ಶನಿವಾರ, ಜನವರಿ 1, 2022

ಎದೆಗೆ ಬಿದ್ದ ಕಾಗದದ ಉಸಿರು (ಸಣ್ಣ ಕತೆ) - ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ.

ಮದುವೆಯಾಗಿ ನಾಲ್ಕೈದು ವರ್ಷವಾದರು ಮಕ್ಕಳಾಗಲಿಲ್ಲ. ಮನೆದೇವರು ಊರದೇವರು ಕುಲದೇವರೆನ್ನದೆ ಹರಕೆಯ ಮಾಡಿದ್ದು ಆಯ್ತು. ಅವರಿವರು ಹೇಳಿದೆ ದೇವರು ದಿಂಡಿರೂ ಮುಗಿತು. ಇನ್ನೂ ಕೆಲವರು ಹೇಳಿದ ಹಾಗೆ. ವೈದ್ಯರಿಗೆ ತೋರಿಸಿದಾಯ್ತು ಲಕ್ಷಾಂತರ ಹಣ ಕಾಲಿಯಾಯ್ತು. ಆದರೆ ಪ್ರಯೋಜನವಾಗಲಿಲ್ಲ. ದೊಡ್ಡ ಆಸ್ಪತ್ರೆಯಲ್ಲಿ ತೋರಿಸಿದಾಗ ಅದೂ ಇದೂ ಪರೀಕ್ಷೆ ಮಾಡಿದ ಬಹಳ ಓದಿದ್ದ ದೊಡ್ಡ ವೈದ್ಯರ ಸೂಚನೆಯಂತೆ. ತನ್ನ  ಹೆಂಡತಿಗೆ ಮಕ್ಕಳಾಗುವುದಿಲ್ಲ ಎಂಬುದು ಖಚಿತವಾಗುತ್ತದೆ. ಇದಕ್ಕೆ ಇಬ್ಬರೂ ನೊಂದುಕೊಳ್ಳುತ್ತಾರೆ. ಗಂಡನ ಆಸೆಗೆ ತಾನು ಅಡ್ಡಿಯಾಗಬಾರದೆಂದು ಕೆಲವು ತಿಂಗಳುಗಳಾದ ಮೇಲೆ ಹೆಂಡತಿಯೆ ಗಂಡನನ್ನು ಇನ್ನೊಂದು ಮದುವೆಗೆ ಒಪ್ಪಿಸುತ್ತಾಳೆ. ಮೊದಲಿಗೆ ಬೇಡವೆಂದರು ಮುದ್ದಯ್ಯ ಹೆಂಡತಿ ಸರಸ್ವತಮ್ಮನ ಒತ್ತಡಕ್ಕೆ ಒಂದು ದಿನ ಒಪ್ಪಿಕೊಳ್ಳುತ್ತಾನೆ. ಸರಸ್ವತಮ್ಮ ತನ್ನಣ್ಣ ರಾಮಣ್ಣನನ್ನು ಕರೆಸಿ ಬಹಳವಾಗಿ ಪ್ರಯತ್ನಿಸಿ ಅಲ್ಲಿಲ್ಲಿ ಹುಡುಕಾಡಿಸಿ ಕೊನೆಗೆ ಒಂದು ಸುಂದರವಾದ ಹುಡುಗಿಯನ್ನು ನೋಡಿ. ತಾನೂ ಆ ಕುಟುಂಬದಲ್ಲಿ ತನ್ನಿಂದ ಯಾವುದೇ ತೊಂದರೆ ಬರಲಾಗದೆಂದು ಕರಾರುಮಾಡಿಕೊಂಡು  ಭರವಸೆಯ ಕೊಟ್ಟು. ಗಂಡನ ಇನ್ನೊಂದು ಮದುವೆಗೆ ಸಿದ್ದಮಾಡಿ. ತಾನೇ ನಿಂತು ಮದುವೆ ಮಾಡಿಸಿ, ಸವತಿಯನ್ನು ಮನೆ ತುಂಬಿಸಿಕೊಳ್ಳುತ್ತಾಳೆ. ಮದುವೆಯ ಹೊಸದಲ್ಲಿ ಎಲ್ಲವೂ ಸರಿಯಾಗಿಯೇ ಇರುತ್ತದೆ.  ಆದರೆ ’ಎರಡು ಜಡೆ ಒಂದೇಕಡೆ ಸೇರಿದರೆ ಸಾಮಾನ್ಯವೆ?’ ಹೌದು ಚಟಾಪಟಿಯಲ್ಲಿ ಮನೆಯ ರುದ್ರ ನರ್ತನ ನೆಡೀತಲೇ ಇರುತ್ತದೆ. ಚಿಕ್ಕ ಹೆಂಡತಿ ನಾಗಕ್ಕನಿಗೆ ದೊಡ್ಡ ಹೆಂಡತಿಯ ಮೇಲೆ ತನ್ನ ಗಂಡನಿಗಿರುವ ಅತಿಯಾದ ಪ್ರೀತಿಯನ್ನು ಸಹಿಸಿಕೊಳ್ಳಲು ಆಗುವುದೇ ಇಲ್ಲಾ. ಪ್ರತಿಯೊಂದನ್ನೂ ಗಂಡನಾದವನು ದೊಡ್ಡವಳಲ್ಲಿಯೇ ಚರ್ಚಿಸಿ ತೀರ್ಮಾನಿಸುವುದು ತಾನು ಸಹಿಸಿಕೊಳ್ಳಲಾಗುವುದಿಲ್ಲ. ದಿನೇ ದಿನೆ ಸರಸ್ವತಮ್ಮನ ಮೇಲೆ ದ್ವೇಷಮಾಡಲು ಕಾರಣವಾಗುತ್ತದೆ.  ಈ ಮದ್ಯ ನಾಗಕ್ಕನಿಗೂ ಮುದ್ದಯ್ಯನಿಗೂ ಒಂದು ಗಂಡು ಮಗು ಹುಟ್ಟಿ ಮನೆಯಲ್ಲಿ ಸಂತಸ ಮನೆ ಮಾಡಿ ಸಡಗರವೆ ಮನೆಯ ತುಂಬುವೆ ತುಂಬಿಕೊಳ್ಳುತ್ತದೆ. ಮಕ್ಕಳಾಗದ ಬಂಜೆ ಸರಸ್ವತಿಗೆ ಸವತಿ ನಾಗಕ್ಕ ಮಗುವನ್ನು ಮುಟ್ಟದಾಗಿ ಕಾಪಿಡುತ್ತಾಳೆ. ಪಾಪ ಸರಸ್ವತಿಯ ಪಾಡು ಯಾರೂ ನೋಡದಾಗಿ, ಗಂಡ ಮುದ್ದಯ್ಯ ದಿನವೂ ಅವಳ ಕಣ್ಣೀರು ಒರೆಸಿ ಸಮಾಧಾನ ಮಾಡಿದರು ಸಾಕಾಗುವುದಿಲ್ಲ. 
     ಮಗುವೆ ಬೆಳೆಯುತ್ತಾ ಬೆಳೆಯುತ್ತಾ ದೊಡ್ಡಮ್ಮನಲ್ಲಿ ಬೆರೆಯುತ್ತದೆ. ನಾಗಕ್ಕ ಎಷ್ಟೇ ತಡೆದರು ಮಗು ಸುಬ್ಬರಾಯ ದೊಡ್ಡಮ್ಮನನ್ನು ಹಚ್ಚಿಕೊಂಡುಬಿಡುತ್ತಾನೆ. ನಾಗಕ್ಕ ತವರಿನ ಮಾತುಕೇಳಿ ’ ಬಂಜೆ ನನ್ನ ಸವತಿಗೆ ಮಾನ ಮರ್ಯಾದೆನೇ ಇಲ್ಲಾ ಎಷ್ಟು ಹೇಳಿದರೂ ನನ್ನ ಮಗುವನ್ನು ಮುಟ್ಟುತ್ತಾಳೆ. ವಾರಕ್ಕೆ ಎರಡು ಸಲಾ ಮಗುಗೆ ಕಿಸಿರಾಗಿ ಸಂಜೆಯಾಗುತ್ತಲೆ ಊರ ಮುಂದಿನ ಗುಡಿಗಳ ಸ್ವಾಮಿತಾವು ಮಂತ್ರ ಹಾಕಿಸಿ ನನಗೂ ಸಾಕಾಗಿ ಹೋಗಿದೆ. ಈ ಬಂಜೆಗಳು ನನ್ನಂತವರ ಒಡಲಿಗೆ ಈ ಕರ್ಮ ತಂದೊಡ್ಡುವುದಕಿಂತ್ತ ಸಾಯಬಾರ್ದೇ. ಎಂದು ಪಕ್ಕದ ಮನೆಯ ಹೆಂಗಸೊಂದಿಗೆ ಜೋರು ಮಾಡಿ ದೊಡ್ಡ ಗಂಟಲಲ್ಲಿ ಬೈದುಕೊಂಡಿದ್ದು ಕೇಳಿ ಇಡೀ ದಿನವೂ ಕೋಣೆ ಬಿಟ್ಟು ಬರದೆ. ಊಟವನ್ನೂ ಮಾಡದೆ ಕಣ್ಣೀರಲ್ಲಿ ಮುಳಿಗಿಹೋದ ಸರಸ್ವತಮ್ಮ ಕತ್ತಲ ಕೋಣೆಯಲ್ಲಿ ತಾನೇನೂ ಮಾಡದ ಕಾರಣಕ್ಕೆ ದುಃಖಿಸುದ ಕಂಡ ಮುದ್ದಯ್ಯ ಏನೂ ಮಾಡಲಾಗದೆ ಮನೆಯ ತಾಪತ್ರಯ ಬಿಡಿಸಿ ಕೊಳ್ಳಲಾಗದೆ. ಮಂದಿ ಕುಡುಕ ಗೆಳರ ಜೊತೆಯಾಗಿ ದಿನವೂ ಸಂಜೆಗೆ ಹೋಗಿ ತಡರಾತ್ರಿಯವರೆಗೂ ಕುಡಿದು ಮನೆಗೆ ಬಂದು ಸುಮ್ಮನೆ ಕೋಣೆಯಲ್ಲಿ ಬಿದ್ದುಕೊಂಡು. ಬೆಳಿಗ್ಗೆನೆ ಕೆಲಸಕ್ಕೆ ಹೋಗುವುದು ಸಂಜೆಯಾದ್ರ ಯಥಾ ಪ್ರಕಾರ ಮಾಡುವುದು ನಡೆಯುತ್ತದೆ. 
       ಸರಸ್ವತಮ್ಮನ ಅಣ್ಣ ರಾಮಣ್ಣನಿಗೆ ಈ ವಿಷಯ ತಿಳಿದು ಮನೆಗೆ ಬಂದು ಭಾವನ ಪರಿಸ್ಥಿತಿಯನ್ನು ವಿಚಾರಿಸಿ. ನಾಗಕ್ಕನ ತವರಿನಿಂದ ಅಪ್ಪ ಅಮ್ಮನನ್ನು ಕರೆಸಿ ಪಂಚಾಯಿತಿ ಮಾಡಿದರು ಇತ್ಯರ್ಥವಾಗದೆ ಹಾಗೆ ಇನ್ನೂ ಈ ರಂಪಾಟ ಮಾಡಿ ನಮ್ಮ ತವರಿನವರಿಗೆ ಅವಮಾನ ಮಾಡಿದಳಲ್ಲವೆಂದು ದೊಡ್ಡದಾಗೆ ಗಲಾಟೆ ಮಾಡಿ ಸರಸ್ವತಮ್ಮನೊಂದಿ ಜಗಳ ಮಾಡುತ್ತಾಳೆ. ಸುಬ್ಬರಾಯ ಸಣ್ಣ ಕೂಸು ಇವೆಲ್ಲವು ನೋಡಿ ಬೇಸರವಾಗಿ ಶಾಲೆಯಲ್ಲಿ ಒಂಟಿಯಾಗಿಯೇ ಇದ್ದು ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ. 
       ಓದಿನಲ್ಲಿ ಆಸಕ್ತಿ ಇಲ್ಲದೆ ಕಂಗಾಲಾಗಿ ಸಹ ಮಕ್ಕಳೊಂದಿಗೆ ಸೇರದೆ ಅದೇನನ್ನೋ ಯೋಚಿಸುತ್ತಾ ದಿನೇ ದಿನೆ ಸೊರಗುವುದನ್ನು ಕಂಡು ಸರಸ್ವತಮ್ಮ. ನಾಗಕ್ಕನ ನೆಡವಳಿಕೆಯನ್ನು ಕಟುವಾಗಿ ಟೀಕಿಸಿ. ಮಗುವನ್ನು ನೋಡು ನಮ್ಮಿಬ್ಬ ಅಹವಾಲು ಮಗುವಿನ ಭವಿಷ್ಯ ನಾಶವಾಗುತ್ತದೆ ಎಂದೇಳಿ. ತಾನು ಮನೆಬಿಟ್ಟು ತವರಿಗೆ ಸೇರುವುದಾಗಿ ಹೇಳಿ ಗಂಡನಿಲ್ಲದ ಹೊತ್ತಲ್ಲಿ ತನ್ನ ತವರಿಗೆ ಸೇರುತ್ತಾಳೆ. ರಾತ್ರಿಮಾಡಿಕೊಂಡು ಕುಡಿದು ಬಂದ  ಮುದ್ದಯ್ಯ ತನ್ನ ತ್ಯಾಗಮಹಿ ಹೆಂಡತಿ ಕಾಣದೆ ಕಂಗಾಲಾಗಿ ನಾಗಕ್ಕನನ್ನು ಕೇಳುತ್ತಾನೆ. ನಡೆದುದೆಲ್ಲವನ್ನು ಬಿಡಿಸಿ ಹೇಳಿದ ನಾಗಕ್ಕನಿಗೆ ಬೈದು ಸುಮ್ಮನಾಗುತ್ತಾನೆ. 
      ಇತ್ತಾ.. ದಿನಾಕಳಿಯುತ್ತಲು ನಾಗಕ್ಕನಿಗೆ ಸಂತಸವೇ ಆದರು ಸುಬ್ಬರಾಯನ ಆರೋಗ್ಯ ತುಂಬವೇ ಕೆಟ್ಚು ಹಾಸಿಗೆ ಇಡಿಯುತ್ತಾನೆ. ಮುದ್ದಯ್ಯನ ಆರೋಗ್ಯವೂ ಕೆಡುತ್ತದೆ. ನಾಗಕ್ಕನಿಗೆ ಇದರ ಅರಿವಾಗಿ ಮಗು ಮತ್ತು ಗಂಡನಿಗೋಸ್ಕರವಾದರು ಆ ಪೀಡೆಯನ್ನು ಮನೆ ತುಂಬಿಸಿ ಕೊಳ್ಳಬೇಕೆಂದು ನಿರ್ಧಾರಮಾಡಿ. ತಾನೇ ಖುದ್ದಾಗಿ ಮಳ್ಳಿಯಂತೆ ಸರಸ್ವತಮ್ಮನನ್ನು ಒಪ್ಪಿಸಿ ಮನೆಗೆ ಕರೆದು ತರುತ್ತಾಳೆ. ದೊಡ್ಡಮ್ಮನನ್ನು ನೋಡಿ ಮಗು ಚೇತರಿಸಿಕೊಳ್ಳುತ್ತದೆ‌. ಮುದ್ದಯ್ಯನೂ ಆರೋಗ್ಯದಲ್ಲಿ ಸುದಾರಿಸಿಕೊಂಡು ನಾಟಕೀಯವಾಗಿಯೆ ಎಲ್ಲವೂ ಸರೋಗುತ್ತದೆ. ಅತ್ತಾ… ಸುಬ್ಬರಾಯ ಚನ್ನಾಗಿಯೇ ಓದುತ್ತಾನೆ. ದೊಡ್ಡಮ್ಮನ ಮೇಲೆ ಅತಿಯಾದ ಕಾಳಜಿ ಅವನಿಗೆ. ಅದು ತನ್ನಮ್ಮನಿಗೆ ಸಹಿಸಲು ಕಷ್ಟವೇ ಆದರು ಬೂದಿ ಮುಚ್ಚಿದ ಕೆಂಡವಾಗಿ ಮೌನದಿಂದಲೆ ಸುಮ್ಮನೇ ಇರುತ್ತಾಳೆ. ಸುಮಾರು ಹತ್ತನ್ನೆರಡು ವರ್ಷ ಸಾಗುತ್ತದೆ.
       ದೊಡ್ಡವನಾದ ಸುಬ್ಬರಾಯ ಇಂಜಿನಿಯರ್ ಮುಗಿಸಿ ದೊಡ್ಡ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಚನ್ನಾಗಿಯೇ ದುಡಿಯುವವನಾಗುತ್ತಾನೆ. ವಯಸ್ಸಿಗೆ ಬಂದ ಮಗನಿಗೆ ಮುದ್ದಯ್ಯ ಮದುವೆ ಮಾಡಲು ನಿರ್ಧರಿಸಿ. ಒಳ್ಳೆಯ ಸಂಬಂಧ ನೋಡಿ ಮದುವೆಯೇನೋ ಮಾಡಿ. ಸೊಸೆಯನ್ನು ಮನೆಗೆ ತುಂಬಿಸಿಕೊಳ್ಳುತ್ತಾರೆ. ಸೊಸೆಯೂ ಒಳ್ಳೆಯ ಮನೆತನದವಳಾಗಿದ್ದರಿಂದ ಮಾವ ಮುದ್ದಯ್ಯ ಸೊಸೆಗೆ ಮುಜುಗರವಾಗಬಾರದೆಂದು ತಾನು ಕುಡಿಯುವುದನ್ನೇ ಬಿಟ್ಟು. ಮಾನಸ್ಥನಾಗಿ ಇರುವುದು ಸೊಸೆಗೆ ತನ್ನ ಮಾವ ಅಪ್ಪನಂತೆ ಕಂಡು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. 
        ಮುದ್ದಯ್ಯ ಸಾಮಾನ್ಯ ಕಷ್ಟಪಟ್ಟು ಮಗನನ್ನು ಓದಿಸಿ ಬೆಳೆಸಿಲ್ಲ. ದಿನವೂ ತನ್ನ ಛಾಕರಿಯಲ್ಲಿ ರಕ್ತವನ್ನೇ ತೇದಿದ್ದಾನೆ. ಅವನೇನು ಸಾವ್ಕಾರನಲ್ಲ ಇಬ್ಬರು ಹೆಂಡಿರನ್ನು ಕಟ್ಟಿಕೊಂಡು ಮನೆಯನ್ನು ನಿಭಾಯಿಸಲು ಸಾಮಾನ್ಯವಲ್ಲ. ಅವನದು ಕಬ್ಬಿಣದ ಕೆಲಸ ಅಲ್ಲಿಲ್ಲಿ ಟ್ರಾಕ್ಟರ್ ಬಾಡಿ ತಯಾರಿಸುವ ಪ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದವನೆ. ಮದುವೆ ಆದಮೇಲೆ ಮಗ ಸುಬ್ಬರಾಯ ಹುಟ್ಟಿದಾಗ. ಈ ಇಬ್ಬರೂ ಹೆಂಡಿರ ಮಧ್ಯೆ ಸ್ವಂತದ್ದು ಒಂದು ಅಂಗಡಿ ಕಟ್ಟಲು ಪಟ್ಟಪಾಡು ಅವನಿಗೆ ಗೊತ್ತು. ಮಗನು ಓದುವಾಗಲೆ ಬಿಡುವಾಗಿದ್ದಾಗಲೆಲ್ಲ ಅಂಗಡಿಗೆ ಬರುತ್ತಿದ್ದ. ಸಣ್ಣವನಿದ್ದಾಗಿನಿಂದ ಮಗನನ್ನು ಕರೆದುಕೊಂಡೋಗಿ ತಾನು ಮಾಡುವ ಕೆಲಸದ ವೈಕರಿ ತೋರಿಸುತ್ತಿದ್ದ. ಆಗಲೇ ಸುಬ್ಬರಾಯನಿಗೆ ಅಪ್ಪನ ಬೆವರಿನ ಬೆಲೆಯು ತಿಳಿದಿತ್ತು. ನಾಲ್ಕೈದು ಮಂದಿ ಮಾಡುವ ಕೆಲಸವನ್ನು ತಾನೊಬ್ಬನೇ ರಾತ್ರಿ ಹಗಲೆನ್ನದೆ, ಊಟ ನೀರು ಬಿಟ್ಟು ಮಾಡಿ ಮುಗಿಸುತ್ತಿದ್ದ. 
         ಸುತ್ತಲು ರೈತರಿಗೆ ಮುದ್ದಯ್ಯನೆಂದರೆ ನಂಬಿಕೆ ಇವನ ಕೆಲಸಕ್ಕೆ ಮೆಚ್ಚಿ ಜನರು ಕಾಯಂ ತಮ್ಮ ಟ್ರಾಕ್ಟರ್ ಪ್ಯಾಬ್ರಿಕೇಷನ್ ಕೆಲಸವನ್ನು ಇವನಿಗೆ ಕೊಡುತ್ತಿದ್ದರು. ಇವನಲ್ಲೂ ಕೂಡ ಮಗನನ್ನು ಓದಿಸಿ ದೊಡ್ಡವನನ್ನಾಗಿ ಮಾಡಬೇಕೆಂಬ ಹಂಬಲ ಅಚಲವಾಗಿತ್ತು. ಇದರ ಎಲ್ಲಾ ಅರಿವು ಸರಸ್ವತಮ್ಮನಿಗೆ ಮಾತ್ರ ತಿಳಿದಿತ್ತು. ತನ್ನದೇ ನಡೆಯಬೇಕೆಂದು ಹಟಮಾರಿಯಾಗಿ ಉಳಿದಿದ್ದ ನಾಗಕ್ಕನಿಗೆ ಅಷ್ಟೇನೂ ತಿಳಿದಿರಲಿಲ್ಲ. ಸಣ್ಣಮಗುವಾಗಿದ್ದ ಸುಬ್ಬರಾಯನಿಗೆ ತನ್ನ ದೊಡ್ಡಮ್ಮನ ತ್ಯಾಗವನ್ನು ಪರಿಚಯಿಸಿದ್ದ ಮುದ್ದಯ್ಯನ ಸಲುವಾಗಿಯೇ ಸುಬ್ಬರಾಯನಿಗೆ ದೊಡ್ಡಮ್ಮನ ಮೇಲೆ ವಿಶೇಷ ಪ್ರೀತಿ ಬೆಳೆದಿತ್ತು. 
 "ಹಡೆವುದಷ್ಟೆ ತಾಯ್ತನಕ್ಕೆ ಗೌರವತರುವುದಿಲ್ಲ. ಪೊರೆವುದರ ಜೊತೆಗೆ ಮಕ್ಕಳ ಭವಿಷ್ಯದ ಕನಸ್ಸು  ತನ್ನ ಕುಟುಂಬದ ಉಳಿವು ತಾಯ್ತನವಾಗುತ್ತದೆ" ಎಂಬುದಕ್ಕೆ ಜೋತಕವಾಗಿ ಸರಸ್ವತಮ್ಮ ತನ್ನ ಗಂಡನನ್ನು ಸುಬ್ಬರಾಯನನ್ನು ಕಾಪಿಟ್ಟುಕೊಂಡಿದ್ದಳು. 
       ಸುಬ್ಬರಾಯನಿಗೆ ಒಂದು ಹೆಣ್ಣು ಮಗು ಹುಟ್ಟಿತು. ಮುದ್ದಯ್ಯನೆಂದರೆ ಮೊಮ್ಮಗಳಿಗೆ ಪ್ರಾಣ. ಸಧಾ ತಾತನ ಬಳಿಯೆ ಕಾಲ ಕಳಿಯುತ್ತಿದ್ದಳು. ಅವಳೂ ತಾತನೊಂದಿಗೆ ಅಂಗಡಿಗೂ ಬಂದು ಅದೂ ಅದು ಕಿತ್ತು ರಾದಾಂತ ಮಾಡುತ್ತಿದ್ದಳು. ಸುಬ್ಬರಾಯ ಕೂಡ ಮಗಳಿಗೆ ತಾತನನ್ನು ಹೀರೋ ಮಾಡಿ ಕತೆ ಹೇಳುತ್ತಿದ್ದ. ಸರಸ್ವತಮ್ಮ ಮುದ್ದಯ್ಯನ ಜೊತೆ ಮಗುವು ಹೆಚ್ಚು ಸಮಯ ಕಳೆಯುತಿದ್ದಳು. ಆದರೆ ನಾಗಕ್ಕ ತನ್ನೊಳಗೆ ಉಳಿಯಿಂಡಿಕೊಂಡು ಶೀತಲವಾಗಿಯೇ ದ್ವೇಷಿಸುತ್ತಿದ್ದಳು. ಸೊಸೆಯಮೇಲು ಹಾಗಾಗ್ಗೆ ಗಲಾಟೆ ತೆಗೆದು ಮುನಿಸಿಕೊಳ್ಳುತ್ತಿದ್ದಳು. 
       ಸರಸ್ವತಮ್ಮ ಸಾತ್ವಿಕವಾದ ಮನಸ್ಸಿನವಳು ತನ್ನ ಒಂದಷ್ಟು ಆಸ್ತಿಯನ್ನು ಮಗ ಸುಬ್ಬರಾಯ ಹೆಸರಿಗೆ ಬರೆದು. ಒಂದಷ್ಟು ಮೊಮ್ಮಗಳ ಹೆಸರಲ್ಲಿ ಹಣವನ್ನು ಕೂಡಿಟ್ಟಿದ್ದಳು. ತನಗೆ ಯಾರೂ ಇಲ್ಲದಾಗಿ ತನ್ನನ್ನು ಇವರೆ ನೋಡಿಕೊಳ್ಳುವುದಾಗಿ ನಂಬಿಕೆ ಇದ್ದವಳು. ಸುಬ್ಬರಾಯನು ಹಾಗೆ ದೊಡ್ಡಮ್ಮನನ್ನು ಪ್ರೀತಿಯಿಂದಲೇ ನೋಡುತಿದ್ದ. ಈ ಸರಸ್ವತಮ್ಮ ಊರಿನ ಅನಾರೋಗ್ಯ ಪೀಡಿತ ವಯಸ್ಸಾದವರನ್ನು ಸೇರಿಸಿ ಸತ್ಸಂಘ ಪರಿವಾರ ಮಾಡಿಕೊಂಡು‌. ಯೋಗ ದ್ಯಾನ ಪ್ರವಚನ ಆರಾಧನಾ ಇತ್ಯಾದಿ ಮಾಡಿಕೊಂಡು. ಜನಸೇವೆಯನ್ನೂ ಮಾಡುತ್ತಿದ್ದಳು. ಗಂಡನೂ ಕೂಡ ಸಹಮತ ನೀಡಿ ಆಗೊಮ್ಮೆ ಈಗೊಮ್ಮೆ ತಾನೂ ಈ ಸತ್ಸಂಘಕ್ಕೆ ಹೋಗುತ್ತಿದ್ದ. ಒಮ್ಮೊಮ್ಮೆ ದೂರದ ಆಶ್ರಮಗಳಿಗೆ ಕ್ಯಾಂಪ್ ಗಳನ್ನು ಮಾಡಿ ದೇವರ ಕಾರ್ಯದಲ್ಲಿ ಧಾರ್ಮಿಕ ಸೇವೆಯನ್ನೂ ಮಾಡುತ್ತಿದ್ದಳು. ನಾಗಕ್ಕನಿಗೆ ಇವ್ಯಾವು ಇಡಿಸದು ಮೂಡಿ ಮುಂಗೋಪಿ. ದ್ವೇಷ ಅಸೂಯೆಗಳ ಗೂಡಾಗಿದ್ದಳು. ಆದರೆ ಅವಳ ಸ್ವಭಾವ ತಿಳಿದಿದ್ದ ಯಾರುವೇ ಅವಳನ್ನು ನಿಷ್ಟುರವಾಗಿ ಕಾಣುತ್ತಿರಲಿಲ್ಲ.
        ಒಮ್ಮೆ ಏಕಾಂತವಾಗಿ ಕುಳಿತು ಏನನ್ನೋ ಯೋಚಿಸುತ್ತಿದ್ದ ಸರಸ್ವತಮ್ಮನನ್ನು ನಾಗಕ್ಕ ದೊಡ್ಡ ಗಂಟಲಲ್ಲಿ ಬೈದಿಯೇ ಬೈದಳು. ತಾನು ವಿಷ ಕುಡಿದು ಸಾಯುವೆ ಎಂದು ದುಂಬಾಲು ಬಿದ್ದು ತನ್ನೊಡಲ ನೋವನ್ನು. ತಾನು ಸಹಿಸದ ಸರಸ್ವತಮ್ಮನ ನೆಂಬದಿಯನ್ನು ಹೊರಗಡೆ ಅತ್ಯಂತ ದ್ವೇಷಿಸುವ ಧ್ವನಿಯಲ್ಲಿ ಬಿಚ್ಚಿಟ್ಟಳು. ಇವೆಲ್ಲವೂ ಬೇಡವಾದ ಸ್ಥಿಯಲ್ಲಿ ತನ್ನ ಸಾಂಸಾರಿಕ ಬಂದನ ಮುಕ್ತವಾಗುವ ಹೊತ್ತು ನನಗೆ ಭಗವಂತನೆ ಸುದಾರಿ ಮಾಡಿ ಕಳಿಸಿರ ಬಹುದೆಂದು. ನಿಶ್ಚಯಿಸಿದವಳೆ ಜೋಳಿಗೆ ಒಂದನ್ನು ಏರಿಸಿಕೊಂಡು. ತನ್ನ ಕೆಲವು ಮುಕ್ತಿ ಮಾರ್ಗದ ಗ್ರಂಥಗಳನ್ನು ಹಿಡಿದು. ನಾಗಕ್ಕನಿಗೆ ಕ್ಷಮೆಯಾಚಿಸಿ. ಮಗ ಸುಬ್ಬರಾಯ, ತನ್ನ ಗಂಡ ಬರುವುದರೊಳಗೆ ಮನೆಬಿಟ್ಟು ಹೊರಟೇ ಬಿಟ್ಟಳು. 
       ನಾಗಕ್ಕನ ಎಡವಟ್ಟಿಗೆ ಮನೆಬಿಟ್ಟ ಸರಸ್ವತಮ್ಮನನ್ನು ಗಂಡ, ಮಗಾ ಹುಡುಕಾಡಿ ಹುಡುಕಾಡಿ ಸುಸ್ತಾದರು. ಗಂಡ ತನ್ನ ಪ್ರೀತಿಯ ಹೆಂಡತಿ ಎಂದೂ ನನ್ನ ಬಾಳಿಗೆ ಬೆಳಕಾಗಿ ಬೆನ್ನಿಂದೆ ನಿಂತು ಕಾದವಳು. ತನ್ನ ಯಾವ ಬಯಕೆಯನ್ನೂ ಹೇಳಿಕೊಳ್ಳದೆ, ತನ್ನೆಲ್ಲಾ ಕಷ್ಟಗಳನ್ನು ತಾನೆ ಉಂಡವಳು. ತನ್ನನ್ನು ಬಿಟ್ಟು ಹೇಳದೆಯೇ ಎಲ್ಲಿಗೆ ಹೋದಳೆಂದು ಮಾನಸಿಕವಾಗಿ ಅವಳ ನೆನಪ್ಪಲ್ಲೆ ಊಟ ಬಿಟ್ಟು ನಿತ್ರಾಣನಾದ ಮುದ್ದಯ್ಯನಿಗೆ. ಐದಾರು ದಿನಕ್ಕೆ ಒಂದು ಟಪಾಲು ಬಂತು. "ಪೂಜ್ಯ ಪತಿ ದೇವರಿಗೆ ನನ್ನ ಮೇಲೆ ಕ್ಷಮೆ ಇರಲಿ ನಾನು ನಿಮ್ಮ ಅರ್ಧಾಂಗಿಯಾಗಿ ಯಾವ ಸುಖವನ್ನು ಪೂರ್ಣವಾಗಿ ನಿಭಾಯಿಸಲು ಸಾಧ್ಯವಾಗಲಿಲ್ಲ. ಆ ದೇವರ ನಿರ್ಧಾರವೇ ಹಾಗಿದೆ ಎಂದು ಭಾವಿಸಿದ್ದೇನೆ. ನನಗೆ ಭಗವಂತನ ಹಾದಿ ಮಾತ್ರವೇ ಮುಖ್ಯವಾಗಿ ಗೋಚರಿಸಿದೆ. ಹಾಗಾಗಿ ನನಗೆ ಈ ಅರಿವನ್ನು ಮೂಡಿಸಿದ ಮಗಳ ಸಮಾನಳಾದ ತಂಗಿ ನಾಗಕ್ಕನಿಗೂ ಧನ್ಯವಾದಗಳನ್ನು ತಿಳಿಸಿ. ಮಗ ಸೊಸೆ ಮೊಮ್ಮಗಳಿಗೂ ಕ್ಷಮೆ ಕೋರುವೆ. ಸುಬ್ಬರಾಯನಿಗೆ ನನ್ನ ವಯಕ್ತಿಕ ಆಸ್ತಿ ಬರೆದಿಟ್ಟಿರುವೆ ಹಾಗೂ ನಾನು ಕೂಡಿಟ್ಟ ಒಂದಷ್ಟು ಹಣವನ್ನು ಮೊಮ್ಮಗಳಿಗೆ ಬರೆದಿರುವೆ. ನನ್ನೆಲ್ಲಾ ತಪ್ಪುಗಳನ್ನು ಮನ್ನಿಸಿ ತಾವುಗಳು ಸುಖವಾಗಿರ ಬೇಕೆಂದು ಬಯಸುವ. ನಿಮ್ಮ ಸರಸ್ವತಿ ಭಗವಂತನ ಮಾರ್ಗಿ ಧನ್ಯವಾದಗಳು." ಮುದ್ದಯ್ಯ ಟಪಾಲು ಓದುತ್ತಾ ಕಣ್ಣೀರಧಾರೆಯಲ್ಲಿ ಮುಳುಗುತ್ತಾನೆ. ಮನೆಯಲ್ಲಿ ಬೆಳಕು ಮಾಯವಾಗಿ ಕತ್ತಲು ಆವರಿಸುತ್ತದೆ. ನಾಗಕ್ಕನ ಅಹಂಕಾರ ಕಣ್ಣೀರಾಗಿ ಮುದ್ದಯ್ಯ ಪಾದಗಳನ್ನು ತೋಯುತ್ತದೆ. ಸುಬ್ಬರಾಯ ಸೊಸೆ ಮೊಮ್ಮಗಳು… ಕಣ್ಣೀರಲ್ಲಿ ನೆನೆಯುತ್ತದೆ. 

ಬೆಳಿಗ್ಗೆನೆ ಮೊಮ್ಮಗಳು ಎಚ್ಚರಾದವಳೆ ತಾತನ ಕೋಣೆಯಲ್ಲಿ. ತಾತನ ಮೇಲೆ ಬಿದ್ದು ಚಿಟಾರನೆ  ಕಿರುಚಿದಾಗ ಎಲ್ಲರೂ ಓಡಿಬರುತ್ತಾರೆ..!?
    ಸರಸ್ವತಮ್ಮನ ಕೊನೆಯ ಉಸಿರಾದ ಆ ಕಾಗದವನ್ನು ಎದೆಯ ಮೇಲೆಯೇ ಇಟ್ಟುಕೊಂಡು ಮಲಗಿದ್ದಾನೆ! 
    ಮೊಮ್ಮಗಳ ಗೋಳು ಮುಗಿಲು ಮುಟ್ಟುತ್ತದೆ. ಮುದ್ದಯ್ಯ ಮಾತ್ರ ಏನೂ ಕೇಳಿಸದೆ! ತನ್ನುಸಿರನು ಸರಸ್ವತಮ್ಮನಲ್ಲಿಗೆ ಕಳಿಸಿ ಮಲಗಿದ್ದಾನೆ……!

- ಲಕ್ಷ್ಮೀನಾರಾಯಣ  ಕೆ ವಾಣಿಗರಹಳ್ಳಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...