ಮಂಗಳವಾರ, ಸೆಪ್ಟೆಂಬರ್ 20, 2022

ನನ್ನ ಮೆಚ್ಚಿನ ವಿಷ್ಣುದಾದ (ಲೇಖನ) - ಮಾನಸ ಎಂ ಸೊರಬ.

ಕನ್ನಡ ಚಲನಚಿತ್ರ ಜಗತ್ತಿನ ತಾರೆಯಾಗಿ ದಶಕಗಳ ಕಾಲ ಮೆರೆದು ಇತಿಹಾಸ ಬರೆದ ಕನ್ನಡದ ಹೆಮ್ಮೆ ಅಪ್ಪಟ ಕನ್ನಡದ ಅಭಿಮಾನಿ ಕೋಟಿಗೊಬ್ಬ ವಿಷ್ಣುವರ್ಧನ್ ಸರ್ ಜನಿಸಿದ್ದು 1950 ಸೆಪ್ಟೆಂಬರ್ 18 ರಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ.ಕಲಾವಿದರು,ಸಂಭಾಷಣಾಕಾರರು,ಸಂಗೀತ ನಿರ್ದೇಶಕರಾದ ಹೆಚ್.ಎಲ್ .ನಾರಾಯಣ ರಾವ್ ಮತ್ತು  ಕಾಮಾಕ್ಷಮ್ಮ ದಂಪತಿಯ ಹೆಮ್ಮೆಯ ಮಗನಾಗಿ ಹುಟ್ಟಿದ ನಮ್ಮ ದಾದ ಸಂಪತ್ ಕುಮಾರ್ ತಮ್ಮ  ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ,ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ಮುಗಿಸಿದರು.ತಮ್ಮ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಮುಗಿಸಿದರು.1955 ರಲ್ಲಿ ತಮ್ಮ ಸಿನಿ ಪಯಣ ಆರಂಭಿಸಿ ಬಾಲ ನಟನಾಗಿ ನಟಿಸಿ ತಮ್ಮ ಅಭಿನಯದ ಮೊದಲ ಹೆಜ್ಜೆ ಇಟ್ಟು ಯಶಸ್ಸು ಕಂಡರು. ನಂತರ ರಾಷ್ಟ್ರ ಪ್ರಶಸ್ತಿ ಪಡೆದ  ಎಸ್ ಎಲ್ ಭೈರಪ್ಪ ಅವರ ಕಾದಂಬರಿಯಾಧಾರಿತ  ವಂಶವೃಕ್ಷ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು.ಕನ್ನಡದ ಭೀಷ್ಮ ಪುಟ್ಟಣ್ಣ ಕಣಗಾಲ್ ಅವರ ಮೂಲಕ 1972 ರಲ್ಲಿ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾ  ಮೂಲಕ ಒಬ್ಬ ಹೊಸ ನಾಯಕ ನಟನ ಪರಿಚಯವಾಯಿತು ಅದೇ ಇವತ್ತಿಗೂ ನೆನಪಾಗುವ ನಾಗರ ಹಾವು ಸಿನಿಮಾ.ಈ ಸಿನಿಮಾದ  ಮೂಲಕ ಪುಟ್ಟಣ್ಣ ಕಣಗಾಲ್ ಅವರು ಸಂಪತ್ ಕುಮಾರ್ ಅವರ ಹೆಸರನ್ನು ವಿಷ್ಣುವರ್ಧನ್ ಆಗಿ ಹೆಸರು ಇಟ್ಟುರು ಇದರಿಂದ ಹೊಸ  ಹೆಸರಿನ ಜನನವಾಯಿತು. ಬೆಂಗಳೂರಿನ ಮೂರು ಚಿತ್ರ ಮಂದಿರದಲ್ಲಿ ನೂರು ದಿನ ಪೂರೈಸಿದ ಮೊದಲ ಸಿನಿಮಾ ಎಂಬ ದಾಖಲೆ ಬರೆದು ರಾಷ್ಟ್ರ ಪ್ರಶಸ್ತಿ ಲಭಿಸಿತು.1979 ರಲ್ಲಿ ಸಾಹಸ ಸಿಂಹ ಎಂಬ ಬಿರುದು ಬಂತು ನಂತರ ಸಾಹಸ ಸಿಂಹ ಎಂಬ ಚಿತ್ರದಲ್ಲಿ ನಟಿಸಿದರು. 1980ರ ದಶಕದಲ್ಲಿ ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರವಾಹಿಯಲ್ಲಿ ನಟಿಸಿ ಕಿರುತೆರೆಯಲ್ಲಿ ಮಿಂಚಿದರು.    1975 ರಲ್ಲಿ ನಟಿ ಭಾರತಿ ಅವರನ್ನು ವಿವಾಹವಾದರು. ಕೀರ್ತಿ ಹಾಗೂ ಚಂದನ ಇಬ್ಬರು ಪುತ್ರಿಯರು ಇದ್ದಾರೆ.ನಟ ಅನಿರುದ್ಧ ಅವರ ಅಳಿಯ..ಡಾ .ರಾಜಕುಮಾರ್ ಅವರ ಜೊತೆ ಗಂಧದಗುಡಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿಗಳಿಸಿತು.1974 ರಲ್ಲಿ ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ನಟಿಸಿದರು ಇದು ಸೂಪರ್ ಹಿಟ್ ಅಗಿ ಗಲ್ಲಾ ಪೆಟ್ಟಿಗೆ ದಾಖಲೆ ಮುರಿಯಿತು. ನಂತರ ಉದಯೋನ್ಮುಖ ನಟ ರಜನಿಕಾಂತ್ ಅವರ ಜೊತೆ ಅಭಿನಯಿಸಿದರು.1978 ರ ಲ್ಲಿ ರೊಮ್ಯಾಂಟಿಕ್ ಹಿಟ್ ಹೊಂಬಿಸಿಲು ಚಿತ್ರದಲ್ಲಿ ನಟಿಸಿದರು ಅದು ಅತ್ಯುತ್ತಮ ನಟನೆಗಾಗಿ ಮೊದಲ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತು. ಶ್ರೀನಾಥ್ ಮತ್ತು ಲಕ್ಷ್ಮಿ ಅವರ ಜೊತೆ ನಟಿಸಿದ್ದಾರೆ.70 ರ ದಶಕದಲ್ಲಿ ಅವರ ಪತ್ನಿ ಭಾರತಿ ಅವರ ಜೊತೆ ನಟಿಸಿದ್ದಾರೆ. ದಶಕದ ಪ್ರಸಿದ್ಧ ನಟಿಯರಾದ ಆರತಿ ಮತ್ತು ಮಂಜುಳ ಅವರ ಜೊತೆ ನಟಿಸಿದ್ದಾರೆ.1984 ರಲ್ಲಿ  ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ ನಟಿ ಹೇಮಾ ಮಾಲಿನಿ ಜೊತೆ ಅಭಿನಯಿಸಿದ್ದಾರೆ.ಅದೇ ವರ್ಷ ಕನ್ನಡದಲ್ಲಿ ಸುಹಾಸಿನಿ ಮಣಿರತ್ನಂ ಅವರ ಜೊತೆ ಬಂಧನ ಸಿನಿಮಾದ ಮೂಲಕ ಹೊಸ ಚರಿತ್ರೆಯನ್ನು ಬರೆದರು ಮತ್ತು 2ನೇ ರಾಜ್ಯ ಪ್ರಶಸ್ತಿ ಲಭಿಸಿತು.ಮುಂದೆ ತಮಿಳು ಚಿತ್ರ ಮಾಡಿ ಸೈ ಎನಿಸಿಕೊಂಡರು.ನಂತರ ಅವರ ಹಲವು ಸಿನಿಮಾ ಬ್ಲಾಕ್ ಬಸ್ಟರ್ ಸೂಪರ್ ಹಿಟ್ ಆದವು.ಶಾಸ್ತ್ರೀಯ ಗಾಯಕನಾಗಿ ಮಲಯ ಮಾರುತ ಸಿನಿಮಾದಲ್ಲಿ ನಟಿಸಿ ಒಳ್ಳೆಯ ಮೆಚ್ಚುಗೆಗಳಿಸಿದರು.  1990 ರಲ್ಲಿ ಮುತ್ತಿನ ಹಾರ ಮತ್ತು ವೀರಪ್ಪನಾಯಕ ಸಿನಿಮಾ ದೇಶ ಭಕ್ತಿಯ ಶ್ರೇಷ್ಠ ಸಿನಿಮಾಗಳಾಗಿವೆ.ಮುತ್ತಿನ ಹಾರ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತು.ಮಲಯಾಳಂ, ಹಿಂದಿ,ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ನಮ್ಮ ದಾದ ಹಲವು ಸೂಪರ್ ಹಿಟ್ ಸಿನಿಮಾದಿಂದ ಹಲವು ಪ್ರಶಸ್ತಿಗಳನ್ನ ಮುಡಿಗೆರಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿಯರಾದ ಸುಹಾಸಿನಿ ಮಣಿರತ್ನಂ, ಮಾಧವಿ,ಜಯಪ್ರದಾ,ಆರತಿ, ಲಕ್ಷ್ಮಿ, ಭವ್ಯ,ರೂಪಿಣಿ, ಮಂಜುಳಾ,ಸಿತಾರ, ಸೌಂದರ್ಯಾ ,ಪ್ರೇಮಾ, ರೋಜಾ, ಹೀಗೆ ಹಲವು ನಟಿಯರ ಜೊತೆ ನಟಿಸಿದ್ದಾರೆ.ಅಕ್ಷಯ್ ಕುಮಾರ್ ಜೊತೆ ನಟಿಸಿದ್ದಾರೆ.ಕದಂಬ, ಕೋಟಿಗೊಬ್ಬ,ವಿಷ್ಣು ವಿಜಯ, ದಿಗ್ಗಜರು,ಲೈಯನ್ ಗಜಪತಿ ರಾವ್,ಸುಪ್ರಭಾತ,ನಿನೆಲ್ಲೋ ನಾನಲ್ಲಿ ಯಜಮಾನ,ಹಬ್ಬ, ಸೂರ್ಯವಂಶ,ಅಪ್ಪಾಜಿ, ಸೂರಪ್ಪ,ಕಳ್ಳಕುಳ್ಳ,ಸೊಸೆ ತಂದ ಸೌಭಾಗ್ಯ,ಚಿನ್ನ ನಿನ್ನ ಮುದ್ದಾಡುವೆ,ಸಹೋದರರ ಸವಾಲ್,ಕಿಟ್ಟು ಪುಟ್ಟು,ಗುರು ಶಿಷ್ಯರು,ಜಿಮ್ಮಿ ಗಲ್ಲು,ನೀ ಬರೆದ ಕಾದಂಬರಿ,ನೀ ತಂದ ಕಾಣಿಕೆ, ಈ ಜೀವ ನಿನಗಾಗಿ,ಜಯ ಸಿಂಹ,ದೇವ,ಹೃದಯ ಗೀತೆ, ಮತ್ತೇ ಹಾಡಿತು ಕೋಗಿಲೆ, ನೀನು ನಕ್ಕರೆ ಹಾಲು ಸಕ್ಕರೆ, ಮಣಿಕಂಠನ ಮಹಿಮೆ, ಹಿಮಪಾತ ಲಾಲಿ,ಯಾರೇ ನೀನು ಚೆಲುವೆ,ಪರ್ವ,ರಾಜ ನರಸಿಂಹ,ಹೃದಯವಂತ, ಸಾಹುಕಾರ,ಜೇಷ್ಠ, ವಿಷ್ಣುಸೇನಾ,ಏಕದಂತ,ಕ್ಷಣ ಕ್ಷಣ,ವರ್ಷ,ಅಣ್ಣ ಅತ್ತಿಗೆ, ಸಿರಿವಂತ,ಸಿಂಹಾದ್ರಿಯ ಸಿಂಹ, ಮಾತಾಡು ಮಾತಾಡು ಮಲ್ಲಿಗೆ, ಮೋಜುಗಾರ ಸೊಗಸುಗಾರ, ಹಾಲುಂಡ ತವರು, ಜೀವನದಿ, ಆಪ್ತ ಮಿತ್ರ,ಆಪ್ತ ರಕ್ಷಕ, ಬೂತಯ್ಯನ ಮಗ ಅಯ್ಯು, ಬಂಧನ,ಕರ್ಣ,ಈ ಬಂಧನ,ಹೀಗೆ 220 ಸಿನಿಮಾಗಳ ಮೂಲಕ ಚಿತ್ರ ರಂಗದಲ್ಲಿ ಅವರದ್ದೇ ಆದ ಇತಿಹಾಸ ಬರೆದಿದ್ದಾರೆ.ನಟನೆ ಅಲ್ಲದೆ ಗಾಯಕರಾಗಿ ಹಲವು ಸಿನಿಮಾದಲ್ಲಿ ಹಾಡಿದ್ದಾರೆ, ಹಲವು ಭಕ್ತಿ ಗೀತೆ ಸಹ ಹಾಡಿದ್ದಾರೆ.ನಿರ್ಮಾಪಕರಾಗಿ ಕಥೆಗಾರರಾಗಿ ವೃತ್ತಿ ಜೀವನ ನಡೆಸಿದ್ದಾರೆ.ವಿಷ್ಣು ಸರ್ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ,ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗೌರವ ಡಾಕ್ಟರೇಟ್,ಇಂದಿರಾ ಪ್ರತಿಷ್ಠಾನ ರಾಷ್ಟ್ರೀಯ ಪ್ರಶಸ್ತಿ. ಕರ್ನಾಟಕ ರಾಜ್ಯ ಪ್ರಶಸ್ತಿ, ಫಿಲ್ಮ್ ಫೇರ್ ವಿಶೇಷ ಪ್ರಶಸ್ತಿ,ಫಿಲ್ಮ್ ಫೇರ್ ಜೀವಮಾನ ಸಾಧನೆ ಪ್ರಶಸ್ತಿ, ಕೇರಳದ ಸಾಂಸ್ಕೃತಿಕ  ಮತ್ತು ಕಲಾ ಪ್ರಶಸ್ತಿ.ಹೀಗೆ ಹಲವು ಪ್ರಶಸ್ತಿ ಲಭಿಸಿತು.ಇವರ ಸ್ಮರಣಾರ್ಥ ಭಾರತ ಸರ್ಕಾರ  2013 ರಲ್ಲಿ ಅಂಚೆ ಚೀಟಿ ಹೊರ ತಂದಿತು. ಇವರನ್ನು ಭಾರತೀಯ ಚಿತ್ರರಂಗದ ಫೀನಿಕ್ಸ್ ಎನ್ನುವರು.ಕರ್ನಾಟಕ ಜನಪ್ರಿಯ ಸಂಸ್ಕೃತಿಕ ಐಕಾನ್ ಗಳಲ್ಲಿ ಒಬ್ಬರು ನಮ್ಮ ದಾದ.ಬೆಂಗಳೂರಿನ ಬನಶಂಕರಿ ದೇವಸ್ಥಾನದಿಂದ  ಕೆಂಗೇರಿಯವರೆಗೆ 14.5km ರಸ್ತೆಯ ಹೆಸರನ್ನು ವಿಷ್ಣುವರ್ಧನ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ ಒಬ್ಬ ನಟನ ಹೆಸರು ಇಟ್ಟ ಎಷ್ಯದ ಅತಿ ಉದ್ದದ ರಸ್ತೆ ಇದಾಗಿದೆ.ಇವರ ಕಲಾತ್ಮಕ ಸೇವೆ ಸಮಾಜಿಕ ಕಾರ್ಯ ಭಾರತೀಯ ಚಿತ್ರರಂಗಕ್ಕೆ ಇವರು ಮಾಡಿದ ಸೇವೆಯ ಸ್ಮರಣಾರ್ಥವಾಗಿ ರಾಜ್ಯ ಸರ್ಕಾರವು ತನ್ನ ವಾರ್ಷಿಕ ಜೀವಮಾನ ಸಾಧನೆ ಪ್ರಶಸ್ತಿಯನ್ನು.ಡಾ. ವಿಷ್ಣುವರ್ದನ್ ಪ್ರಶಸ್ತಿ ಎಂದು ಕರ್ನಾಟಕ ರಾಜ್ಯ ನಾಮಕರಣ ಮಾಡಿದೆ.ಸ್ನೇಹಲೋಕ ಎಂಬ ಸಂಘಟನೆ ನಿರ್ಮಿಸಿ ಹಲವು ಸಮಾಜಿಕ ಕಾರ್ಯ ಮಾಡಿದ್ದಾರೆ.ಮಂಡ್ಯದ ಮೇಲುಕೋಟೆ ದತ್ತು ಪಡೆದು ಅಭಿವುದ್ಧಿ ಮಾಡಿದ್ದಾರೆ.ಕನ್ನಡ ಪರ ಹೋರಾಟಗಾರರು ಹೌದು. ವಿಷ್ಣು ಮಾಡಿದ ತೆರೆ ಮರೆಯ ಧಾನ,ಸಹಾಯ ಹಲವು. ಭೂಮಿ ಬೆಳಗುವ ಸೂರ್ಯ ಚಂದ್ರರನ್ನು ಬಿಡದ ಗ್ರಹಣ ಎಂಬಂತೆ ಇವರಿಗೂ ಬದುಕಿನಲ್ಲಿ ಹಲವು ನೋವು,ಕಷ್ಟ ಸವಾಲುಗಳು ಇದ್ದವು ಇದನೆಲ್ಲಾ ಮೆಟ್ಟಿ ನಿಂತು ಇಂದಿನ ಯುವ ಪೀಳಿಗೆಗೆ ನಿಜಕ್ಕೂ ಸ್ಫೂರ್ತಿ ಆಗಿದ್ದಾರೆ.ಒಟ್ಟಾರೆ ಹೇಳುವುದಾದರೆ ಈಡಿ ಚಿತ್ರ ಜಗತ್ತಿನಲ್ಲಿ ವಿಷ್ಣುದಾದ ಹೆಸರು ಅಜರಾಮರ. ವೃತ್ತಿ ಜೀವನ, ಬದುಕಿನ ತತ್ವ,ಆಧ್ಯತ್ಮ  ಜೀವನ ನಮಗೆಲ್ಲ ಸ್ಫೂರ್ತಿ.ಬದುಕಿನ ಉದ್ದಕ್ಕೂ ಸಾಧನೆ ಮತ್ತು ಹೆಸರು ಮಾಡಿದ ನಮ್ಮ ವಿಷ್ಣುದಾದ ಅವರ ವ್ಯಕ್ತಿತ್ವ ನಿಜಕ್ಕೂ  ನಮಗೆ ಮಾರ್ಗದರ್ಶಕ.ಅವರ ಸರಳತೆ,ಅವರ ನಿಷ್ಕಲ್ಮಶ ಮುಖದ ನಗು ಇಂದಿಗೂ ಮರೆಯಲಾಗದು.ವಿಷ್ಣು ಎಂದರೇ ಒಂದು ಮುಗ್ಧ ಭಾವನಾತ್ಮಕ ಬಂಧ ಕನ್ನಡಿಗರ ಮನದಲ್ಲಿ ಎಂದಿಗೂ ಶಾಶ್ವತ.59 ವರ್ಷ ನಮ್ಮೊಂದಿಗೆ ಇದ್ದ ಕಲಾಸಂತ ಡಿಸೆಂಬರ್ 30 2009 ನಮ್ಮನ್ನ ಅಗಲಿದರು.ಅಂದು ಇಡೀ ಚಿತ್ರರಂಗ ಹಾಗೂ ಅಭಿಮಾನಿಗಳ ಮನದಲ್ಲಿ ನೀರವ ಮೌನ ಆವರಿಸಿತ್ತು. ಅಭಿಮಾನಿಗಳ ಪಾಲಿಗೆ ದೇವರ ಸ್ವರೂಪ ಆಗಿದ್ದ ಪಂಚಭಾಷಾ ನಟ ವಿಷ್ಣು ದಾದ ನಮ್ಮ  ಹೃದಯಮಾನಸದಲ್ಲಿ ವಿರಾಜಿಸಿದ  ಆಂಗ್ರಿ ಯಂಗ್ ಮ್ಯಾನ್.ವಂಶವೃಕ್ಷದ ಸಂಪತ್ತು ಬೂತಯ್ಯನ ಮಗ ಅಯ್ಯು ನಾಗರಹಾವುವಿನ ರಾಮಾಚಾರಿ ಕರ್ನಾಟಕದ ಸುಪುತ್ರ ನಮ್ಮ ಚಂದನವನದ ಯಜಮಾನ ಮರೆಯದ ಮಾಣಿಕ್ಯ ಎಂದೂ ನಮ್ಮ ಮನದಲ್ಲಿ ಕೋಟಿಗೊಬ್ಬ  ಗುಣದಲ್ಲಿ ಹೃದಯವಂತ ಮಾಮತೆಯಲ್ಲಿ ಸಿರಿವಂತ ಕನ್ನಡ ಮನೆ ಮನೆಯ ಸಾಹಸ ಸಿಂಹ ಎಂದೂ ಮರೆಯದ ಸಿಂಹಾದ್ರಿಯ ಸಿಂಹ ಕನ್ನಡಿಗರಿಗೆ ಆಪ್ತಮಿತ್ರ ವರ್ಷದ ಅಣ್ಣ ಸ್ಕೂಲ್ ಮಾಸ್ಟರ್ ಕದಂಬದ ಅಪ್ಪ  ದಿಗ್ಗಜರು ಜೀವದ ಗೆಳೆಯ ಮೋಜುಗಾರ ಸೊಗಸುಗಾರ ವಿಷ್ಣುಸೇನಾದ ಗುರು ಮುತ್ತಿನ ಹಾರ ವೀರಪ್ಪನಾಯಕನ ದೇಶ ಭಕ್ತ ಹೀಗೆ ಎಲ್ಲಾ ವಯೋಮಾನದವರು ನೋಡಬಹುದಾದ ಸಿನಿಮಾ ಮಾಡಿ ಜನ ಮೆಚ್ಚಿದ ನಾಯಕ ನಟರಾಗಿ  ಅಭಿಮಾನಿಗಳ ರಂಜಿಸಿದ  ರಾಜಾನರಸಿಂಹ. ವಿಷ್ಣುದಾದರ ವ್ಯಕ್ತಿತ್ವ ಎಲ್ಲರಿಗೂ ಪ್ರೇರಣೆ ಹಾಗೂ ಸ್ಫೂರ್ತಿ. ಮತ್ತೇ ಕರುನಾಡಿನಲ್ಲಿ ಹುಟ್ಟಿ ಬನ್ನಿ ಎಂದು ಆಶಿಸುವ ಅಭಿಮಾನಿಗಳಲ್ಲಿ ನಾನು ಒಬ್ಬಳು ನನ್ನ ಮೆಚ್ಚಿನ ವಿಷ್ಣುದಾದರ ಹುಟ್ಟಿದ ದಿನದಂದು ಅವರ ಬಗ್ಗೆ ಹೆಮ್ಮೆ ಇಂದ ಬರೆದಿರುವೆ.ಹುಟ್ಟು ಹಬ್ಬದ ಶುಭಾಶಯಗಳು ದಾದ.

- ಮಾನಸ ಎಂ ಸೊರಬ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...