ಬಾಯಿಯಲ್ಲಿ ಬೆಣ್ಣೆ ಕಂಕುಳಲ್ಲಿ ದೊಣ್ಣೆ
ಹಿಡಿದು ನಡೆದವನೆ ನೋಡಿರಾಣ್ಣ ..
ಎದ್ದಾಗ ಒಂದು ಪಕ್ಷ ಮಲಗುವಾಗ ವೊಂದು ಪಕ್ಷ
ಜಿಂಕೆಯಂತೆ ಜಿಗಿತಾನೆ ನೀವೇ ನೋಡಿರಣ್ಣ..//೧//
ನುಡಿಯಲ್ಲಿ ಜೋರು ಗತ್ತು ಗಮ್ಮತ್ತು
ಕಾಯದೊಳಗೆಲ್ಲ ತುಂಬಿದೆ ಜೊಳ್ಳಣ್ಣ ..
ಆದರೇನು ನಿನಗೆ ಸಾಟಿ ಯಾರಣ್ಣ
ಈ ಬುವಿಯ ಜನಕೆ ನೀನೇ ಉದಾತ್ತವಣ್ಣ ..//೨//
ಕಾರುಣ್ಯ ತುಂಬಿದ ನೀತಿಗೆ ಬಹಳ ದೂರ
ಜಾತಿ ಧರ್ಮವ ಬಿಡೋದಿಲ್ಲಣ್ಣ..
ಆದರುನು ನೀನೇ ನಮ್ಮ ರವಿಯಣ್ಣ
ನಮ್ಮನಾಳುವ ಪ್ರಾಮಾಣಿಕ ದೊರೆಯಣ್ಣ..//೩//
ದುಡ್ಡOದ್ರೇ ನಿನ್ನ ಜೀವ ಅಧಿಕಾರ ನಿನ್ನ ಭಾವ
ಅಸತ್ಯನೆ ನಿನ್ನ ದೈವವಣ್ಣ..
ಆದರೇನು,ನೀನೇ ನಮ್ಮನಾಳುವ ಏಳು ಸುತ್ತಿಗೆ*
ಸವಿಗಾರ ಜನನಾಯಕ ಪ್ರೇರಕವಣ್ಣ..//೪//
ಬಡವರ ಕಂಡರೆ ಒಳಒಳಗೆಯಾಗಲ್ಲ
ಹುಸಿ ನಗುವುದ ಬಿಡೋದಿಲ್ಲಣ್ಣ..
ಕುಣಿತ್ಯತೆ ಜೇಬು ತುಂಬ ಪುಡಿಗಾಸು
ಜನಮನದ ಮತವೆಲ್ಲ ನಿನ್ನದೆ ಅದ್ಹೇಗಣ್ಣ..//೫//
ಅಬ್ಬಾ, ಏನು ಮೋಡಿ ಮಾಡದ್ದಣ್ಣ
ಎಷ್ಟು ಗುಡಿ ಮನಗಳ ಕದ್ದಣ್ಣ..
ನಿನ್ನ ಬಿಡಲ್ಲಾಂತರಲ್ಲ ಅದರ ಗುಟ್ಟೇನು
ಅಂತದ್ದು ಏನು ಮಾಡದೇ ಹೇಳಾಣ್ಣ..//೬//
- ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ, ಅಂಚೆ ಜೀವ ವಿಮೆ ಮಂಡ್ಯ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ