ಮನೆ ಇವುದು ಮಹಡಿಯಲಿ,
ಮನವಿಹುದು ಮೂಲೆಯಲಿ,
ಮಾತನಾಡಲು ಇಲ್ಲಿ ಜೊತೆಎಲ್ಲಿ...
ದಿಕ್ಕು ದಿಕ್ಕುಗಳು ಕಾಲಿ,
ಮರೆತೆ ಹೋಯಿತು ಜೋಲಿ,
ಮನಕೆ ಕಟ್ಟಿರಲು ಬೇಲಿ,
ಯಂತ್ರಗಳೆ ತುಂಬಿಹವು ಅಲ್ಲಿ ಇಲ್ಲಿ...
ಸುತ್ತಲೂ ರಾಕ್ಷಸ ಗೋಡೆ
ಪ್ರತಿದ್ವನಿಸೊ ಬೀಡೆ,
ಒಮ್ಮೆ ಇತ್ತ ನೋಡೆ,
ಮೌನವ ಮುರಿದು ಮಾತನಾಡೆ..
ಹೇಳು ನಿನ್ನೊಳಗಿನ ಕತೆ
ಕಾಡದಿರಲಿ ಮತ್ತದೇ ವ್ಯಥೆ....
ಎಲ್ಲಿ ಹೋದರು ಅವರು,
ನಮ್ಮವರು ತಮ್ಮವರು,
ಎಲ್ಲಾ ತಿಳಿದ ಹೆಮ್ಮರವೆ ದೂರವಿರಲು
ಎಲ್ಲಿ ಹೋಗಲಿ ನಾ ಅವರ ಹುಡುಕಿ ತರಲು...
ತುಂಬಿಹವು ಮನೆ ತುಂಬ ಉದ್ದಗಲದಾ ಕೋಣೆ,
ಅದರೊಳಗೆ ಮನೆ ಮಂದಿ ಉಳಿದದ್ದೆ ಕಾಣೆ,
ಕೂಡಿಡಲು ಹೊರ ಹೋದರು
ಬಹು ಸರಳ ವಿಷಯ,
ಗುಣಿಸಲೇ ಇಲ್ಲ ಮನೆಜನರ ಖುಷಿಯಾ....
ದೇವರಿದ್ದರೆ ಸಾಕೆ,
ಜನರೂ ಸೇರಬೇಕೆ ,
ಜಾತ್ರೆ ಮೆರವಣಿಗೆ ಸಾಗೋಕೆ...
ಹೂವು ಇದ್ದರೆ ಸಾಕೆ ,
ಜೇನ ಬಳಗವು ಬೇಕೆ ,
ಸಿಹಿ ತುಪ್ಪದ ಚಪ್ಪರವ ಕಟ್ಟೋಕೆ ......
ಸದ್ದು ಗದ್ದಲವಿಲ್ಲದೇ ಗೆದ್ದಲು ಹರಡಿರಲು,
ಮಾಡುವರಾರು ಮನೆಯ ಸರಿಸಿ ಗುಡಿಸಿ...
ವಂಶವೃಕ್ಷವು ಮುರಿದು ಕಟ್ಟಿಗೆಯಾಗಿ ಬಿದ್ದಿರಲು,
ಅಳುತಿಹಳು ಅಂಗಳದಿ ನಿಂತ ತುಳಸಿ.....
- ಸೌಜನ್ಯ ದಾಸನಕೊಡಿಗೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ