ಸಿದ್ಧಗಂಗೆಯ ಸಿದ್ಧ ಶರಣರೇ ಸಿದ್ಧರಾಗಿ ಮರಳಿ ಬರಲು ಈ ಧರೆಗೆ
ಕಾದು ಕಾದು ಕುಳಿತ ನಿನ್ನ ಕರುಳಬಳ್ಳಿಯ ಕಣ್ಣೀರಿನ ಕರೆಗೆ....!
ನೀ ಹೊತ್ತಿಸಿದ ಆ ದಾಸೋಹದ ಬೆಂಕಿ ಸದಾ ಉರಿಯುತ್ತಿರಲಿ ಗುರುವರೆಯನೇ
ನಿನ್ನ ನಂಬಿದ ಕಂದಮ್ಮಗಳ ಪಾಲಿಗೆ ಅನ್ನ ಅಕ್ಷರವ ನೀಡಿ ಸಲುಹಿದ ಆಶ್ರಯದತಾನೇ....!
ಸಹಸ್ರಾರು ಬಡಮಕ್ಕಳ ಬದುಕಿಗೆ ಬೆಳಕು ನೀಡಿದ ಹೊಂಬೆಳಕಿನ ಚಂದ್ರಮನು ನೀನು
ಮಾನವೀಯತೆಯಲಿ ದಾನ ಧರ್ಮವನು ಮೊಳಗಿಸಿದ ನಡೆದಾಡುವ ದೇವನು ನೀನು....!
ಎತ್ತ ನೋಡಿದರೂ ನಿನ್ನದೇ ನಾಮವು ಕೇಳುತಿದೆ ನಾಡತುಂಬೆಲ್ಲಾ
ಎತ್ತ ಸುಳಿದರೂ ಸೂಸುತಿದೆ ನಿನ್ನ ಅಕ್ಷರಧಾಮದ ಸುವಾಸನೆಯು ಧರೆಯ ತುಂಬೆಲ್ಲಾ.....!
ಅಕ್ಷರವ ಕಲಿಸಿ ಅಜ್ಞಾನವ ಅಳಿಸಿ ಸುಜ್ಞಾನವ ಬೆಳಗಿಸಿದ ಶಿವಶರಣನು ನೀನು
ಗುರು ಲಿಂಗ ಜಂಗಮದ ಸಾರದಲಿ ಬೆರೆತ ಸಿದ್ಧಗಂಗೆಯ ತ್ರಿವಿಧ ದಾಸೋಹಿಯು ನೀನು....!
ಓಗೊಟ್ಟು ಮರಳುವೆಯಾ ಒಂದೊಮ್ಮೆ ನೀ ಕೂಡಿಟ್ಟ ಸಂಪತ್ತಿನ ಸಿರಿಗೆ
ಸಮೃದ್ಧಿ ಸಮಾನತೆಯ ಸಾಮ್ರಾಜ್ಯವಾದ ಸಿದ್ಧಗಂಗೆಯ ನಿಮ್ಮ ಆಸ್ಥಾನದ ಕಡೆಗೆ....!
- ಹನುಮಂತ ದಾಸರ ಹೊಗರನಾಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ತುಂಬಾ ಧನ್ಯವಾದಗಳು ಪತ್ರಿಕಾ ಬಳಗಕ್ಕೆ 🙏🙏
ಪ್ರತ್ಯುತ್ತರಅಳಿಸಿ