ಚಂದದ ವದನ
ಗಂಧದ ಬಣ್ಣ
ಕಂದನೆ ನೀನೇ ಸುಂದರವು |
ಅಂದದ ನುಡಿಯು
ನಂದಿಯ ನಡೆಯು
ನಂದನ ನಮ್ಮಯ ಬಂಧನವು||೧||
ಕೋಟನು ಹಾಕಿ
ಪೇಟವ ತೊಟ್ಟು
ನೋಟದಿ ಚಾರ್ಲಿಯ ಹೋಲುವನು |
ಚೋಟನೆ ಹುಡುಗ
ನೋಟನು ಹಿಡಿದು
ಹೋಟೆಲು ಹಾದಿಯ ಹಿಡಿಯುವನು ||೨||
ಚಿಕ್ಕನೆ ನಡಿಗೆ
ಚೊಕ್ಕನೆ ಮಾತು
ಪಕ್ಕನೆ ನಗಿಸುತ ನಲಿಯುವನು|
ಚಕ್ಕುಲಿ ತಂದು
ಪಕ್ಕದಲಿರುವ
ಮಕ್ಕಳ ಜೊತೆಯಲಿ ತಿನ್ನುವನು ||೩||
ನಮ್ಮನೆ ಕಂದ
ಸುಮ್ಮನೆ ಕುಳಿತು
ಬಿಮ್ಮನೆ ಚಿತ್ರವ ಬಿಡಿಸುವನು|
ಗಮ್ಮನೆ ಬೋಂಡ
ಒಮ್ಮೆಗೆ ತಿಂದು
ಅಮ್ಮಗೆ ತೋರುತ ನಿಂದಿಹನು ||೪||
✍️ ಹಾಲೇಶ್ ಕೆ. ಜಿ, ಶಿಕ್ಷಕರು.
ಚಳ್ಳಕೆರೆ ತಾಲ್ಲೂಕು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ