ಶನಿವಾರ, ಡಿಸೆಂಬರ್ 11, 2021

ಪರಮ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು (ಕವಿತೆ) - ಮಣಿಕಂಠ ಗೌಡ , ಶಿರಸಿ (ಉ. ಕ )

ವರ್ಣಿಸಿದಷ್ಟು ಕಡಿಮೆಯೆಂದೆನಿಸುವುದು
ಇವರ ಪಾದ ಸ್ಪರ್ಶವಾದೊಡೆ ಪುಣ್ಯ ನಮ್ಮದಾಗುವುದು
ಧರ್ಮಸ್ಥಳದ ಖಾವಂದರರಾದ ಡಾ. ವೀರೇಂದ್ರ ಹೆಗ್ಗಡೆ. 
ಇವರ ವ್ಯಕ್ತಿತ್ವದ ಶ್ರೇಷ್ಠತೆಯು ಹರಡಿಹುದು ಎಲ್ಲಡೆ. 
ಅಭಯ ದಾನ, ಅನ್ನದಾನಕ್ಕೆ ಲಕ್ಷಾಂತರ ಜನರು ಮನ ಸೋತಿದ್ದಾರೆ. 

ಮಂಜುನಾಥ ಸ್ವಾಮಿಯ ಭಾವಚಿತ್ರದೊಂದಿಗೆ ಇವರ ಭಾವಚಿತ್ರಕ್ಕೂ ಪೂಜೆ ಸಲ್ಲಿಸುತ್ತಿದ್ದಾರೆ.
ಇವರಿಗೆ ಫೋಟೋಗ್ರಫಿ ಅಂದರೆ ಅಚ್ಚು ಮೆಚ್ಚು.
ಇವರು ತೆಗೆದ ಭಾವಚಿತ್ರಗಳಂತೂ ಇನ್ನೂ ಅಚ್ಚು ಮೆಚ್ಚು. 
ಅವರ ಕಾನೂನು ಪದವಿ ಪಡೆವ ಆಸೆಗೆ ದಕ್ಕೆಯುಂಟಾದರೂ ಚಿಂತಿಸಲಿಲ್ಲ. 
ಚಿಕ್ಕ ವಯಸ್ಸಿನಲ್ಲಿ ಧರ್ಮಾಧಿಕಾರಿಯಾಗಿ ಜನರ ಸೇವೆ, ಮಂಜುನಾಥ ಸ್ವಾಮಿ ಸೇವೆ ಮಾಡುವಲ್ಲಿ ಚೂರು ವಿಳಂಬ ಮಾಡಲಿಲ್ಲ.

ಇವರಿಗೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. 
ಹೆಗ್ಗಡೆಯವರಿಗೆ ಖಾವಂದರರು, ರಾಜಶ್ರೀ ಎಂಬ ಬಿರುದುಗಳು ಸಂದಿವೆ. 
ಮಗು ಮನಸ್ಸಿನ ಮೃದು ಸ್ವಭಾವದವರು.
ದುಃಖದಲ್ಲಿರುವವರ ಭಾವನೆಗಳಿಗೆ ಸ್ಪಂದಿಸುವವರು.
ವೀರೇಂದ್ರ ಹೆಗ್ಗಡೆಯವರು ನಡೆದು ಬರುವುದನ್ನು ನೋಡಿದರೆ 
ಭಗವಂತನೇ ನಡೆದು ಬರುತ್ತಿದಾನೆ ಅಂತ ಭಾಸವಾಗುವುದು. 

ಅವರ ಆಶೀರ್ವಾದ ದೊರೆತರೆ ಸಾವಿರಾರು ಕಷ್ಟಗಳು ದೂರ ವಾಗುವುದು. 
ಎಷ್ಟೇ ಹೆಸರು ಗಳಿಸಿದರು ಅಹಂಕಾರವಿಲ್ಲ.
ಇವರ ಸಹನೆಗೆ ಸರಿಸಾಟಿ ಯಾರಿಲ್ಲ.
ಇವರ ಬಗ್ಗೆ ಬರೆಯುತ್ತಿದ್ದರೆ ಇನ್ನೂ ಬರೆಯಬೇಕೆನ್ನುವ ಹಂಬಲ.

ಇವರ ಬಗ್ಗೆ ಕೇಳುತಿದ್ದರೆ ಕೇಳಬೇಕೆನ್ನಿಸುತ್ತದೆ ಇನ್ನೊಂದು ಸಲ 
ಇವರ ಬಗ್ಗೆ ಹೇಳುತ್ತಿದ್ದರೆ ಹೇಳಬೇಕೆನ್ನಿಸುತ್ತದೆ ಮತ್ತೊಂದು ಸಲ. 
ಇವರನ್ನು ನೋಡುತ್ತಿದ್ದರೆ ಮತ್ತೆ ಮತ್ತೆ ನೋಡಬೇಕೆನ್ನಿಸುತ್ತದೆ ಮಗದೊಂದು ಸಲ, ಇನ್ನೊಂದು ಸಲ.
- ಮಣಿಕಂಠ ಗೌಡ , ಶಿರಸಿ (ಉ. ಕ ) 9482079553.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...