ಬಿಸಿರಕ್ತದ ಉರುಪಿನಲಿ
ತಪ್ಪು ಒಪ್ಪಿನ ತಿಳಿಯದಲಿ
ಹೊದಿದ್ದೆ ದಾರಿ ಮಾಡಿದ್ದೆ ಹಾದಿ
ಅಂತ ಹಾಳಾದ ಜೀವನದಲಿ
ದಂಪತಿಗಳ ನುಡುವಿನ ಸರಸ
ಬದುಕಲು ತೊರೆಯಬೇಕು ವಿರಸ
ತಿಳಿದು ಬಾಳಿದರೆ ಸುಖ ಸಂಸಾರ
ಆಗಲಾರದು ದುಃಖಗಳ ಸಾಹಸ
ಇರುವುದು ತಲೆಯ ತುಂಬ ಶಕ್ತಿ
ಕಣ್ಣತುಂಬ ಕನಸುಗಳ ಯುಕ್ತಿ
ನೀನಾಗಬೇಡ ಸೋಮಾರಿತನವು
ಸಾಧಿಸಿ ಜಯಿಸದೆ ಇಲ್ಲ ಮುಕ್ತಿ
ಹೊಟ್ಟೆ ಹಸಿವು ಮಾಡಿಸುವುದು ಕೆಲಸ
ಭಿಕ್ಷೆ ಬೇಡುವ ಬಾರದಿದ್ದರೆ ಗೆಲಸ
ಊರೂರು ತಿರುಗಿ ಕೊನೆಗೆ ಮಾಡುವನು
ಸಮಾಜಕ್ಕೆ ದೊಡ್ಡ ದೊಡ್ಡ ದುಃಖದ ಮೋಸ
ಮಗನ ಸೋಮಾರಿತನ ಅಪ್ಪನಿಗಿಡಿಸದು
ಅವನ್ನೆಲ್ಲ ಮಾಡುವ ಕಾರ್ಯ ಅಮ್ಮನಿಗಾಗದು
ಅವರೆಲ್ಲರೂ ಬೈದರೆಂದು ಅವನು ಊರುಬಿಟ್ಟು
ಸೂರಿಲ್ಲದೆ ಅಳುತ್ತಾ ಕುಳಿತ ನೆನೆ ನೆನೆದು
ಹಠದಲಿ ತಾನು ಊರು ಬಿಟ್ಟು ಪರಾರಿಯಾದ
ಚಿಂತೆಯಿಲ್ಲದೆ ಮದುವೆಯ ವಯಸ್ಸು ತಾನಾದ
ಸುಳ್ಳುಗಳ ಹೇಳಿಕೆಯಲ್ಲಿಯೇ ಮದುವೆಯಾಗಿ
ದುಃಖಿಸುವನು ನಿತ್ಯ ಮಾಡಿದ ತಪ್ಪು ನೆನದ
- ಕುಡಗುಂಟಿ ಗವಿಸಿದ್ದಪ್ಪ,
ಜೀವಶಾಸ್ತ್ರ ಉಪನ್ಯಾಸಕರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ