ಅಂದದ ಕಾಮನಬಿಲ್ಲೆ
ಚಂದದ ಕಾಮನಬಿಲ್ಲೆ
ನಿಲ್ಲೆ ನಿಲ್ಲೆ ತುಸು ಹೊತ್ತು ಅಲ್ಲೆ
ವಲ್ಲೆ ಅನಬೇಡ ನನ್ನ ನಲ್ಲೆ
ಸಪ್ತವರ್ಣಗಳ ಸೌಂದರ್ಯವ ಸಿಹಿ ಉಣ ಬಡಿಸಲು ತವಕಿಸುತ್ತಿಹಳು
ಮಾಯವಾಗದಿರು ಮೆಲ್ಲನೆ
ಕಾತುರದಿ ಕಾದಿಹಳು ನನ್ನ ಜೊತೆ ನಿನ್ನ ನೋಡಲು ತುಂಬಿಹಳು ನನ್ನ ಬಾಳಲ್ಲಿ ನಿನ್ನ
ಸಪ್ತವರ್ಣವ
ಸಪ್ತವರ್ಣಗಳು ಅವಳಿಂದ
ಬಣ್ಣ ಬಣ್ಣದ ರಂಗಾದ ರಂಗೋಲಿ ಅವಳಿಂದ
ಬಣ್ಣಗಳ ಸೌಂದರ್ಯ ಉಣಬಡಿಸುತ್ತಿರುವಳು ದಿನದಿಂದ ದಿನ
ಬಣ್ಣ ಬಣ್ಣದಚಿತ್ತಾರಗಳ ತುಂಬುತಿಹಳು ನನ್ನ ಮದರಂಗಿ
ಒಮ್ಮೋಮ್ಮೆಅನ್ಸುತ್ತೆ ಅವಳಿಂದಾನೆ ನೀನು ನಿನ್ನ ಆಗರವೇ ಅವಳೆಂದು ಹೆಚ್ಚೇನು ಹೇಳಲಿ
ಓ ಕಾಮನಬಿಲ್ಲೆ
ನಿನ್ನಂದವ ಕಂಡಿಹೇನು ಅವಳಲ್ಲಿ.....
- ಶಿವಾ ಮದಭಾಂವಿ, ಬೆಳಗಾವಿ ಗೋಕಾಕ. 8951894526.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ