ಜಗವೇ ವಿಶ್ರಾಂತಿಯ ಅಡಿಯಲಿ ಸಾಗುತಿದೆ
ಅಡೆತಡೆಯಿರದೆ ನಿನ್ನ ಕಾರ್ಯ ನಡೆಯುತ್ತಿದೆ
ಜೀವಿಯಲ್ಲಿ ತಾ ಬುದ್ದಿವಂತನೆನ್ನುವ ಮನುಜ
ನಿನ್ನ ನಿಲ್ಲಿಸಲಾಗದೆ ತಾ ಸೋತಿಹನು ಸಹಜ.
ಬೇಕೆಂದ ಕ್ಷಣಗಳ ಉಳಿಸಿಕೊಳ್ಳಲು ಆಗದು
ಬೇಡೆಂದ ಕ್ಷಣಗಳ ಅಳಿಸಲು ಸಾಧ್ಯವಾಗದು
ಮುಳ್ಳಿನ ಹಾದಿಯ ಸವಾಲು ನಿನ್ನದಾಗಿಹುದು
ತುಳಿದು ಬೆಳೆಯುವ ಕರ್ಮ ಮನುಜದಾಗಿಹುದು.
ಯಾವ ಸಮಯವು ನಿನಗೆ ಸರಿತಪ್ಪೇನಿಸದು
ಚಲಿಸುವ ಕಾಯಕವಷ್ಟೇ ನಿನಗೆಂದು ಹಿರಿದು
ಮಹತ್ವವ ತಿಳಿಸಲು ಮನೆಯಲಿ ತೇಲಾಡುವೆ
ಕೈಹಿಡಿದು ಸಾಗಿಸಲು ಕರಗಳಲಿ ಮೆರೆದಾಡುವೆ.
ಎಲ್ಲರಿಗೂ ಸರಿಸಮಯ ನೀ ತೋರಬಾರದೆ
ಖುಷಿಯಲಿ ಎಲ್ಲರ ಬಾಳ ನೀ ತೇಲಿಸಬಾರದೇ
ಸಾಧಕರ ಪಾಲಿಗೆ ಕಡಿಮೆಯ ಕಾಲವಾಗಿಹೆ ನೀ
ಸೋಮಾರಿಗಳ ಪಾಲಿಗೆ ದೀರ್ಘವಾಗಿಹೆ ನೀ.
ನಿನ್ನ ತಡೆಯುವ ವಿದ್ಯೆಯದು ತಿಳಿದರೆ ಸಾಕು
ಇಳೆಯಲಿ ಮನುಜನಿಗೆ ಇದಕ್ಕಿಂತ ಏನು ಬೇಕು
ದಿನ ಕಳೆದು ಆಯಸ್ಸು ಕಡಿತಗೊಳಿಸುತ್ತಿರುವೆ
ಬಳಸಿಕೊಳ್ಳಲು ಆವಕಾಶವ ನೀ ನೀಡುತ್ತಿರುವೆ.
ಕಾಲ ಸಮಯ ವಿಧಿ ಘಳಿಗೆ ಎಂದೆಂಬ ನೇಮದಿ
ನೀಡಿರುವೆ ನರನಿಗೆ ಕಂಡುಕೊಳ್ಳಲು ನೆಮ್ಮದಿ.
- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ.
ದೂ.9632296809.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ