ಮೋಹನದಾಸ ಕರಮಚಂದ ಗಾಂಧಿ
ಪೋರಬಂದರಿನ ಪುತಳಿಬಾಯಿಯ ಉದರದಿಂದ ಜನಿಸಿ ಈ ಜಗಕೆ ಬಂದಿ
ಅಮ್ಮ ಮಾಡ್ವ ವ್ಳತ,ನೇಮ, ನಿಷ್ಠೆ
ಎರಕ ಹೊಯ್ದವು ನಿಮ್ಮಲ್ಲಿ
ಬಿಡದೆ ದುಡಿವ ಕಾಯಕ ನಿಷ್ಠೆ
ಕಥೆ,ನಾಟಕಗಳು ಬೀರಿದಂಥ ಸತ್ ಪ್ರಭಾವ
ಹರಿಶ್ಚಂದ್ರ ನಾಟಕ ತಿಳಿಸಿತು ನಿಮಗೆ
ಸತ್ಯವೇ ಶಕ್ತಿ ಎಂಬ ಭಾವ
ಮಾತಾ ಪಿತರ ದೀನರ ಸೇವೆಯೇ ಈಶ ಸೇವೆ ಎಂದರಿತೆ
ಓದಿ ಶ್ರವಣಕುಮಾರ ಚರಿತೆಯ
ಸತ್ಯ ಶಾಂತಿ ಅಹಿಂಸಾ ಮಾರ್ಗದಾಯ್ಕೆಗೆ ಅವೇ ನೀಡಿದವು ಪ್ರೇರಣೆಯ
ಮೂರು "ಮ"ಗಳಿಂದ ದೂರವಿರು (ಮದಿರೆ,ಮಾನಿನಿ,ಮಾಂಸ)
ಎಂದ ಮಾತೆಗೆ
ನೀಡಿದೆ ಭರವಸೆಯ
ನಿಯಮದಂತೆ ನಡೆದು ಪಡೆದೆ ವಿದೇಶದಿಂದ ಬ್ಯಾರಿಸ್ಟರ್ ಪದವಿಯ
ವಿದೇಶದ ಓದಿನಿಂದ ಬರಲಿಲ್ಲ ನಿಮಗೆ ದಪ೯,ಅಹಂಕಾರ
ದೇಶ ಸುತ್ತುವರೆದ ದಾಸ್ಯ,ಬಡತನ ಕಣ್ಣುತೆರೆಸಿ ಆದೆ ನೀನು ಸ್ವಾತಂತ್ರ್ಯ ಹೋರಾಟಗಾರ
ಸತ್ಯ ಶಾಂತಿ ಅಹಿಂಸೆ ಉಪವಾಸ ಸತ್ಯಾಗ್ರಹ,ಆಂದೋಳನ ಗಳೇ ನಿಮ್ಮ ಅಸ್ತ್ರ
ನಡೆ ನುಡಿಯ ಸರಳತೆ
ನಿ:ಸ್ವಾರ್ಥ ಚರಿತ್ರೆ ಮಾಡಿದವು ಜನರ ಪಾಲಿಸುವಂತೆ ನಿಮ್ಮ ಸೂತ್ರ
ಕೈಯಲ್ಲೊಂದು ಕೋಲು
ತುಂಡು ಪಂಚೆ ಸರಳ ಉಡುಗೆ
ಮುಖದ ತುಂಬ ಮಗುವಿನಂಥ ಹೂ ನಗೆ
ಕೋಟ್ಯಾನುಕೋಟಿ ಭಾರತೀಯರು
ಹೆಜ್ಜೆಗೂಡಿಸಿದರು ನಿಮ್ಮೊಂದಿಗೆ
ಛಲ ಬಿಡದ ಹೋರಾಟದಿಂದ ಬೆಳಗಿದೆ ಸ್ವಾತಂತ್ರ್ಯ ದೀವಿಗೆ
ಆದೆ ನೀನು ವಿಶ್ವವಂದ್ಯ ರಾಷ್ಟ್ರಪಿತ
ಭಾರತಾಂಬೆ ಸಂಕೋಲೆ ಬಿಡಿಸಲು ಸವ೯ಸಂಗ ಪರಿತ್ಯಾಗ ಮಾಡಿದ ವೀರ ಸುತ, ಶಾಂತಿ ದೂತ
ದೇಶ ಇಬ್ಭಾಗಕೆ ಒಪ್ಪಿಗೆಯಿತ್ತ ಆ ಘಳಿಗೆ
ಶಾಂತಿ ಸೂತ್ರ ಒಪ್ಪಿತವಾಗಲಿಲ್ಲ
ಕ್ರಾಂತಿಕಾರಿಗಳಿಗೆ
1948 ಜನವರಿ 30ರ ದಿನ ಬಲಿಯಾದಿರಿ ಘೋಡ್ಸೆ ಗುಂಡಿನೇಟಿಗೆ
ತತ್ತರಿಸುತ್ತಿದೆ ದೇಶ ಇಂದಿಗೂ......
- ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ