ಕಾಶಿ ವಿಶ್ವನಾಥ ದೇವಾಲಯ ಅತ್ಯಂತ ಪ್ರಸಿದ್ಧ ದೇವಸ್ಥಾನ. ಈ ದೇವಾಲಯ ಗಂಗಾ ನದಿಯ ಪಶ್ಚಿಮ ದಡದಲ್ಲಿದೆ. ಮತ್ತು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಇದು ಒಂದು.ಇದಕ್ಕೆ ಸುವರ್ಣ ದೇವಾಲಯ ಎಂಬ ಹೆಸರು ಇದೆ ಎಂಬುದನ್ನು ರಾಷ್ಟ್ರ ಮಟ್ಟದ ಧರ್ಮ ದೀಪ್ತಿ ವಿಚಾರ ಸಂಕೀರ್ಣದಲ್ಲಿ ಕಲ್ಪವೃಕ್ಷ ವಿದ್ಯಾ ಸಂಸ್ಥೆಯ ಸಂಸ್ಥಾಪಕರೂ ಮತ್ತು ರಾಜ್ಯ ಮಟ್ಟದ ಬಸವ ಶ್ರೀ ಪ್ರಶಸ್ತಿ ವಿಜೇತರಾದ ಶ್ರೀ ಶಿವಶರಣಗೌಡ ಬಿರಾದಾರ ವಿಶ್ಲೇಷಣೆ ನೀಡಿರುವದನ್ನು ನೋಡುವದಾದರೆ ಭೂಮಿಯ ರಚನೆಯ ಸಮಯದಲ್ಲಿ ಸೂರ್ಯನ ಕಿರಣಗಳು ಕಾಶಿ ಅಂದರೆ ವಾರಾಣಸಿಯ ಮೇಲೆ ಬಿದ್ದವು ಆದ್ದರಿಂದ ಕಾಶಿಯನ್ನು ಆನಂದ ಕಾನನ ಎಂಬ ವಿಶೇಷ ನಾಮವಿದೆ. ಆನಂದ ಕಾನನದ ವೈಭವದ ದೇವಾಲಯವು ಚಿನ್ನದ ಗುಮ್ಮಟವನ್ನು ಹೊಂದಿರುವದರಿಂದ ಕಾಶಿ ವಿಶ್ವನಾಥನ ದೇವಾಲಯಕ್ಕೆ ಸುವರ್ಣ ದೇವಾಲಯ ಎಂಬ ಹೆಸರು ಇರುವದು ಧರ್ಮ ದೀಪ್ತಿಗೆ ಶೋಭೆ.ಶಿವನ ಜ್ಯೋತಿರ್ಲಿಂಗವು ಬಳಲಿ ಬಂದವರನ್ನು ಸಲಹುವ ಕಲ್ಪತರು. ದೇವಾಲಯಕ್ಕೆ ಭೇಟಿ ನೀಡಿ ಪವಿತ್ರ ಗಂಗಾನದಿಯಲ್ಲಿ ಸ್ನಾನಮಾಡುವದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಅಷ್ಟೆ ಅಲ್ಲ ಮಾನವ ಜನ್ಮವೇ ಕೊನೆಯ ಜನ್ಮವೆಂದು ಹಲವರು ಹೇಳುತ್ತಾರೆ ಆದರೆ ಪುಣ್ಯಕಾರ್ಯ ಮಾಡುವವರಿಗೂ ದೇವನು ಪುನರ್ಜನ್ಮ ಕಲ್ಪಿಸುತ್ತಾನೆ ಎಂದು ದಂತಕತೆಗಳು ಉಲ್ಲೇಖಿಸುತ್ತದೆ ಎಂಬುದನ್ನು ಎಸ್. ವ್ಹಿ. ಬಿರಾದಾರ ಇವರು ಧರ್ಮ ದೀಪ್ತಿ ವಿಚಾರ ಸಂಕಿರ್ಣದಲ್ಲಿ ತಿಳಿಸಿರುವದು ಕಾಶಿ ಕ್ಷೇತ್ರದ ವೈಭವಕ್ಕೆ ಮತ್ತಷ್ಟು ಮೆರಗುನೀಡಿದಂತಾಗಿದೆ.
ಶಿವನಿಗೆ ಅತೀ ಪ್ರೀಯವಾದ ವಸ್ತುಗಳೆಂದರೆ ರುದ್ರಾಕ್ಷಿ, ಬಿಲ್ವ, ಪಾರಿಜಾತ ಮತ್ತು ಕಲ್ಪವೃಕ್ಷ. ಅದರಲ್ಲೂ ತ್ರಿಶೂಲ ಹಿಡಿದು ನಿಂತರೆ ಆ ದೇವನ ವರ್ಣನೆಗೆ ಮಿತಿಯೇ ಇಲ್ಲ. ಧರ್ಮದ ಉಳುವಿಗಾಗಿ ಅನೇಕ ಅವತಾರವನೆತ್ತಿದ ಶಿವನಿಗೆ ಅನಂತ ಹೆಸರುಗಳು. ಶುದ್ಧ ಮನಸ್ಸಿನ ಭಾವದ ಜೊತೆಗೆ ದಾನ ಧರ್ಮದ ಹಾದಿಯಲ್ಲಿ ಪುಣ್ಯ ಕಾರ್ಯಗಳನ್ನು ಮಾಡುತ್ತಾ ಜೀವನವೆಂಬ ಹಾದಿ ಸಾಗಿದರೆ ಪುಣ್ಯದ ಫಲಗಳು ದೊರೆತು ನಮ್ಮ ಮನದಲ್ಲಿ ಶಿವನು ಬಂದು ನಿಲ್ಲುವನು. ಜಗತ್ತನ್ನು ಸೃಷ್ಟಿಸಿದ ಆ ಶಿವನಿಗೆ ನೂರಾರು ಹೆಸರು ಅದರಲ್ಲಿ ಕಾಶಿ ವಿಶ್ವನಾಥನ ರೂಪವು ಒಂದು ಗರ್ಭ ಗುಡಿಯಲ್ಲಿನ ಜ್ಯೋತಿರ್ಲಿಂಗವು ಕಂದು ಬಣ್ಣದಿಂದ ಕೂಡಿದ್ದು ಇದನ್ನು ಬೆಳ್ಳಿಯಿಂದ ವೇದಿಕೆಯಂತೆ ಮಾಡಿ ಅದರಲ್ಲಿ ಇರಿಸಲಾಗಿದೆ. ಇಂದಿನ ಕಾಶಿ ವೈಭವದ ನೋಟ ಮನಸ್ಸಿಗೆ ನೆಮ್ಮದಿ ನೀಡುವ ದೃಶ್ಯ.
ಕರ್ಮಕ್ಕೆ ಕೊನೆ :
ಮಗುವಿರುವದು ಅದು ಬಾಕಿಯನ್ನು ಮಾಡಿರುವದು ಆದರೆ ಇದು ತಂದೆಗೆ ತಿಳಿಯಲಾರದ ಸಂಗತಿಯೇನಲ್ಲ. ಮಗುವಿಗೆ ತನ್ನ ಬಾಕಿ ತೀರಿಸಲು ಆಗುತ್ತಿಲ್ಲ ಅದಕ್ಕೆ ದುಡಿಯುವ ವಿಧಾನವೂ ತಿಳಿಯದು. ಆದರೆ ಈ ಬಾಕಿಯನ್ನು ಹೇಗೆ ತೀರಿಸಲೆಂದು ಗೋಳಾಡುತ್ತಾ ಕುಳಿತರೆ ಲಾಭವಿಲ್ಲ ತಂದೆಯ ಪಾದವನ್ನು ಮಗು ಹಿಡಿಯಲೇ ಬೇಕಾಗಿದೆ. ಅದರಂತೆ ಕರ್ಮವೆಂಬ ಬಾಕಿಯಲ್ಲಿ ಚಿಂತಿಸಿದರೆ ಫಲವಿಲ್ಲ, ಎಷ್ಟು ತಪ್ಪು ಮಾಡಿರುವೆ ಎಂದೂ ತಿಳಿದಿಲ್ಲ ಆ ಕರ್ಮ ಎಂಬ ಬಾಕಿಯಿಂದ ಋಣಮುಕ್ತಾರಾಗಬೇಕಾದರೆ ಶಿವನ ಪಾದ ಹಿಡಿಯಬೇಕು. ತಂದೆಯಾಗಿರುವ ಆ ಕಾಶಿ ವಿಶ್ವನಾಥನ ಸನ್ನಿಧಿಗೆ ತೆರಳಿ ದರ್ಶನ ಪಡೆದರೆ ಕರ್ಮಕ್ಕೆ ಕೊನೆ ಎಂದು ಧರ್ಮ ದೀಪ್ತಿಯ ಬೆಳಕು ಚಲ್ಲಿದ ಎಸ್. ವ್ಹಿ.ಬಿರಾದಾರ ಇವರ ಕಾಶಿಯ ವೈಭವದ ಚಿಂತನೆ ನಿಜಕ್ಕೂ ಶ್ಲಾಘನೀಯ ಅದರಲ್ಲೂ ಸುವರ್ಣ ದೇವಾಲಯದ ಹೊಸದಾದ ಹೆಸರಿನ ವಿಶ್ಲೇಷಣೆ ಆನಂದ ಕಾನನಕ್ಕೆ ಮೆರಗು ನೀಡಿದಂತಾಗಿದೆ.
ಕುರುಡರಿಗೆ ಎಚ್ಚರಿಕೆ "
ಕುರುಡರಿಗೆ ಹಾದಿ ನಡೆಯಲು ಸಾಧ್ಯವಿಲ್ಲ ಕಾರಣ ಹಾದಿಯಲ್ಲಿ ಅನೇಕ ತೊಂದರೆಗಳಿರುತ್ತವೆ. ಆದರೆ ಕೈ ಹಿಡಿದುಕೊಂಡು ಹೋಗುವವರ ಮೇಲೆ ಪೂರ್ಣ ವಿಶ್ವಾಸ ಮಾಡಿದರೆ ಅವರು ಅವನಿಗೆ ಯಾವ ತೊಂದರೆಯಾಗದಂತೆ ಕರೆದುಕೊಂಡು ಹೋಗಿ ಊರನ್ನು ಮುಟ್ಟಿಸುವರು ಇನ್ನೂ ಕೆಲವರು ಕೋಲಿನ ಸಹಾಯದಿಂದ ಹಾದಿ ನಡೆಯಲು ಇಚ್ಚಿಸುತ್ತಾರೆ ಇದರಿಂದಲೂ ಆತಂಕಗಳು ತಪ್ಪಲಾರವು. ಇಲ್ಲಿ ಕುರುಡರೆಂದರೆ ಯಾರು? ಕೈ ಹಿಡಿದು ನಡೆಸುವವರೆಂದರೆ ಯಾರು? ಕೋಲು ಎಂದರೆ ಯಾವುದು? ಧರ್ಮ, ಸತ್ಯವನ್ನೇ ತಿಳಿಯದವರೇ ಕುರುಡರು. ಇಂತವರು ಪುಣ್ಯ ಕಾರ್ಯ ಮಾಡುವದಿಲ್ಲ. ಧರ್ಮದ ಮೇಲೆ ಪೂರ್ಣ ವಿಶ್ವಾಸ ಮಾಡಿದರೆ ಶಿವನು ಕೈಹಿದು ನಡೆಸುತ್ತಾನೆ. ಕೋಲಿನಂತಿರುವ ಮಾನವರನ್ನು ನಂಬಿ ನಡೆಯಬೇಡಿರಿ. ಆ ಶಿವನ ಮೇಲೆ ಪೂರ್ಣ ನಂಬಿಕೆ ಇಟ್ಟು ನಡೆದರೆ ಜೀವನ ಪಾವನಮಯವಾಗುವದು. ಆದ್ದರಿಂದ ಶಿವನ ಸ್ವರೂಪ ಅನಂತ ಆ ಸ್ವರೂಪಗಳಲ್ಲಿಯೇ ಕಾಶಿ ವಿಶ್ವನಾಥ ಸ್ವರೂಪವು ಒಂದಾಗಿದೆ. ಶಿವನ ಲೀಲೆಗಳಿಗೆ ಮಿತಿಯೇ ಇಲ್ಲ.ಶಿವನಿಗೆ ಶರಣಾಗಿ ಧರ್ಮದ ಹಾದಿ ಕಂಡುಕೊಳ್ಳುವದೇ ನಿಜವಾದ ಜೀವನ. ಇಂದಿನ ಕಾಶಿ ವೈಭವ ಜಗತ್ತಿಗೆ ಮಾದರಿಯಾಗಿದೆ ಎಂಬ ಚಿಂತನೆ ಸುವರ್ಣ ದೇವಾಲಯಕ್ಕೆ ಶೋಭೆ.
- ಮಂಜುನಾಥ ಹಿರೇಮಠ
ದಂಡಸೋಲಾಪುರ(ಚಾಮನಾಳ)ಯುವ ಸಾಹಿತಿಗಳು ಮತ್ತು ಶಿಕ್ಷಕರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ