ಗೆಳತಿ
ಮೌನದೊಂದಿಗೆ
ಒಂಟಿಪಯಣದಲಿ
ನಾ ಸಾಗುತ್ತಿದ್ದೆ
ಒಂಟಿ ಪಯಣದಲಿ
ಏನೋ ಸದ್ದಾಯಿತು
ದಡಬಡಿಸಿ ತಿರುಗಿ ನೋಡಿದೆ
ಪಯಣದ ಹಿಂದೆ
ನನ್ನ ಹೆಜ್ಜೆಯ
ಗುರುತಿನೊಂದಿಗೆ ನೀ
ಹೆಜ್ಜೆ ಬೆರೆಸಿ ನಡೆಯುತ್ತಿದ್ದೆ
ಒಂಟಿ ಪಯಣದಲಿ
ದೊರೆತ ಅನುಭವ ನೀನು
ಮರೆಯಲು ಹೇಗೆ ಸಾಧ್ಯ
ಮರೆಯುವುದಾದರೆ
ನನ್ನ ಅಂತ್ಯದೊಂದಿಗೆ
ಅದರ ಅಂತ್ಯವೂ...
- ಹೆಚ್.ಹೆಚ್.ಮೈಲಾರಿ
ಮಂಗಾಪುರ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9113036287 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ