ಶನಿವಾರ, ಡಿಸೆಂಬರ್ 11, 2021

ಮರಳಿ ಬಾ ಭೀಮಾ (ಕವಿತೆ) - ತುಂಬಲ ಸುರೇಶ್.

ಜನಿಸಿದೆ ನೀನು ಜನ ನಾಯಕ
ಜನರ ಏಳ್ಗೆಗಾಗಿ ಇಲ್ಲಿ
'ಮನು'ವಾದವನ್ನು ಮಟ್ಟಹಾಕಿದೆ
ಮಹಾನ್ ಮಾನವತಾವಾದಿಯಾಗಿ

ಅಸ್ಪೃಶ್ಯತೆಯನ್ನು ಅಳಿಸಿದೇ.... ನೀನು
ಅಮರ ಜ್ಯೋತಿಯಾಗಿ
ಹಗಲಿರುಳೆನ್ನದೇ....
ಬೆಳಗುತಿಹೆ  ಮನೆ ಮನೆ ಬೆಳಕಾಗಿ

ಬಡತನದಲ್ಲಿ ಪಡೆದೆನೀನು
ಪದವಿಗಳ ಪಟ್ಟಿಯಾ
ನನ್ನ ಹಾಗೆಯೇ ಬಾಳಿರೆಂದು
ತೋರಿದೆ ನಿ ಹೋದ ದಾರಿಯ
ಶಿಕ್ಷಣ ಸಂಘಟನೆ ಜೊತೆಗೆ
 ಹೋರಾಟದ ಹಾದಿಯ......

ಸಂವಿಧಾನ ಬರೆದು ನೀವು
ಸಮಾನತೆಯ ಸಾರಿದೆ
ಎಲ್ಲರ ಜೊತೆಯಾಗಿ ಬೌದ್ಧಧರ್ಮ ಸೇರಿದೆ
ನಮ್ಮನ್ನೆಲ್ಲಾ ಅಗಲಿ ನೀವು ಹೀಗೆಕೇ.....
ದೂರ.... ಹೋದೆ.....!
ಮರಳಿ ಬಾ ಭೀಮಾ
ಮರಳಿ ಬಾ........
-  ತುಂಬಲ ಸುರೇಶ್, 9620166872.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...