ಶನಿವಾರ, ಡಿಸೆಂಬರ್ 11, 2021

ನೋವು (ಕವಿತೆ) - ರಂಜಿತ್ ಕುದುಪಜೆ.

ನಗುವಿನ ಹಿಂದೆ ಮಗುವಿನಂತೆ
ಮಗುವಿನ ಮುಂದೆ ಲಾಲಿಯಂತೆ
'ಜೀವನ'ವೆಂಬ ಮೂರು ಪದವು
ಭಾವನಾತ್ಮಕತೆಯ ಮಿಡಿತವು


ಜೋಗುಳವು ಹೇಳಿಕೇಳುತಿರಲು
ಬೈಗುಳವು ಬೈದು ಮರೆಯಾಗುತಿರಲು
ಪ್ರತಿಧ್ವನಿಯ ಪ್ರಥಮವಾಗುತ
ಮನದ ಮೂಲೆಯಲಿ ದನಿಯಾಗುತ

ಮುಖವಾಡದ ಬಯಕೆಯು
ನಿಷ್ಕಲ್ಮಶ ಸೋಗಿನ ಆರೈಕೆಯು
ಜೀವವ ಬೆನ್ನಹಿಂದೆ ಹಿಂಡುತ
ಬಿಗುಮಾನ ಬಿಗಿ ಬಯಕೆಯಾಗುತ

ಸತ್ವದ ಸತ್ಯದ ಸ್ವಾದಿಷ್ಟವು
ಭ್ರಾತೃತ್ವದಲಿ ಮಿಥ್ಯದ ಮದವು
ಆತ್ಮಸಾಕ್ಷಾತ್ಕಾರ ಹುಡುಕುತ
ಭ್ರಮೆಗಳಿಗೆ ಜೋತು ಬೀಳುತ
  ✍🏻ರಂಜಿತ್ ಕುದುಪಜೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...