ಕನಸಿನ ಲೋಕದ ಗೆಳತಿ ಆ ನಿನ್ನ ಕಣ್ಣೋಟ
ಆಡಿಸುತಿದೆ ಮಿಂಚು ಮಿಂಚಿನ ಬಗೆ ಬಗೆಯ ಆಟ
ಕಾದಿಹೆನು ಚೆಲುವಿ ಕನಸಿನ ಬುತ್ತಿ ಹೊತ್ತು
ಹೊತ್ತೋತ್ತಿಗೆ ಸೇರುತ್ತಿಲ್ಲ ಹೊಟ್ಟೆಗೆ ಒಂದು ತುತ್ತು
ಕ್ಷಣ ಕ್ಷಣವೂ ನಿನ್ನ ಧ್ಯಾನದಲ್ಲಿ ನನ್ನ ಚಿತ್ತ
ಮನದ ಮಹಲಿನಲಿ ಕಂಗೊಳಿಸುತಿದೆ ನಿನ್ನ ಚಿತ್ರ
ಮುದ್ದು ಮನವೇ ಮನಮಿಡಿತವ ಹೇಳದೆ ಇರಲಾರೆ
ಎಷ್ಟಿದ್ದಾವ ಅಷ್ಟು ಜನ್ಮ ನೀನಿರದೆ ನಾ ಬದುಕಲಾರೆ
ತಡೆಯಲಾಗದೆ ಬರೆದಿರುವೇ ಪ್ರೇಮದೋಲೆ
ಒಪ್ಪಿಕೊ ಪ್ರೇಮನಿವೇದನೆಯ ಓ ನನ್ನ ನಲ್ಲೆ
ಮನಸಾರೆ ಒಪ್ಪಿ ಬಾ ಬಿಟ್ಟಿರನು ಒಂದು ಕ್ಷಣ
ನನ್ನೆದೆಯ ರಾಜ್ಯಕ್ಕೆ ರಾಣಿಯಾಗು ನೀ ಅನುಕ್ಷಣ
ಜೀವನ ಪುಸ್ತಕದ ಪುಟದಲಿ ಬರೆದಿಡೋಣ
ಸುವರ್ಣಾಕ್ಷರದಲಿ ಹಾಕುವ ಜೊತೆಯಾಗಿ ಅಂಕಿತವ
ತೇಲಾಡುವ ಅಮೃತ ಸುಧೆಯಲಿ ಮಿಂದೇಳುತಾ
ಜಗವೇ ಗೆದ್ದಂತೆ ನೀನಿದ್ದರೆ ಸ್ವರ್ಗವೇ ಧರೆಗಿಳಿದಂತೆ
- ಶಿವಾ ಮದಭಾಂವಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ