ಭಾನುವಾರ, ಏಪ್ರಿಲ್ 17, 2022

ಆತ್ಮವಿಶ್ವಾಸವೇ ಶ್ವಾಸವಾಗಿರಲಿ (ಕವಿತೆ) - ಶಾಂತಾರಾಮ ಮರಾಠಿ ಶಿರಸಿ, ಉತ್ತರ ಕನ್ನಡ.

ಆತ್ಮವಿಶ್ವಾಸವಿರಲಿ,
ಆತ್ಮವಿಶ್ವಾಸವೇ ಶ್ವಾಸವಾಗಿರಲಿ,
ಮನವು ಕುಗ್ಗದಿರಲಿ-ಕೊರಗದಿರಲಿ-ಸುಮ್ಮನೆ ಕೂರದಿರಲಿ,
ಆತ್ಮವಿಶ್ವಾಸದ ಚಿಲುಮೆ ಜ್ವಾಲಾಮುಖಿಯಂತೆ ಚಿಮ್ಮುತಿರಲಿ..

ನೋಡುವವರು ನೋಡಲಿ-ನೋಡಿ ಚುಚ್ಚುಮಾತುಗಳ ಆಡುತಿರಲಿ,
ನಿಮ್ಮಆಟದ ಕಡೆ ಗಮನವಿರಲಿ ಎಲ್ಲಿಯೂ ನಿಲ್ಲದೇ ನಡೆಯುತಿರಲಿ,
ಸೋಲಲಿ-ಸಾವಿರಸಲ ಸೋಲಲಿ-ಆ ಸೋಲೇ ಒಪ್ಪಿಕೊಳ್ಳಲಿ,
ನಿನಗೆ ಶರಣಾಗಿ ಗೆಲುವು ತಂದು ಕೊಡುವ ಮಾತು ನೀಡಲಿ..

ಮುನ್ನುಗ್ಗುವ ಸಾಗರದಲೆಗಳಂತ ಎಡಬಿಡದ ರಭಸವಿರಲಿ,
ನೋವು-ಕಷ್ಟಗಳು,ಅಡೆ-ತಡೆಗಳು ಬರಲಿ-ಅದ್ಯಾವುದಕ್ಕೂ ಹೆದರದಿರಲಿ,
ಸೋಲನುಂಡು ನಜ್ಜುಗುಜ್ಜಾಗಿ ನೆಪ್ಪಿ ನುಚ್ಚುನೂರಾದರೂ ಮನವು ಅಂಜದೇ ಚಂಚಲವಾಗದಿರಲಿ,
ಸಾಗುವ ದಾರಿಯಲಿ ಗುರಿಯೆಡೆಗೆ ಸಾಗುವ ಎಚ್ಚರಿಕೆಯ ಏಕಾಗ್ರತೆಯಿರಲಿ,
ಯಾರನ್ನೂ ನಂಬದಿರಿ-ನಂಬಿ ಮೋಸಹೋಗದಿರಿ -ನಮ್ಮ ಮೇಲೆ ನಮಗೆ ಅಚಲವಾದ ನಂಬಿಕೆಯಿರಲಿ,
ಆತ್ಮವಿಶ್ವಾಸದಿ ನಾವು ನಡೆದದ್ದೆ ದಾರಿಯಾಗಲಿ-ನಮ್ಮನಡಿಗೆ ದಾರಿದೀಪವಾಗಲಿ,
ಆತ್ಮವಿಶ್ವಾಸದ ದಾರಿದೀಪದ ಬೆಳಕಿನಿಂದ ಎಲ್ಲರೂ ನಮ್ಮಂತೆ ಸಾಗುತಿರಲಿ.

- ಶಾಂತಾರಾಮ ಮರಾಠಿ ಶಿರಸಿ, ಉತ್ತರ ಕನ್ನಡ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...