ನೀಲ ಬಯಲು ಶಾಂತಿ ತೀರವು
ದೂರದ ಬೆಟ್ಟದ ಆಸೆ ಅಗಾದವು
ನೆರಳಿನ ಮರವು ಸಾಧನೆಯ ಯಶೋಗಾಥೆಯು
ನಸು ತಂಪಿನ ತುಸು ವಾತಾವರಣವು.
ಸೂರ್ಯನ ಮುಳುಗಿಪನು ಪಶ್ಚಿಮ ದಿಕ್ಕಿಗೆ
ಪಶ್ಚಿಮ ದಿಕ್ಕಿನ ಮರದ ನೆರಳು
ಜೀವನದ ನೋವನು ತಿಳಿಸಿಹುದು
ಎನ್ನ ಮನವು ಪ್ರಶಾಂತದಿ ಶಾಂತಿಯ ಬಯಸಿಹುದು.
ಮರಳ ರಾಶಿಯ ಮೇಲಿನ ಜೀವನವು
ಹೆಜ್ಜೆ ಗುರುತು ಮೂಡುವವರೆಗೆ
ಕೊನೆಗೆ ಜೀವನದ ಹಾದಿ ಸಾಗಿಪುದು
ದೂರದ ಬೆಟ್ಟದ ಕಡೆಗೆ.
ಸಾಗರದ ಅಲೆಯ ತೀರವ ತಲುಪಿದರೆ
ಮರಳ ಮೇಲಿನ ಗುರುತು ಮಾಯ
ಹೊಸ ಜೀವನದ ಹಾದಿಗೆ ಇದುವೇ ಆಮಂತ್ರಣ
ದೂರದ ಬೆಟ್ಟವ ಸೇರುವ ಬಯಕೆ ಹುಚ್ಚು ಮನದಲಿ
ನೂರು ಭಾವವು ಶಾಂತಿ ಧ್ಯಾನದಿ ಮನದ ಆನಂದವು.
ಸಾಧನೆಯ ದಾರಿಗೆ ತಾಳ್ಮೆಯೇ ಒಲವು
ಪ್ರಕೃತಿಯ ಮರ್ಮ ಅರಿತರೆ ಅದೇ ಜ್ಞಾನವು
ಮುಳುಗುವ ಸೂರ್ಯ ಮುಳುಗಿ ಹೋಗಲಿ
ನವ ಮನ್ವಂತರದ ನವ ರವಿ ಮೂಡಿಬರಲಿ
ಎನ್ನ ಜೀವನವು ಗುರಿಯ ಮುಟ್ಟಲಿ.
- ರಾಕೇಶ್.ಎಂ, ಶಿಕ್ಷಕರು, ಬೆಂಗಳೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ