ಶುಕ್ರವಾರ, ಸೆಪ್ಟೆಂಬರ್ 16, 2022

ಗುರುವಿಗೆ ಶರಣಾಗತಿಯ ಶರಣು (ಕವಿತೆ) - ಅಶ್ವಿನಿ ಭೀ. ಬರಗಾಲಿ, ಗೋಕಾಕ.

ಶರಣೆಂದೆ ಗುರುವೇ ಶರಣು ನಿನಗೆ
ಶರಣಾಗತಿ ದೇವರಿಗಿಂತ ಮಿಗಿಲಾದವರಿಗೆ..!!

ಶಾಖ ಶಕ್ಯಗಳಾಟ ಸುಳ್ಳೆಂದು 
ಶಾಲೆಯನ್ನು ದೇವಾಲಯ ಮಾಡಿದವರಿಗೆ..!!

ಶಿಲೆಯಲ್ಲಿ ಕಲೆಯನ್ನು ಕೆತ್ತಿ
ಶಿಖರದೆತ್ತರಕ್ಕೆ ಬೆಳೆಸಿದವರಿಗೆ..!!

ಶೀಲ ಕುಶಲದಿಂದಿರಲು ತಿಳಿಹೇಳಿ
ಶೀಲ ಸುಶೀಲತೆಯ ಧಾರೆ ಎರೆದವರಿಗೆ..!!

ಶುದ್ಧ ಪರಿಶುದ್ಧ ಭಾವಗಳ ಮೂಡಿಸಿ
ಶುಭ್ರತೆಯ ಬೆಳಕು ನೀಡಿದವರಿಗೆ.!!

ಶೂನ್ಯದ ಜಗತ್ತನ್ನು ಅರ್ಥೈಸಿ
ಶೂನ್ಯತೆಯ ಭಾವವ ಬರಿದಾಗಿಸಿದವರಿಗೆ..!!

ಶೃಂಖಲೆಯ ಬಂಧ ಬಿಡಿಸಿ
ಶೃಂಗಾರದಿ ಚೆಂದಗೊಳಿಸಿದವರಿಗೆ..!!

ಶಲೆ ಇಲ್ಲವಾದರೇ ಜಗವೆಲ್ಲಿ
ಶೆಲೆಯ ನೆಲೆ ನೀವಾಗಿ ನಿಂತವರಿಗೆ..!!

ಶೇಷಾವೇಷನು ಕರ ಮುಗಿದ ನಿಮಗೆ
ಶೇಷ ಚೇತನದ ಒರತೆಯ ಭಾಗವಾಗಿಸಿದವರಿಗೆ..!!

ಶೈತ್ಯೋಪಚಾರ ಮಾಡುವೆವು ನಿಮಗೆ
ಶೈಕ್ಷಣಿಕ ಲೋಕದ ಹೆಮ್ಮೆಯ ದಿಗ್ಗಜರಾದವರಿಗೆ..!!

ಶೂರತೆಯ ಜ್ಞಾನವಿತ್ತು
ಶೂತ್ರದಾಸೆಯ ತೊರೆದು ನಿಂತವರಿಗೆ..!!

ಶೋಷಿತರನ್ನು ಹುರಿದುಂಬಿಸಿ
ಶೋಧಿಸಿ ಶುದ್ಧಿಸಿ ಜಯಮಾಲೆ ತೊಡಿಸಿದವರಿಗೆ..!!

ಶೌರ್ಯ ಪರಾಕ್ರಮಗಳ ಕಲಿಸಿ
ಶೂರತೆಯ ಒಲವ ಪಸರಿಸಿದವರಿಗೆ..!!

ಶಿವಶಂಕರ ರೂಪ ನೀವಾಗಿ
ಶಂಖನಾದದಿ ಜಗವ ಬೆಳಗಿಸಿವರಿಗೆ..!!

ಶಿಕ್ಷಣದ ಅಕ್ಷರವ ಕಲಿಸಿ
ಶಿಲೆಯ ಸುಶಿಕ್ಷತೆಯ ಮೊಳಗಿಸಿದವರಿಗೆ..!

ಶಿಲೆಯಾಗಿ ಅಂದು ಕಲೆಯಾಗಿ ಇಂದು
ಶರಣಾಗತಿಯ ಬಯಸಿಹೆವು ನಾವು ನಿಮ್ಮಿಂದ..!!

ಶರಣು ಶರಣು ಶರಣಾಗತಿ
ಶರಣಾಗತರಾಗಿರುವೆವು ನಮ್ಮೆಲ್ಲ ಗುರುಬಳಗಕ್ಕೆ....!!

ಶರಣಾಗತಿ ಇಂತಿ ನಿಮ್ಮ
ಮಾಸ್ತರನ‌ ಮಗಳು ಅಶ್ವಿನಿ.....!!

- ಅಶ್ವಿನಿ ಭೀ. ಬರಗಾಲಿ, ಗೋಕಾಕ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...