರೆ, ಕುವೆಂಪು, ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿ, ಎಸ್ಎಲ್ ಭೈರಪ್ಪ, ಮತ್ತು ಗೀತಾ ನಾಗಭೂಷಣ. ಅವರ ಪ್ರಭಾವ ಬೀರಿರುವುದು ಕಂಡುಬರುತ್ತದೆ.
ಇವರ ಹಲವಾರು ಬರವಣಿಗೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರ ಮನಗೆದ್ದಿವೆ. ಇವರು ಕ್ರಿ.ಶ , 2020 ಎಪ್ರಿಲ್ 8 ರಂದು "ಮಂಜು ಮುಸುಕಿದ ಹಾದಿ" ಎನ್ನುವ ಕಾದಂಬರಿ, ಮತ್ತು "ಅಂದಗಾತಿ" ಎನ್ನುವ ಕವನ ಸಂಕಲನವನ್ನು ಒಟ್ಟಿಗೆ ಹೊರತಂದಿದ್ದಾರೆ.
ಜೊತೆಗೆ ಪುಸ್ತಕಗಳನ್ನು ಓದುವುದು, ಬರೆಯುವುದು, ಸಂಗೀತಕ್ಕೆ ಸಂಬಂಧ ಪಟ್ಟoತೆ ಹಾಡುವುದು, ಕೇಳುವುದು, ಪುಸ್ತಕಗಳ ಸಂಗ್ರಹ. ಕನ್ನಡ ಕವಿಗೋಷ್ಠಿಗಳಲ್ಲಿ ಚಿಂತನಾಗೋಷ್ಠಿ ಗಳಲ್ಲಿ, ವಿಚಾರಸಂಕಿರಣಗಳಲ್ಲಿ, ಉಪನ್ಯಾಸಗಳಲ್ಲಿ, ಸಂದರ್ಶನಗಳಲ್ಲಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಲವಾರು ಪ್ರಶಸ್ತಿ ಪುರಸ್ಕೃತ ಗೌರವಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ತಮ್ಮನ್ನು ಸಾಹಿತ್ಯ ಮತ್ತು ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ನಿಪ್ಪಾಣಿಯಲ್ಲಿಯ ಜ್ಞಾನ ಮೇವ ಜಯತೆ ಪ್ರತಿಷ್ಠಾನದ ಎಂ ಡಿ ಯಾಗಿ ಹಲವಾರು ಸಾಮಾಜಿಕ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ಬಹುಜನ ಹಿತರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ.
ಕೊರೋನಾದಂಥ ಕೆಟ್ಟ ಪರಿಸ್ಥಿತಿಯ ಸಂದರ್ಭದಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚಿನ ಮಾಸ್ಕಗಳನ್ನು ಮನೆಯಲ್ಲಿಯೇ ಹೊಲಿದು ಬಡವರಿಗೆ, ಪೊಲೀಸ್ ಇಲಾಖೆಗೆ, ಪೌರಾಡಳಿತ ಇಲಾಖೆಯ ಕೆಲಸಗಾರರಿಗೆ ಉಚಿತವಾಗಿ ಹಂಚುವುದರ ಮೂಲಕ ಮಾನವಿಯತೆ ಮೆರೆದಿದ್ದಾರೆ. ಮತ್ತು ಅನಾಥಾಶ್ರಮದ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸುವುದರ ಮೂಲಕ ಅನಾಥಮಕ್ಕಳ ಬಾಳಿಗೆ ಆಶ್ರಯವಾಗಿ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.
ಜ್ಞಾನ ಮೇವ ಜಯತೆ ಪ್ರತಿಷ್ಠಾನದ ವತಿಯಿಂದ ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಗಿಡಗಳನ್ನು ನೆಡುವುದರ ಮೂಲಕ ಇಂದಿನ ಯುವಪೀಳಿಗೆಗೆ ಸ್ಫೂರ್ತಿದಾಯಕವಾಗಿದ್ದಾರೆ. ಮತ್ತು ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ್ದಾರೆ.
ಶ್ರೀಮತಿ 'ವಿದ್ಯಾ ರೆಡ್ಡಿ' ಅವರ ಈ ಸಾಧನೆಗೆ ನಾಡಿನ ಹಲವಾರು ಸಂಘ-ಸಂಸ್ಥೆಗಳಿಂದ ಪ್ರಶಸ್ತಿ-ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ. ಇವರ "ಮಂಜು ಮುಸುಕಿದ ಹಾದಿ" ಕಾದಂಬರಿಗೆ ಕ್ರಿ.ಶ 2020 ರಲ್ಲಿ ಆಜೂರ ಪ್ರತಿಷ್ಠಾನದ ವತಿಯಿಂದ *"ಆಜೂರ ಪ್ರಶಸ್ತಿ"* , ಕ್ರಿ.ಶ 2021ರಲ್ಲಿ ರಾಜ್ಯ ಯುವ ಬರಹಗಾರರ ಕೇಂದ್ರ ಸಮಿತಿ ಬೆಂಗಳೂರು ವತಿಯಿಂದ *ಕುದ್ಮಲ್ ರಂಗರಾವ್ ಪ್ರಶಸ್ತಿ* , ಚೇತನ ಫೌಂಡೇಶನ್ ಹುಬ್ಬಳ್ಳಿ ವತಿಯಿಂದ *ಬಸವ ಸೇವಾರತ್ನ ಪ್ರಶಸ್ತಿ* , ಸಪ್ತಸ್ವರ ಸಂಗೀತ ಕಲಾ ಬಳಗ ಬೆಳಗಾವಿ ವತಿಯಿಂದ *ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ* ಮತ್ತು ಕನ್ನಡ ಸೇವೆಗೆ *"ಕನ್ನಡ ನಿಧಿ"* ಪ್ರಶಸ್ತಿ ದೊರೆತಿದೆ.
ಪ್ರಸ್ತುತ ಕವಿಗಳು ತಮ್ಮ ಪತಿ ಮಂಜುನಾಥ್ ರೆಡ್ಡಿ ಮತ್ತು ಮುದ್ದು ಮಕ್ಕಳಾದ ನಿಸರ್ಗಾ ರೆಡ್ಡಿ , ನಿರ್ಮಿತಾ ರೆಡ್ಡಿ ಅವರ ಜೊತೆಗೆ ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ನೆಲೆಸಿದ್ದಾರೆ.
✍️ ಅಶ್ವಜೀತ ದಂಡಿನ, ಯುಗ ಬರಹಗಾರ, ಬೀದರ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ