ಬದುಕಿನ ಪಯಣ ನಿರಂತರ,
ಆಶ್ಚರ್ಯಕರ-ಆಹ್ಲಾದಕರ,
ಸಡಗರ-ಖುಷಿಯ ಆನಂದ ಸಾಗರ,
ತಿರುವುಗಳು ಕ್ಲಿಷ್ಟಕರ,
ಹೊಡೆತಗಳು ಘೋರಾತಿಘೋರ-ಭೀಕರ,
ಬದುಕು ಕಷ್ಟಕರ-ಬಲು ವಿಚಿತ್ರ,
ಅನುಭವಗಳು ಸಾವಿರ- ಸಾವಿರ,
ಬತ್ತದ ಆಸೆ -ಆಕಾಂಕ್ಷೆಗಳು ಭಯಂಕರ,
ಸ್ಥಿತಿ-ಗತಿಗಳು,ಸಂದರ್ಭಗಳು ಬಲು ಅಪಾಯಕಾರ,
ಕೊನೆಕಾಣದ ಬಯಕೆಗಳ ಸಾಲು-ಸಾಲು ಅಲೆಗಳ ಅಬ್ಬರ,
ಬದುಕೆಂಬುದು ಮುಗಿಯದ ಸಮರ...
ಭರದಿ ಸಾಗುವ ಬದುಕು,
ಕಂಡಿದ್ದೆಲ್ಲ ಬೇಕು-ಇನ್ನೂ ಬೇಕು,
ದೇಹ ಸವೆದರೂ ಬಗೆಹರಿಯದ ಸಮಸ್ಯೆಗಳು ಮನದಿ ಹೊಕ್ಕು,
ಈ ಬದುಕು ಅನಿಸುವುದು ಆಗಾಗ ಮುರುಕು,
ಅದಕ್ಕೂ-ಇದಕ್ಕೂ ಹೊಂದಿಕೊಳ್ಳಬೇಕು ಪ್ರತೀ ಸಂದರ್ಭಕ್ಕೂ,
ನಿಜಕ್ಕೂ ಆರಕ್ಕೇರದ-ಮೂರಕ್ಕಿಳಿಯದ ಬದುಕು,
ಹೀಗೆಕೆ ಈ ಬದುಕು-ಎಲ್ಲದಕ್ಕೂ ಕಾಂಚಾಣವಿರಬೇಕು...
ಬದುಕು ಮುನ್ನಡೆಯಲೇಬೇಕು,
ಸಿಕ್ಕಷ್ಟು ಸಾಕು ಎನ್ನಲಾರರು ಇನ್ನೂ ಹಣಬೇಕು,
ಇದ್ದದ್ದರಲ್ಲೇ ನೆಮ್ಮದಿಯ ಹುಡುಕು,
ಬದುಕಿಗಾಗಿ ಬದುಕು,
ಈ ಬದುಕನ್ನು ಪ್ರೀತಿಸುತ್ತಾ ಬದುಕು...
- ಶಾಂತಾರಾಮ ಶಿರಸಿ,
ಉತ್ತರ ಕನ್ನಡ..
7676106273
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ